ಕನ್ನಡಪ್ರಭ ವಾರ್ತೆ ಬೆಳಗಾವಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ರಾಹ್ಮಣರ ಪಿತ್ರಾರ್ಜಿತ ಜಮೀನುಗಳನ್ನು ಅಕ್ರಮವಾಗಿ ಕಬಳಿಸಿರುವ ಗಂಭೀರ ಪ್ರಕರಣಗಳಲ್ಲಿ ಭಾಗಿಯಾದ ಕಬಳಿಕೆದಾರರು ಹಾಗೂ ಆ ದಾಖಲೆಗಳ ಆಧಾರದ ಮೇಲೆ ಭೂ ನೋಂದಣಿ ನಡೆಸಿದ ಸಬ್-ರಿಜಿಸ್ಟ್ರಾರ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೆಳಗಾವಿ ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ್ ಜಿಲ್ಲಾಡಳಿತವನ್ನು ಆಗ್ರಹಿಸಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ರಾಹ್ಮಣರ ಪಿತ್ರಾರ್ಜಿತ ಜಮೀನುಗಳನ್ನು ಅಕ್ರಮವಾಗಿ ಕಬಳಿಸಿರುವ ಗಂಭೀರ ಪ್ರಕರಣಗಳಲ್ಲಿ ಭಾಗಿಯಾದ ಕಬಳಿಕೆದಾರರು ಹಾಗೂ ಆ ದಾಖಲೆಗಳ ಆಧಾರದ ಮೇಲೆ ಭೂ ನೋಂದಣಿ ನಡೆಸಿದ ಸಬ್-ರಿಜಿಸ್ಟ್ರಾರ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೆಳಗಾವಿ ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ್ ಜಿಲ್ಲಾಡಳಿತವನ್ನು ಆಗ್ರಹಿಸಿದೆ.ಟ್ರಸ್ಟ್ ಅಧ್ಯಕ್ಷ ರಾಮ ಭಂಡಾರೆ ಮತ್ತು ಉಪಾಧ್ಯಕ್ಷ ಭರತ ದೇಶಪಾಂಡೆ ನೇತೃತ್ವದಲ್ಲಿ ನಿಯೋಗವು ಬುಧವಾರ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ನಕಲಿ ದಾಖಲೆ ಆಧಾರದಲ್ಲಿ ನಡೆದ ಎಲ್ಲಾ ಭೂ ನೋಂದಣಿಗಳ ಸಮಗ್ರ ತನಿಖೆ ನಡೆಸಬೇಕು. ಸಂಬಂಧಿತ ಸಬ್-ರಿಜಿಸ್ಟಾರ್‌ಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು ಎನ್ನುವುದು ಸೇರಿದಂತೆ ಸಮಾಜದ ಪೀಡಿತ ಕುಟುಂಬಗಳಿಗೆ ಪೊಲೀಸ್ ರಕ್ಷಣೆ ಒದಗಿಸಿ, ಅವರ ಹಕ್ಕುಗಳನ್ನು ಕಾನೂನುಬದ್ಧವಾಗಿ ಪುನರ್ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಭವಿಷ್ಯದಲ್ಲಿ ಇಂತಹ ಅಕ್ರಮಗಳು ನಡೆಯದಂತೆ ಭೂ ನೋಂದಣಿ ಪ್ರಕ್ರಿಯೆಯಲ್ಲಿ ಕಟ್ಟುನಿಟ್ಟಿನ ಪರಿಶೀಲನಾ ವ್ಯವಸ್ಥೆ ಜಾರಿಗೆ ತರಬೇಕು. ಬೆಳಗಾವಿ ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಪೀಳಿಗೆಯಿಂದ ಪೀಳಿಗೆಗೆ ಬಂದಿರುವ ಬ್ರಾಹ್ಮಣ ಸಮುದಾಯದ ಪಿತ್ರಾರ್ಜಿತ ಆಸ್ತಿಗಳ ಮೇಲೆ ಸಂಘಟಿತ ರೀತಿಯಲ್ಲಿ ನಕಲಿ ಹಕ್ಕುಪತ್ರ ಸೃಷ್ಟಿ, ಕೃತಕ ಸಹಿ, ಸತ್ತವರನ್ನು ಜೀವಂತವಾಗಿ ತೋರಿಸುವ ದಾಖಲೆಗಳ ಮೂಲಕ ಭೂ ವರ್ಗಾವಣೆ ನಡೆದಿರುವ ಆರೋಪಗಳು ಕೇಳಿಬಂದಿದ್ದು, ಇದು ಸಮುದಾಯದಲ್ಲಿ ಆತಂಕವನ್ನು ಸೃಷ್ಟಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.ಟ್ರಸ್ಟ್ ಖಜಾಂಚಿ ರಮೇಶ ಕುಲಕರ್ಣಿ, ಜಂಟಿ ಕಾರ್ಯದರ್ಶಿ ವಿಲಾಸ ಜೋಶಿ, ಆಡಳಿತ ಮಂಡಳಿ ಸದಸ್ಯೆ ಅನುಶ್ರೀ ದೇಶಪಾಂಡೆ, ಬಿ.ಆರ್.ಪಾಟೀಲ, ಜಿ.ಡಿ.ಜೋಶಿ, ಅಶೋಕ ದೇಶಪಾಂಡೆ, ಪ್ರಸಾದ ಕಾರಜೋಳ, ಡಾ.ಕುಲಕರ್ಣಿ, ಅನಿಲ ಕುಲಕರ್ಣಿ ಮೊದಲಾದವರು ಉಪಸ್ಥಿತರಿದ್ದರು.
------ಕೋಟ್.....
ನಕಲಿ ದಾಖಲೆಗಳ ಮೂಲಕ ಭೂ ಕಬಳಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈಗಾಗಲೇ ಹುಕ್ಕೇರಿಯಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ. ಅದೇ ರೀತಿ ಬೇರೆ ಬೇರೆ ತಾಲೂಕಿನಲ್ಲಿ ನಡೆದ ಇಂತಹ ಪ್ರಕರಣಗಳ ಬಗ್ಗೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ.ಮೊಹಮ್ಮದ ರೋಷನ್, ಜಿಲ್ಲಾಧಿಕಾರಿ, ಬೆಳಗಾವಿ.