ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ- ಎಂಜಿನರೇಗಾ ಹೆಸರನ್ನು ಮತ್ತು ಅದರಲ್ಲಿದ್ದ ಜನಪರ ಅಂಶಗಳನ್ನು ಬದಲಾಯಿಸಿ ವಿಬಿ - ಜಿ ರಾಮ್‌ ಜಿ ಎಂದು ಬದಲಾಯಿಸಿದ್ದನ್ನು ವಿರೋಧಿಸಿ, ಶುಕ್ರವಾರ ಉಡುಪಿ ಕಾಂಗ್ರೆಸ್ ನಗರದ ಬೈಲೂರು ವಾರ್ಡಿನ ಮಿಷನ್ ಆಸ್ಪತ್ರೆಯ ವೃತ್ತದ ಬಳಿ ಪ್ರತಿಭಟನೆ ಆಯೋಜಿಸಲಾಗಿತ್ತು .

ಉಡುಪಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ- ಎಂಜಿನರೇಗಾ ಹೆಸರನ್ನು ಮತ್ತು ಅದರಲ್ಲಿದ್ದ ಜನಪರ ಅಂಶಗಳನ್ನು ಬದಲಾಯಿಸಿ ವಿಬಿ - ಜಿ ರಾಮ್‌ ಜಿ ಎಂದು ಬದಲಾಯಿಸಿದ್ದನ್ನು ವಿರೋಧಿಸಿ, ಶುಕ್ರವಾರ ಉಡುಪಿ ಕಾಂಗ್ರೆಸ್ ನಗರದ ಬೈಲೂರು ವಾರ್ಡಿನ ಮಿಷನ್ ಆಸ್ಪತ್ರೆಯ ವೃತ್ತದ ಬಳಿ ಪ್ರತಿಭಟನೆ ಆಯೋಜಿಸಲಾಗಿತ್ತು. ಈ ಪ್ರತಿಭಟನೆಯಲ್ಲಿ ಮುಖ್ಯ ಭಾಷಣಕಾರರಾಗಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ಅವರು ಮಾತನಾಡುತ್ತಾ, ಕೇಂದ್ರ ಬಿಜೆಪಿ ಸರ್ಕಾರವು ವಿಬಿ - ಜಿ ರಾಮ್‌ ಜಿ ಮೂಲಕ ಕಾರ್ಮಿಕರ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರ ನಡೆಸಿದೆ. ಆದ್ದರಿಂದ ಕೇಂದ್ರ ಸರ್ಕಾರದ ಹಿಂದಿನ ಉದ್ಯೋಗ ಖಾತರಿ ಯೋಜನೆಯನ್ನು ಮರು ಜಾರಿಗೊಳಿಸುವಂತೆ ಆಗ್ರಹಿಸಿದರು, ಪ್ರಸ್ತುತ ಜನವಿರೋಧಿ ನೀತಿ ವಿಬಿ - ಜಿ ರಾಮ್‌ ಜಿಯನ್ನು ಕೈಬಿಡಬೇಕೆಂದು ಆಗ್ರಹಿಸಿ ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ಖಂಡಿಸಿದರು. ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಅವರು ಮಾತನಾಡುತ್ತಾ, ಕೇಂದ್ರ ಬಿಜೆಪಿ ಸರ್ಕಾರದ ಈ ರೀತಿಯ ಹುನ್ನಾರವನ್ನು ಜನಸಾಮಾನ್ಯರು ಸಹಿಸುವುದಿಲ್ಲ. ಕಾಂಗ್ರೆಸ್ ಪಕ್ಷವು ಬಡವರ ಪರವಿರುವ ಪಕ್ಷ. ಜನಸಾಮಾನ್ಯರಿಗೆ ನೆಮ್ಮದಿಯ ಬದುಕನ್ನು ಕಲ್ಪಿಸುವುದಕ್ಕಾಗಿ ಇಂತಹ ಜನಪರ ಯೋಜನೆಯನ್ನು ಜಾರಿಗೆ ತಂದಿದೆ. ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಯಾವುದೇ ಕಾರಣಕ್ಕೂ ಕೈಬಿಡಬಾರದು ಎಂದು ಕೇಂದ್ರ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ, ವಾರ್ಡಿನ ಪ್ರಮುಖರಾದ ಮ್ಯಾಕ್ಸಿಮ್ ಡಿಸೋಜಾ, ಕೃಷ್ಣಾನಂದ ಪೈ, ಅನಂತಕೃಷ್ಣ ಪ್ರಭು, ಮಲ್ಲೇಶ್, ಲಿಖಿತ್, ಗೀತಾ ರವಿ, ಶಹನವಾಝ್, ವಿನಯ ಕರ್ಕಡಾ, ಶುಶಾಂತ್ ಸಾಲಿನ್ಸ್, ಶೋಭಾ ಭಂಡಾರಿ, ಶಾಂತಾ, ರಮೇಶ್ ರಘುರಾಮ್ ಮೆಂಡನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.