ಸಾರಾಂಶ
ಜೀವನದಲ್ಲಿ ಕಷ್ಟದಲ್ಲಿದ್ದವರು, ಕೊರಗುವವರು ವಯಸ್ಸಿದ್ದಾಗಲೇ ವಯಸ್ಸಾದವರಂತೆ ಕಾಣುತ್ತಾರೆ. ಇರುವುದರಲ್ಲಿ ಖುಷಿ, ತೃಪ್ತಿಪಟ್ಟುಕೊಳ್ಳುವವರು ಎಷ್ಟೇ ವಯಸ್ಸಾದರೂ ವಯಸ್ಸಾದವರಂತೆ ಕಾಣುವುದಿಲ್ಲ. ಹಾಸಿಗೆ ಇದ್ದಷದಟು ಕಾಲು ಚಾಚಿದರೆ ಯೌವನ, ಮುಖದಲ್ಲಿ ತೇಜಸ್ಸು ಕಾಣುತ್ತದೆ. ಇದು ನಿವೃತ್ತಿ ಹೊಂದಿರುವ ಶಿಕ್ಷಕ ಕುಮಾರ್ ಅವರ ಮುಖದಲ್ಲಿ ಕಾಣುತ್ತಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಹರವು ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಎಸ್.ಜೆ.ಕುಮಾರ್ ಅವರಿಗೆ ಸಹೋದ್ಯೋಗಿಗಳು ಮತ್ತು ಗ್ರಾಮಸ್ಥರು ಶನಿವಾರ ಆತ್ಮೀಯವಾಗಿ ಬೀಳ್ಕೊಟ್ಟರು.ಬಿಇಒ ರವಿಕುಮಾರ್ ಮಾತನಾಡಿ, ಆಸ್ತಿ, ಅಂತಸ್ತು, ಒಡವೆ ಜೀವನದಲ್ಲಿ ಉಪಯೋಗಕ್ಕೆ ಬರಲಾರದು. ಎರಡು ಅಕ್ಷರ ಕಡಿಮೆ ಕಲಿತರು ಸದ್ಬುದ್ಧಿ ಹೊಂದಿರುವ ಮಕ್ಕಳು ಹುಟ್ಟಿದರೆ ಜೀವನದಲ್ಲಿ ನೆಮ್ಮದಿಯಿಂದ ಬದುಕಬಹುದು ಎಂದರು.
ಜೀವನದಲ್ಲಿ ಕಷ್ಟದಲ್ಲಿದ್ದವರು, ಕೊರಗುವವರು ವಯಸ್ಸಿದ್ದಾಗಲೇ ವಯಸ್ಸಾದವರಂತೆ ಕಾಣುತ್ತಾರೆ. ಇರುವುದರಲ್ಲಿ ಖುಷಿ, ತೃಪ್ತಿಪಟ್ಟುಕೊಳ್ಳುವವರು ಎಷ್ಟೇ ವಯಸ್ಸಾದರೂ ವಯಸ್ಸಾದವರಂತೆ ಕಾಣುವುದಿಲ್ಲ. ಹಾಸಿಗೆ ಇದ್ದಷದಟು ಕಾಲು ಚಾಚಿದರೆ ಯೌವನ, ಮುಖದಲ್ಲಿ ತೇಜಸ್ಸು ಕಾಣುತ್ತದೆ. ಇದು ನಿವೃತ್ತಿ ಹೊಂದಿರುವ ಶಿಕ್ಷಕ ಕುಮಾರ್ ಅವರ ಮುಖದಲ್ಲಿ ಕಾಣುತ್ತಿದೆ ಎಂದರು.ಶಿಕ್ಷಕರಾಗಿ ಮಕ್ಕಳನ್ನು ಮಾದರಿಯನ್ನಾಗಿ ತಯಾರು ಮಾಡಿದರೆ ದೇವರು ನಮಗೂ ಒಳ್ಳೆಯದ್ದನೆ ಮಾಡುತ್ತಾನೆ. ಬದುಕಿರುವಾಗ ಕೆಟ್ಟ ಕೆಲಸಗಳನ್ನು ಮಾಡಿದರೆ ಭಗವಂತ ನಮಗೆ ಭೂಮಿಯಲ್ಲೇ ನರಕ ತೋರಿಸುತ್ತಾನೆ. ನಾವು ಯಾವ ರೀತಿ ಬದುಕಿತ್ತೇವೆ ಅದೇ ರೀತಿ ಮಕ್ಕಳು ತಮ್ಮ ನಡೆತೆ ರೂಪಿಸಿಕೊಳ್ಳುತ್ತಾರೆ. ಅದಕ್ಕಾಗಿ ತಂದೆ-ತಾಯಿಗಳು, ಶಿಕ್ಷಕರು ಉತ್ತಮ ನಡಾವಳಿಕೆ ರೂಪಿಸಿಕೊಂಡರೆ ಸಮಾಜಕ್ಕೆ ಮಾದರಿಯಾಗಬಹುದು. ಅದನ್ನು ನೋಡಿ ನಮ್ಮ ವಿದ್ಯಾರ್ಥಿಗಳನ್ನು ನಮ್ಮ ನಡೆ ಕಲಿಯುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಪ್ರಕಾಶ್, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಮಾಜಿ ಅಧ್ಯಕ್ಷ ಎಸ್.ಪರಮೇಶ್, ಶಿಕ್ಷಕರಾದ ಧನಂಜಯ, ಶಿವಣ್ಣ, ಪಲ್ಲವಿ, ಅಶ್ವಿನಿ, ಎಚ್.ಡಿ.ಸ್ವಾಮಿ ಇತರರು ಇದ್ದರು.