ಸಾರಾಂಶ
ಮದ್ದೂರು ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಉನ್ನತ ಮಟ್ಟದ ಫಲಿತಾಂಶ ಬರಬೇಕೆಂಬ ಹಂಬಲದಲ್ಲಿ ಮಕ್ಕಳಿಗಳಿಗೆ ವಿಶೇಷ ತರಗತಿ ಜೊತೆಗೆ ಕಾರ್ಯಾಗಾರ ಹಮ್ಮಿಕೊಳ್ಳುವ ಜೊತೆಗೆ ತಾಲೂಕು ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆಯಲು ನಿರಂತರವಾಗಿ ಶ್ರಮಿಸಿದ ಕೀರ್ತಿ ಸಿ.ಎಚ್.ಕಾಳೀರಯ್ಯ ಅವರದಾಗಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಚ್.ಕಾಳೀರಯ್ಯ ಅವರನ್ನು ಖಾಸಗಿ ಶಾಲೆಗಳ ಒಕ್ಕೂಟದಿಂದ ಅಭಿನಂದಿಸಲಾಯಿತು.ಪಟ್ಟಣದ ಶಿವಪುರದ ಶ್ರೀವೆಂಕಟೇಶ್ವರ ರೆಸಿಡೆನ್ಸಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕಾಳೀರಯ್ಯ ದಂಪತಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಒಕ್ಕೂಟದ ಗೌರವಾಧ್ಯಕ್ಷ ಸಿ.ನಾಗೇಗೌಡ ಮಾತನಾಡಿ, ಕಾಳಿರಯ್ಯ ಬಿಇಒ ಆಗಿ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿ ಜೊತೆಗೆ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಉನ್ನತೀಕರಣಕ್ಕೆ ಹೆಚ್ಚಿನ ಒತ್ತು ನೀಡಿದ್ದರು ಎಂದರು.ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಉನ್ನತ ಮಟ್ಟದ ಫಲಿತಾಂಶ ಬರಬೇಕೆಂಬ ಹಂಬಲದಲ್ಲಿ ಮಕ್ಕಳಿಗಳಿಗೆ ವಿಶೇಷ ತರಗತಿ ಜೊತೆಗೆ ಕಾರ್ಯಾಗಾರ ಹಮ್ಮಿಕೊಳ್ಳುವ ಜೊತೆಗೆ ತಾಲೂಕು ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆಯಲು ನಿರಂತರವಾಗಿ ಶ್ರಮಿಸಿದ ಕೀರ್ತಿ ಅವರದಾಗಿದೆ ಎಂದು ಬಣ್ಣಿಸಿದರು.
ಒಕ್ಕೂಟದ ಖಜಾಂಚಿ ಎಚ್.ಆರ್.ಅನಂತೇಗೌಡ ಮಾತನಾಡಿ, ಕಾಳೀರಯ್ಯರವರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಜೊತೆಗೆ ಸರ್ಕಾರಿ ಮತ್ತು ಅನುದಾನ ರಹಿತ ಶಿಕ್ಷಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು ಎಂದರು.ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಿ.ಹೆಚ್. ಕಾಳೀರಯ್ಯ, ಶಿಕ್ಷಣ ಇಲಾಖೆಯ ತಮ್ಮ ಸೇವೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಶಿಕ್ಷಕರು ಮತ್ತು ಖಾಸಗಿ ಶಾಲೆಗಳ ಒಕ್ಕೂಟದ ಮುಖ್ಯಸ್ಥರು ನೀಡಿದ ಸಹಕಾರ ಇಲಾಖೆ ನನ್ನ ಸೇವೆಯನ್ನು ಸಾರ್ಥಕ ಗೊಳಿಸಿದೆ ಎಂದು ಸ್ಪರಿಸಿದರು.
ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರ ಸಿದ್ದರಾಜು, ಗ್ಲೋಬಲ್ ಇಂಟರ್ ನ್ಯಾಷನಲ್ ಶಾಲೆ ಅಧ್ಯಕ್ಷ ಶಿವನಂಜಯ್ಯ ಮಾತನಾಡಿದರು. ಖಾಸಗಿ ಶಾಲೆಗಳ ಒಕ್ಕೂಟದ ಅರುಣ್, ಕಾರ್ಯದರ್ಶಿ ಜಗದೀಶ, ಪದಾಧಿಕಾರಿಗಳಾದ ನಳಂದ ವಿದ್ಯಾಸಂಸ್ಥೆ ರಾಮಕೃಷ್ಣ, ಎ.ಟಿ.ಬಲ್ಲೇಗೌಡ, ದಾಸೇಗೌಡ, ಜಿ.ಸಿ.ಶಿವಪ್ಪ, ರಮೇಶ, ಶಿವರಾಜು ,ಸಿದ್ದರಾಜು ಮತ್ತಿತರರು ಇದ್ದರು.