Congratulations to Nagaraj on his selection to the BESCOM Central Committee.
ಕನ್ನಡಪ್ರಭ ವಾರ್ತೆ ಚಳ್ಳಕೆರೆಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಿರಿಯೂರು ವಿಭಾಗಕ್ಕೆ ಆಯ್ಕೆಯಾದ ಚಳ್ಳಕೆರೆ ಬೆಸ್ಕಾಂನ ಹಿರಿಯ ಶ್ರೇಣಿ ಅಧಿಕಾರಿ ಸಿ.ನಾಗರಾಜು ಅವರನ್ನು ಇಲ್ಲಿನ ಬೆಸ್ಕಾಂ ವಿಭಾಗದ ನೌಕರರ ವರ್ಗದವರು ಅಭಿನಂದಿಸಿದರು.
ಬೆಸ್ಕಾಂ ಸಭಾಂಗಣದಲ್ಲಿ ನಡೆದ ಅಭಿನಂದನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಎಇಇ ಜಿ. ಶಿವಪ್ರಸಾದ್ ಹಿರಿಯೂರು ವಿಭಾಗದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನಮ್ಮೆಲ್ಲರಿಗೂ ಆತ್ಮೀಯ ಸಿ. ನಾಗರಾಜು ಆಯ್ಕೆಯಾಗಿರುವುದು ಸಂತಸ ತಂದಿದೆ.ಕಳೆದ ಹಲವಾರು ದಶಕಗಳಿಂದ ಹಲವಾರು ಕಾರ್ಯಕ್ರಮಗಳ ಮೂಲಕ ಜನಪ್ರಿಯರಾಗಿದ್ದಾರೆ. ವಿಶೇಷವಾಗಿ ಬೆಸ್ಕಾಂನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರ ಎಲ್ಲಾ ಸಮಸ್ಯೆಗೂ ಸಕರಾತ್ಮಕವಾಗಿ ಸ್ಪಂದಿಸುತ್ತಾರೆ. ಹಲವಾರು ಬಾರಿ ಬೆಸ್ಕಾಂ ವಿವಿಧ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಸಾಧಿಸಿದ್ದಾರೆ. ಈ ಬಾರಿ ನಮ್ಮ ಕಚೇರಿಯಿಂದ ಕೇಂದ್ರ ಕಾರ್ಯಕಾರಿ ಸಮಿತಿಗೆ ಆಯ್ಕೆಯಾಗಿರುವುದು ನಮ್ಮೆಲ್ಲರಿಗೂ ಸಂತಸ ವಿಷಯ. ಮುಂದಿನ ದಿನಗಳಲ್ಲಿ ಇವರ ಸೇವೆ ಹೆಚ್ಚಿನ ರೀತಿ ಎಲ್ಲರಿಗೂ ಲಭ್ಯವಾಗಲಿ. ನೂತನ ಜವಾಬ್ದಾರಿಯಲ್ಲಿ ನಾಗರಾಜು ಯಶಸ್ಸು ಸಾಧಿಸಲಿ ಎಂದು ಶುಭಹಾರೈಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಿ.ನಾಗರಾಜು, ಬೆಸ್ಕಾಂನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಿರಿಯೂರು ವಿಭಾಗದಿಂದ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ನಾವೆಲ್ಲರೂ ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ಕಚೇರಿಯಲ್ಲಿ ಅಧಿಕಾರಿಗಳು ಮತ್ತು ನೌಕರರ ವರ್ಗ ಯಾವುದೇ ಬೇದಬಾವವಿಲ್ಲದೆ ಎಲ್ಲಾ ಚಟುವಟಿಕೆಯಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಾ ಬಂದಿದ್ದೇವೆ. ನಿಮ್ಮೆಲ್ಲರ ಸಹಕಾರಿಂದ ಕೇಂದ್ರ ಸಮಿತಿಯಲ್ಲಿ ಸ್ಥಾನ ದೊರಕಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.ತಾಂತ್ರಿಕ ಇಂಜಿನಿಯರ್ ಡಿ.ದೇವರಾಜು, ಪ್ರಾಥಮಿಕ ಸಮಿತಿ ಅಧ್ಯಕ್ಷ ಧನಂಜಯ, ಬೆಸ್ಕಾಂ ಮಹಿಳಾ ಘಟಕದ ಅಧ್ಯಕ್ಷೆ ತಿಪ್ಪಮ್ಮ, ಕಾರ್ಯದರ್ಶಿ ಲಕ್ಷ್ಮಿದೇಸಾಯಿ, ಗಾಯಿತ್ರಿ, ಶಾಖಾ ಅಧಿಕಾರಿಗಳಾದ ಶಿವಕುಮಾರ್, ಮುದ್ದಾನಪ್ಪ, ಎಸ್.ಕುಮಾರ್, ರಮೇಶ್, ಹರೀಶ್ಕುಮಾರ್, ಸುರೇಶ್ಬಾಬು ಮುಂತಾದವರು ಭಾಗವಹಿಸಿದ್ದರು.
ಪೋಟೋ: ಚಳ್ಳಕೆರೆ ನಗರದ ಬೆಸ್ಕಾಂ ಕಚೇರಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದ ಸಿ.ನಾಗರಾಜರವರನ್ನು ಸನ್ಮಾನಿಸಲಾಯಿತು.