ಸಾರಾಂಶ
ಕರ್ನಾಟಕ ಕರಾವಳಿ ಜಿಲ್ಲೆಯಲ್ಲಿಯೇ ನಾದಸ್ವರ ವಾದನಕ್ಕೆ ಆಕಾಶವಾಣಿಯಿಂದ ಪ್ರಥಮ ಟಾಪ್ ಶ್ರೇಣಿ ಪಡೆದಿರುವ ವಿದ್ವಾನ್ ನಾಗೇಶ್ ಬಪ್ಪನಾಡು ಅವರ ಸಾಧನೆಯನ್ನು ಪುರಸ್ಕರಿಸಿ ಮೂಲ್ಕಿಯ ಬಪ್ಪನಾಡು ದೇವಸ್ಥಾನ ಮತ್ತು ಅಭಿಮಾನಿಗಳ ವತಿಯಿಂದ ದೇವಳದಲ್ಲಿ ಶ್ರೀ ದೇವಿಯ ಸನ್ನಿಧಿಯಲ್ಲಿ ವರಪ್ರಸಾದ ಅನುಗ್ರಹ ಹಾಗೂ ಗೌರವ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಕಠಿಣ ಪರಿಶ್ರಮದಿಂದ ಉನ್ನತ ಸ್ಥಾನಕ್ಕೆ ಏರಿದ ಸಾಧಕ ವಿದ್ವಾನ್ ನಾಗೇಶ್ ಬಪ್ಪನಾಡು ಸನ್ಮಾನಕ್ಕೆ ಅಭಿನಂದನಾರ್ಹರೆಂದು ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಹೇಳಿದರು.ಕರ್ನಾಟಕ ಕರಾವಳಿ ಜಿಲ್ಲೆಯಲ್ಲಿಯೇ ನಾದಸ್ವರ ವಾದನಕ್ಕೆ ಆಕಾಶವಾಣಿಯಿಂದ ಪ್ರಥಮ ಟಾಪ್ ಶ್ರೇಣಿ ಪಡೆದಿರುವ ವಿದ್ವಾನ್ ನಾಗೇಶ್ ಬಪ್ಪನಾಡು ಅವರ ಸಾಧನೆಯನ್ನು ಪುರಸ್ಕರಿಸಿ ಮೂಲ್ಕಿಯ ಬಪ್ಪನಾಡು ದೇವಸ್ಥಾನ ಮತ್ತು ಅಭಿಮಾನಿಗಳ ವತಿಯಿಂದ ದೇವಳದಲ್ಲಿ ಶ್ರೀ ದೇವಿಯ ಸನ್ನಿಧಿಯಲ್ಲಿ ವರಪ್ರಸಾದ ಅನುಗ್ರಹ ಹಾಗೂ ಗೌರವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕ್ಷೇತ್ರದ ಅರ್ಚಕ ನರಸಿಂಹ ಭಟ್, ಶ್ರೀಪತಿ ಉಪಾಧ್ಯಾಯ, ಆಶೀರ್ವಚನ ನೀಡಿದರು. ಮಾಜಿ ಸಚಿವ ಅಭಯ್ ಚಂದ್ರ ಜೈನ್, ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರ ಅರವಿಂದ ಪೂಂಜಾ ಕಾರ್ನಾಡ್, ಮೂಲ್ಕಿ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಅತುಲ್ ಕುಡ್ವ, ಕಿನ್ನಿಗೋಳಿಯ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಕಾರ್ಯನಿರ್ವಾಹಣಾಧಿಕಾರಿ ಶ್ವೇತಾ ಪಳ್ಳಿ, ಗೋಪಾಲಕೃಷ್ಣ ಉಪಾಧ್ಯಾಯ, ಚಂದ್ರಶೇಖರ ಸುವರ್ಣ, ಸುನಿಲ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.ಬಳಿಕ ನಾಗೇಶ್ ಬಪ್ಪನಾಡು ಅವರನ್ನು ಪತ್ನಿ ಸಮೇತ ಗೌರವಿಸಲಾಯಿತು. ಮಣಿಕೃಷ್ಣ ಅಕಾಡೆಮಿಯ ನಿತ್ಯಾನಂದರಾವ್ ಪ್ರಸ್ತಾವನೆಗೈದರು. ಸುನಿಲ್ ಆಳ್ವ ನಿರೂಪಿಸಿದರು.