ಹೋಟೆಲ್ ಮಾಲೀಕರಿಂದ ರಮೇಶ್ ಕಾಂಚನ್‌ಗೆ ಅಭಿನಂದನೆ

| Published : Dec 12 2024, 12:31 AM IST

ಸಾರಾಂಶ

ಉಡುಪಿ ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಕಚೇರಿಯಲ್ಲಿ ರಮೇಶ್‌ ಕಾಂಚನ್‌ ಅವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಜಿಲ್ಲಾ ಹೋಟೆಲ್ ಮಾಲೀಕರ ಸಂಘವು ಜಿಲ್ಲಾಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರ ನೇತೃತ್ವದಲ್ಲಿ ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ರಮೇಶ್ ಕಾಂಚನ್ ಅವರನ್ನು ಮಂಗಳವಾರ ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕಚೇರಿಯಲ್ಲಿ ಭೇಟಿಯಾಗಿ ಸನ್ಮಾನಿಸಿದರು.

ನಂತರ ಉಡುಪಿ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಸದಸ್ಯರು ಹೋಟೆಲ್ ನಡೆಸುವ ಬಗ್ಗೆ ತಾವು ಅನುಭವಿಸುತ್ತಿರುವ ಸಮಸ್ಯೆಗಳನ್ನು ರಮೇಶ್ ಕಾಂಚನ್ ಅವರಲ್ಲಿ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಉಪಾಧ್ಯಕ್ಷರಾದ ಲಕ್ಷ್ಮಣ್ ಜಿ. ನಾಯಕ್, ಎಮ್ ವಿಠ್ಠಲ್ ಪೈ, ಹರೀಶ್ ಹೆಗ್ಡೆ, ಕಾರ್ಯದರ್ಶಿ ಕೆ. ನಾಗೇಶ್ ಭಟ್ ಹಾಗೂ ಸದಸ್ಯರಾದ ರವಿ ಕುಮಾರ್, ತಲ್ಲೂರು ಶಿವಪ್ರಸಾದ್ ಶೆಟ್ಟಿ, ಚಂದ್ರಹಾಸ್ ಶೆಟ್ಟಿ, ಗೋಪಾಲ್ ಬಂಗೇರ, ಗಿರೀಶ್ ಶೇರಿಗಾರ್, ಸುದರ್ಶನ್ ತಂತ್ರಿ, ಸಂಘದ ವ್ಯವಸ್ಥಾಪಕರಾದ ಬಿ. ಅಶೋಕ್ ಪೈ ಹಾಗೂ ಮಧುಕರ್ ಮುದ್ರಾಡಿ ಅವರು ಉಪಸ್ಥಿತರಿದ್ದರು.