ನಿವೃತ್ತ ಯೋಧ ಶಿವಣ್ಣರಿಗೆ ಅಭಿನಂದನೆ

| Published : Jul 06 2025, 11:48 PM IST

ಸಾರಾಂಶ

ತೆರೆದ ವಾಹನದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಆಗಮಿಸಿದ ಯೋಧ ಶಿವಣ್ಣ ಅವರು ಗಾಂಧಿ ಪ್ರತಿಮೆ ಹಾಗೂ ರೂರಲ್ ಎಜುಕೇಶನ್ ಸೊಸೈಟಿಯ ಎಸ್ ಕರಿಯಪ್ಪ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.

ಕನಕಪುರ: ದೇಶದ ಗಡಿ ಕಾಯುವ ಯೋಧರು ದೇವರ ಸಮಾನ. ಅವರನ್ನು ಗೌರವಿಸುವುದು ನಮ್ಮೆಲ್ಲರ ಸೌಭಾಗ್ಯ ಎಂದು ಆರ್‌ಇಎಸ್ ಸಂಸ್ಥೆ ಅಧ್ಯಕ್ಷ ಶ್ರೀಕಂಠ ತಿಳಿಸಿದರು.

ದೇಶದ ವಿವಿಧ ಭಾಗಗಳಲ್ಲಿ ಸೈನಿಕನಾಗಿ 39 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿ ಹುಟ್ಟೂರಿಗೆ ಬಂದಂತಹ ಸೈನಿಕ ಎಸ್.ಶಿವಣ್ಣ ಅವರನ್ನು ಕನಕಪುರದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿ, ನಾಗರಿಕ ಗೌರವ ಸಲ್ಲಿಸಿ ಮಾತನಾಡಿದ ಅವರು, ಶಿವಣ್ಣ ಅವರು ತಮ್ಮ 21ನೇ ವಯಸ್ಸಿಗೆ ಸಿಆರ್‌ಪಿಎಫ್‌ಗೆ ಸೇರ್ಪಡೆಯಾಗಿ ಚೆನ್ನೈ, ಕಲ್ಕತ್ತಾ, ಪಂಜಾಬ್, ಶ್ರೀಲಂಕಾ, ಜಮ್ಮು ಮತ್ತು ಕಾಶ್ಮೀರ, ಕಾರ್ಗಿಲ್ ಮತ್ತು ಪಹಲ್ಗಾಮ್ ಶತ್ರುಗಳ ದಾಳಿ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿ ಜೂನ್ 30ರಂದು ಸೇವೆಯಿಂದ ನಿವೃತ್ತಿಯಾಗಿರುವುದು ಹೆಮ್ಮೆಯ ವಿಷಯ ಎಂದರು.

ತೆರೆದ ವಾಹನದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಆಗಮಿಸಿದ ಯೋಧ ಶಿವಣ್ಣ ಅವರು ಗಾಂಧಿ ಪ್ರತಿಮೆ ಹಾಗೂ ರೂರಲ್ ಎಜುಕೇಶನ್ ಸೊಸೈಟಿಯ ಎಸ್ ಕರಿಯಪ್ಪ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.

ಪ್ಯಾರಾ ಮಿಲಿಟರಿ ಅಸೋಸಿಯೇಷನ್ ಅಧ್ಯಕ್ಷ ರಾಜಪ್ಪ, ಉಪಾಧ್ಯಕ್ಷ ಬಸವರಾಜು.ಬಿ ಕಾರ್ಯದರ್ಶಿ ರಾಮಯ್ಯ.ಬಿ, ಖಜಾಂಚಿ ಸಿದ್ದಪ್ಪ, ಸಲಹೆಗಾರ ಓಂಕಾರೇಶ್ವರ ಪದಾಧಿಕಾರಿಗಳಾದ ನಂದೀಶ್, ಚಂದ್ರುಶೇಖರ್, ಉಮೇಶ್, ರಾಮಕೃಷ್ಣ, ರಾಮಚಂದ್ರಗೌಡ, ಆರ್ ಇ ಎಸ್ ಅಧ್ಯಕ್ಷ ಎಚ್.ಕೆ.ಶ್ರೀಕಂಠ, ನಿರ್ದೇಶಕ ಕೆ.ಬಿ.ನಾಗರಾಜು, ಸಂಘಟನೆಗಳ ಮುಖಂಡರಾದ ಜೈರಾಮು, ಗಬ್ಬಾಡಿ ಕಾಡೇಗೌಡ, ಭಾಸ್ಕರ್, ಕಬ್ಬಾಳೇಗೌಡ, ಮಲ್ಲಿಕಾರ್ಜುನ್ ಸೇರಿದಂತೆ ತಾಲೂಕಿನ ನಾಗರಿಕರು ಯೋಧ ಶಿವಣ್ಣಗೆ ಗೌರವ ಸೂಚಿಸಿದರು.