ಮುಂದಿನ ದಿನಗಳಲ್ಲಿ ಸಮುದಾಯದ ಅಭಿವೃದ್ಧಿಗೆ ಮತ್ತು ಸಂಘಟನೆಗೆ ಹೆಚ್ಚಿನ ಒತ್ತು ನೀಡುವುದಾಗಿ ಮತ್ತು ಕುಲಶಾಸ್ತ್ರ ಅಧ್ಯಯನ ಕೈಗೊಳ್ಳುವ ಜತೆಗೆ ಸಮುದಾಯದವರಿಗೆ ಮೀಸಲಾತಿ ಹೆಚ್ಚಳ ಮಾಡುವಂತೆ ಹೋರಾಟ ಕೈಗೊಳ್ಳುವುವುದು.

ಕನ್ನಡಪ್ರಭ ವಾರ್ತೆ ಮದ್ದೂರು

ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಸಂಘಟನೆ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಕದಲೂರು ಬಸವರಾಜು ಅವರನ್ನು ತಾಲೂಕು ಸಂಘಟನೆ ಪದಾಧಿಕಾರಿಗಳು ಅಭಿನಂದಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನೂತನ ರಾಜ್ಯ ಉಪಾಧ್ಯಕ್ಷ ಕದಲೂರು ಬಸವರಾಜು ಪದಾಧಿಕಾರಿಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಕಳೆದ 25 ವರ್ಷಗಳಿಂದಲೂ ಸಮುದಾಯದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿರುವ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಅವರು ಅತ್ತ್ಯುನ್ನತ ಸ್ಥಾನ ನೀಡಿದ್ದು, ಯಾವುದೇ ಚ್ಯುತಿ ಬಾರದಂತೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿವುದಾಗಿ ಹೇಳಿದರು.

ಮುಂದಿನ ದಿನಗಳಲ್ಲಿ ಸಮುದಾಯದ ಅಭಿವೃದ್ಧಿಗೆ ಮತ್ತು ಸಂಘಟನೆಗೆ ಹೆಚ್ಚಿನ ಒತ್ತು ನೀಡುವುದಾಗಿ ಮತ್ತು ಕುಲಶಾಸ್ತ್ರ ಅಧ್ಯಯನ ಕೈಗೊಳ್ಳುವ ಜತೆಗೆ ಸಮುದಾಯದವರಿಗೆ ಮೀಸಲಾತಿ ಹೆಚ್ಚಳ ಮಾಡುವಂತೆ ಹೋರಾಟ ಕೈಗೊಳ್ಳುವುದಾಗಿ ಹೇಳಿದರು.

ಈಗಾಗಲೇ ಆಡಳಿತ ನಡೆಸಿ ಸರ್ಕಾರಗಳು ತಮ್ಮ ಬೇಡಿಕೆ ಮತ್ತು ಹೋರಾಟಕ್ಕೆ ಸ್ಪಂದಿಸಿ ವಿಶ್ವಕರ್ಮ ಜಯಂತ್ಯುತ್ಸವ, ನಿಗಮ ಮಂಡಳಿ ಹಾಗೂ ಅಮರಶಿಲ್ಪಿ ಜಕಣಾಚಾರಿ ಕಾರ್ಯಕ್ರಮ ಅನುಷ್ಠಾನಗೊಳಿಸಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಮೀಸಲಾತಿ ಹೆಚ್ಚಳ ಮಾಡದಿದ್ದಲ್ಲಿ ಕೆ.ಪಿ.ನಂಜುಂಡಿ ಹಾಗೂ ಸಮುದಾಯದವರ ಜತೆಗೂಡಿ ಬೀದರ್‌ನಿಂದ ಬೆಂಗಳೂರಿನವರೆಗೆ ಬೃಹತ್ ಪಾದಯಾತ್ರೆ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಈ ವೇಳೆ ವಿಶ್ವಕರ್ಮ ಮಹಾಸಭಾ ಜಿಲ್ಲಾಧ್ಯಕ್ಷ ಸುದರ್ಶನ್, ತಾಲೂಕು ಅಧ್ಯಕ್ಷ ಎಂ.ಪಿ.ಮಹೇಶ್, ಮಹಿಳಾ ಅಧ್ಯಕ್ಷೆ ಸುವರ್ಣ, ಮಾಜಿ ಅಧ್ಯಕ್ಷ ಎಂ.ಸಿ.ಕೃಷ್ಣಾಚಾರ್, ಉಪಾಧ್ಯಕ್ಷ ಸ್ವಾಮಿ, ಪದಾಧಿಕಾರಿಗಳಾದ ಈಶ್ಚರಾಚಾರ್, ಸಿದ್ಧಪ್ಪಾಜಿ, ರಾಮಾಚಾರ್, ಸದಾನಂದ, ನಂದಾಚಾರಿ, ಶ್ರೀನಿವಾಸ್, ಮಂಟೇಸ್ವಾಮಿ, ಈಶ್ವರಾಚಾರಿ ಇತರರಿದ್ದರು.ನಿಖಿಲ್ ಕುಮಾರಸ್ವಾಮಿ ಹುಟ್ಟುಹಬ್ಬ ಆಚರಣೆ

ಮದ್ದೂರು: ತಾಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ, ಕೆ.ಬೆಳ್ಳೂರು ಗ್ರಾಮ ಪಂಚಾಯ್ತಿ ಸದಸ್ಯೆ ಬನ್ನಹಳ್ಳಿ ದಿವ್ಯಾ ರಾಮಚಂದ್ರಶೆಟ್ಟಿ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪಕ್ಷದ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ತಾಲೂಕಿನ ಮುಡಿನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಸಿಹಿ ತಿನಿಸು ಜೊತೆಗೆ ಪಠ್ಯ-ಪುಸ್ತಕ, ಜಾಮೆಟ್ರಿ, ಪೆನ್ನು-ಪೆನ್ಸಿಲ್ ಗಳನ್ನು ನೀಡಿದರು. ನಂತರ ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದ ಎಸ್.ಪಿ.ಎಲ್.ಚಾರಿಟಬಲ್ ಟ್ರಸ್ಟ್ ನ ಅನಾಥಾಶ್ರಮ ಮತ್ತು ವೃದ್ಧಾಶ್ರಮಕ್ಕೆ ಭೇಟಿ ನೀಡಿ ಮಧ್ಯಾಹ್ನದ ಉಪಾಹಾರದ ವ್ಯವಸ್ಥೆಯನ್ನು ನೆರವೇರಿಸಿ ಅರ್ಥಪೂರ್ಣವಾಗಿ ಆಚರಣೆ ಮಾಡಿದರು.

ನಂತರ ಮಾತನಾಡಿದ ಅವರು, ಸರಳತೆ, ಸಜ್ಜನಿಕೆಗೆ ಹೆಸರಾದ ಯುವಕರ ಕಣ್ಮಣಿ, ಜೆಡಿಎಸ್ ನ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರಿಗೆ ವೃದ್ಧಾಶ್ರಮದ ಹಿರಿಯರ ಆಶೀರ್ವಾದ ಸದಾ ಇರಲಿ ಹಾಗೂ ದೇವರು ಆರೋಗ್ಯ, ಆಯುಷ್ಯ ಹಾಗೂ ಶ್ರೇಯಸ್ಸನ್ನು ಕೊಟ್ಟು ಕರುಣಿಸಲಿ, ರಾಜಕೀಯವಾಗಿ ಬೆಳವಣಿಗೆ ಕಾಣಲಿ ಎಂದು ಹಾರೈಸಿದರು.