ನಾಡಿದ್ದು ಸುವರ್ಣ ಕನ್ನಡಿಗ-2025 ಪ್ರಶಸ್ತಿ ಪುರಸ್ಕೃತ ನ್ಯಾ.ಎಸ್‌.ಬಿ.ವಸ್ತ್ರಮಠಗೆ ಅಭಿನಂದನಾ ಸಮಾರಂಭ

| Published : Apr 03 2025, 02:46 AM IST

ನಾಡಿದ್ದು ಸುವರ್ಣ ಕನ್ನಡಿಗ-2025 ಪ್ರಶಸ್ತಿ ಪುರಸ್ಕೃತ ನ್ಯಾ.ಎಸ್‌.ಬಿ.ವಸ್ತ್ರಮಠಗೆ ಅಭಿನಂದನಾ ಸಮಾರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನಿಂದ ಕೊಡಮಾಡುವ ಜೀವಮಾನ ಸಾಧನೆಯ ಸುವರ್ಣ ಕನ್ನಡಿಗ-2025 ಪ್ರಶಸ್ತಿ ಪುರಸ್ಕೃತರಾದ ನಿವೃತ್ತ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಎಸ್‌.ಬಿ.ವಸ್ತ್ರಮಠ ಅವರಿಗೆ ಅಭಿನಂದನಾ ಸಮಾರಂಭವು ಧಾರವಾಡದ ಕರ್ನಾಟಕ ಕಾಲೇಜು ರಸ್ತೆಯಲ್ಲಿರುವ ಆಲೂರು ವೆಂಕಟರಾವ್‌ ಸಭಾಭವನದಲ್ಲಿ ಏ.5 ರಂದು ಬೆಳಗ್ಗೆ 10.30 ಗಂಟೆಗೆ ಜರುಗಲಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನಿಂದ ಕೊಡಮಾಡುವ ಜೀವಮಾನ ಸಾಧನೆಯ ಸುವರ್ಣ ಕನ್ನಡಿಗ-2025 ಪ್ರಶಸ್ತಿ ಪುರಸ್ಕೃತರಾದ ನಿವೃತ್ತ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಎಸ್‌.ಬಿ.ವಸ್ತ್ರಮಠ ಅವರಿಗೆ ಅಭಿನಂದನಾ ಸಮಾರಂಭವು ಧಾರವಾಡದ ಕರ್ನಾಟಕ ಕಾಲೇಜು ರಸ್ತೆಯಲ್ಲಿರುವ ಆಲೂರು ವೆಂಕಟರಾವ್‌ ಸಭಾಭವನದಲ್ಲಿ ಏ.5 ರಂದು ಬೆಳಗ್ಗೆ 10.30 ಗಂಟೆಗೆ ಜರುಗಲಿದೆ. ಶಿರಹಟ್ಟಿ ಸಂಸ್ಥಾನಮಠದ ಜಗದ್ಗುರು ಫಕ್ಕೀರ ಸಿದ್ಧರಾಮ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮಿಗಳು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ದಿವ್ಯ ಪ್ರಭ, ಬೆಂಗಳೂರಿನ ಕೃಷಿ ಮಾರಾಟ ಇಲಾಖೆಯ ನಿರ್ದೇಶಕರಾದ ಶಿವಾನಂದ ಕಾಪಶಿ, ಹುಬ್ಬಳ್ಳಿ-ಧಾರವಾಡದ ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ, ಧಾರವಾಡದ ಹಿರಿಯ ನ್ಯಾಯವಾದಿ ಎ.ಸಿ.ಚಾಕಲಬ್ಬಿ ಭಾಗವಹಿಸುವರು. ಕುಂದಗೋಳ ತಾಲೂಕಿನ ಹರ್ಲಾಪುರದ ಶಂಭಯ್ಯ ಹಿರೇಮಠ ತಂಡದವರಿಂದ ಜಾನಪದ ಸಂಗೀತ ಕಾರ್ಯಕ್ರಮ ಜರಗುತ್ತವೆ ಎಂದು ಎಸ್‌.ಬಿ.ವಸ್ತ್ರಮಠ ಗೆಳೆಯರ ಬಳಗ ಪ್ರಕಟಣೆಯಲ್ಲಿ ತಿಳಿಸಿದೆ. ನಿವೃತ್ತ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಎಸ್‌.ಬಿ.ವಸ್ತ್ರಮಠ ಹಾಗೂ ವಿಜಯಲಕ್ಷ್ಮಿ ಎಸ್‌.ವಸ್ತ್ರಮಠ ಅವರ ಗೌರವ ಉಪಸ್ಥಿತಿಯಲ್ಲಿ ಜರುಗಲಿರುವ ಕಾರ್ಯಕ್ರಮಕ್ಕೆ ಸರ್ವರು ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ನ್ಯಾ.ಎಸ್‌.ಬಿ.ವಸ್ತ್ರಮಠ ಗೆಳೆಯರ ಬಳಗ, ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಸಿದ್ದಾಪೂರ ಗ್ರಾಮಸ್ಥರು, ಕುಟುಂಬದ ಸದಸ್ಯರು, ಬಂಧುಗಳು ಕೋರಿದ್ದಾರೆ.