ಸಂವಿಧಾನದ ಅತಿಹೆಚ್ಚು ತಿದ್ದುಪಡಿಯ ಮೂಲ ಕರ್ತೃ ಕಾಂಗ್ರೆಸ್ : ದೇವರಾಜ್‌ಶೆಟ್ಟಿ

| Published : Mar 31 2024, 02:06 AM IST

ಸಾರಾಂಶ

ಸಂವಿಧಾನವನ್ನು ಕಾಲ ಕ್ರಮೇಣ ಬಿಜೆಪಿ ಮಾರ್ಪಾಡು ಮಾಡಲಿಚ್ಚಿಸಿದೆಯೇ ಹೊರತು ದುರುದ್ದೇಶದಿಂದಲ್ಲ. ಸಂವಿಧಾನದ ಅತಿ ಹೆಚ್ಚು ತಿದ್ದುಪಡಿಗೆ ಮೂಲ ಕತೃವೇ ಕಾಂಗ್ರೆಸ್‌ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಹೇಳಿದರು.

ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾದ ಕಾರ್ಯಕಾರಿಣಿ ಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಂವಿಧಾನವನ್ನು ಕಾಲ ಕ್ರಮೇಣ ಬಿಜೆಪಿ ಮಾರ್ಪಾಡು ಮಾಡಲಿಚ್ಚಿಸಿದೆಯೇ ಹೊರತು ದುರುದ್ದೇಶದಿಂದಲ್ಲ. ಸಂವಿಧಾನದ ಅತಿ ಹೆಚ್ಚು ತಿದ್ದುಪಡಿಗೆ ಮೂಲ ಕತೃವೇ ಕಾಂಗ್ರೆಸ್‌ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಹೇಳಿದರು.ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಎಸ್ಸಿ ಮೋರ್ಚಾದ ಕಾರ್ಯಕಾರಿಣಿ ಸಭೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಡಾ.ಬಿ.ಆರ್. ಅಂಬೇಡ್ಕರ್ ಕೊನೆ ಕ್ಷಣದಲ್ಲಿ ಅಂತ್ಯಕ್ರಿಯೆಗೂ ದೆಹಲಿಯಲ್ಲಿ ಜಾಗ ಕೊಡದೇ ಕಡಲ ತೀರದಲ್ಲಿ ಕ್ರಿಯೆ ನಡೆಸಲು ಕಾಂಗ್ರೆಸ್ ಕಾರಣ ಎಂದರು.ಪಕ್ಷದಲ್ಲಿ ಈಗಾಗಲೇ ಹಲವಾರು ಪದಾಧಿಕಾರಿಗಳು ಹಾಗೂ ಹೋಬಳಿ ಮಟ್ಟದ ಅಧ್ಯಕ್ಷರು ಮಂಡಲ ಸ್ಥಾಪಿಸಿದ್ದು ಕೋಟಾ ಶ್ರೀನಿವಾಸ ಪೂಜಾರಿ ಹೆಸರಿನಲ್ಲೇ ಕ್ಷೇತ್ರ ಅರ್ಧ ಗೆಲುವು ಪಡೆದುಕೊಂಡಿದೆ. ಇನ್ನುಳಿದ ಗೆಲುವನ್ನು ಕಾರ್ಯಕರ್ತರು ಬೂತ್‌ ಮಟ್ಟದಿಂದ ನಿರ್ವಹಿಸಿದರೆ ದೇಶದ ಭವಿಷ್ಯಕ್ಕೆ ಅಡಿಪಾಯ ಹಾಕಿದಂತೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ಜಿಲ್ಲೆಯ ಪ್ರತಿ ಬೂತ್‌ಗಳಲ್ಲಿ ಕಾರ್ಯಕರ್ತರು ಮತದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತಯಾಚನೆಗೆ ಮುಂದಾಗಬೇಕು. ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕಾರ್ಯೋನ್ಮುಖರಾಗಬೇಕು ಎಂದರು.

ಹಿಂದಿನ ಯಾವುದೇ ಕಾಂಗ್ರೆಸ್ ಸರ್ಕಾರ ಕೈಗೊಳ್ಳದ ನಿರ್ಧಾರವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ಕೈಗೊಂಡಿದೆ. ಪ.ಜಾತಿ ಜನಾಂಗದ ಎಂಟು ಹಾಗೂ ಪ.ಪಂಗಡದ ನಾಲ್ಕು ಮಂದಿಗೆ ಉನ್ನತ ಸ್ಥಾನ ಕಲ್ಪಿಸಿದೆ. ಅದಲ್ಲದೇ ವಿಶ್ವಸಂಸ್ಥೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಿ ಇಡೀ ಪ್ರಪಂಚಕ್ಕೆ ಪಸರಿಸಿದವರು ಎಂದರು.ರಾಜ್ಯ ಎಸ್ಸಿ ಮೋರ್ಚಾ ಕಾರ್ಯದರ್ಶಿ ಸೀತರಾಮಭರಣ್ಯ ಮಾತನಾಡಿ, ಕಾಂಗ್ರೆಸ್‌ನ ಎಪ್ಪತ್ತು ವರ್ಷಗಳ ಆಡಳಿತದಲ್ಲಿ ದಲಿತರನ್ನು ಹೀಯ್ಯಾಳಿಸುವುದು ಗುರಿಯಾಗಿತ್ತು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ವಕ್ತಾರ ಡಾ. ಶಿವಶಂಕರ್, ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣನಾಯಕ್, ಜಿಲ್ಲಾ ಮಾಜಿ ಉಪಾಧ್ಯಕ್ಷ ದೀಪಕ್‌ ದೊಡ್ಡಯ್ಯ, ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಹುಲ್ಲಹಳ್ಳಿ ಲಕ್ಷ್ಮಣ್, ಸುಜಿತ್, ಕುಮಾರ್ ಹಾಜರಿದ್ದರು.

30 ಕೆಸಿಕೆ 2ಚಿಕ್ಕಮಗಳೂರು ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಜಿಲ್ಲಾ ಎಸ್ಸಿ ಮೋರ್ಚಾದ ಕಾರ್ಯಕಾರಿಣಿ ಸಭೆಯನ್ನು ಪಕ್ಷದ ಜಿಲ್ಲಾಧ್ಯಕ್ಷ ದೇವರಾಜ್‌ ಶೆಟ್ಟಿ ಅವರು ಉದ್ಘಾಟಿಸಿದರು.