ಸಾರಾಂಶ
ರಾಮನಗರ ತಾಲೂಕಿನ ಹುಲಿಕೆರೆ-ಗುನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಗಿರೀಶ್, ಉಪಾಧ್ಯಕ್ಷರಾಗಿ ಚಿಕ್ಕತಾಯಮ್ಮ ಲಾಟರಿ ಮೂಲಕ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಚಿಕ್ಕತಾಯಮ್ಮ ಆಯ್ಕೆಕನ್ನಡಪ್ರಭ ವಾರ್ತೆ ರಾಮನಗರ
ತಾಲೂಕಿನ ಹುಲಿಕೆರೆ-ಗುನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಗಿರೀಶ್, ಉಪಾಧ್ಯಕ್ಷರಾಗಿ ಚಿಕ್ಕತಾಯಮ್ಮ ಲಾಟರಿ ಮೂಲಕ ಆಯ್ಕೆಯಾದರು.ಅವ್ವೇರಹಳ್ಳಿಯ ಗ್ರಾಪಂ ಕಚೇರಿಯಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತರಾಗಿ ಗಿರೀಶ್, ಮಹದೇವಯ್ಯ, ಜೆಡಿಎಸ್ ಬೆಂಬಲಿತರಾಗಿ ಸಾಧನಾ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತರಾಗಿ ಚಿಕ್ಕತಾಯಮ್ಮ, ಜೆಡಿಎಸ್ ಬೆಂಬಲಿತರಾಗಿ ಕಲ್ಯಾಣಮ್ಮ ಸ್ಪರ್ಧಿಸಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಮೂವರು ಕಣದಲ್ಲಿದ್ದು ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಗಿರೀಶ್ ಮತ್ತು ಮಹದೇವಯ್ಯ ತಲಾ 7 ಮತ ಪಡೆದು ಸಮಬಲ ಸಾಧಿಸಿದರು. ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಸಾಧನಾ 3 ಮತಗಳನ್ನು ಪಡೆದರು. ಮಹದೇವಯ್ಯ ಮತ್ತು ಗಿರೀಶ್ ಇಬ್ಬರು ಅಭ್ಯರ್ಥಿಗಳಿಗೆ ಮತಗಳು ಸಮ ಬಂದವು. ಈ ಹಿನ್ನೆಲೆ ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆ ನಡೆದಾಗ ಗಿರೀಶ್ ಅವರಿಗೆ ಅದೃಷ್ಟಲಕ್ಷ್ಮಿ ಒಲಿದು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು.ಉಳಿದಂತೆ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಚಿಕ್ಕತಾಯಮ್ಮ ತಮ್ಮ ಪ್ರತಿಸ್ಪರ್ಧಿ ಕಲ್ಯಾಣಮ್ಮ ಅವರಿಗಿಂತ 1 ಮತ ಹೆಚ್ಚಿಗೆ ಪಡೆದು ಜಯಶಾಲಿಯಾದರು.
ಚುನಾವಣಾ ಪ್ರಕ್ರಿಯೆಯಲ್ಲಿ ಸದಸ್ಯರಾದ ನಾಗೇಂದ್ರ, ನಿಂಗರಾಜು, ಬೆಟ್ಟೇಗೌಡ, ದೇವರಾಜಮ್ಮ, ತೇಜ, ವಿಜಿಯಮ್ಮ, ರೇಷ್ಮಾಬಾನು, ಲಕ್ಷ್ಮಮ್ಮ, ನಾಗೇಂದ್ರನಾಯ್ಕ್, ಶ್ರೀನಿವಾಸ್, ಕಮಲಮ್ಮ, ಬೇಬಿಬಾಯಿ ಭಾಗವಹಿಸಿದ್ದರು. ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ಕಾಂತರಾಜು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಪಿಡಿಒ ಬಿ.ಪಿ.ಕುಮಾರ್, ಕಾರ್ಯದರ್ಶಿ ಅರುಣ್ ಕುಮಾರ್, ಸಹಾಯಕ ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.ಫಲಿತಾಂಶ ಘೊಷಣೆಯಾಗುತ್ತಲೇ ಅಧ್ಯಕ್ಷ, ಉಪಾಧ್ಯಕ್ಷರನ್ನು ಹಾರ ಹಾಕಿ ಗ್ರಾಪಂ ಆವರಣದಲ್ಲಿ ಸಿಹಿ ಹಂಚಿ ಸಂತಸಪಟ್ಟರು.
ತಾಪಂ ಮಾಜಿ ಅಧ್ಯಕ್ಷ ರೇಣುಕಾಪ್ರಸಾದ್, ಮುಖಂಡರಾದ ನಾಗೇಶ್, ಪುಟ್ಟಮಾದಯ್ಯ, ರಾಮಣ್ಣನಾಯ್ಕ, ಚಂದ್ರಶೇಖರ್, ಸಿದ್ದರಾಮಣ್ಣ, ಅರುಣ್, ದಾಸೇಗೌಡ, ರಮೇಶ್, ಸಿದ್ದರಾಜು, ನಾಗರಾಜು, ಶಂಕರ್, ರಾಜೇಶ್ ಹಾಜರಿದ್ದರು.