ಸಾರಾಂಶ
ಗ್ಯಾರಂಟಿ ಹೆಸರಿನಲ್ಲಿ ೫೦ ರಿಂದ ೬೦ ಸಾವಿರ ಕೋಟಿ ಹಣವನ್ನು ವ್ಯಯ ಮಾಡಿದರು ಸಹ ಯಾವುದೇ ಜನರಿಗೆ ಸರಿಯಾಗಿ ಯೋಜನೆ ಲಾಭ ದೊರೆತಿಲ್ಲ. ರಾಜ್ಯದ ಖಜಾನೆ ಖಾಲಿಯಾಗಿ ಅಭಿವೃದ್ಧಿ ಕೆಲಸವನ್ನು ಮಾಡದೆ ರಾಜ್ಯವನ್ನು ದಿವಾಳಿ ಮಾಡುವಂತ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ ತಿಳಿಸಿದರು.
ಸವಣೂರು: ಗ್ಯಾರಂಟಿ ಹೆಸರಿನಲ್ಲಿ ೫೦ ರಿಂದ ೬೦ ಸಾವಿರ ಕೋಟಿ ಹಣವನ್ನು ವ್ಯಯ ಮಾಡಿದರು ಸಹ ಯಾವುದೇ ಜನರಿಗೆ ಸರಿಯಾಗಿ ಯೋಜನೆ ಲಾಭ ದೊರೆತಿಲ್ಲ. ರಾಜ್ಯದ ಖಜಾನೆ ಖಾಲಿಯಾಗಿ ಅಭಿವೃದ್ಧಿ ಕೆಲಸವನ್ನು ಮಾಡದೆ ರಾಜ್ಯವನ್ನು ದಿವಾಳಿ ಮಾಡುವಂತ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ ತಿಳಿಸಿದರು.ತಾಲೂಕಿನ ತೊಂಡೂರು ಗ್ರಾಮದಲ್ಲಿ ಶುಕ್ರವಾರ ಬಿಜೆಪಿ ಅಭ್ಯರ್ಥಿ ಭರತ ಬೊಮ್ಮಾಯಿ ಪರ ಪ್ರಚಾರ ಕೈಗೊಂಡು ಮಾತನಾಡಿದರು.
ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ಕಳಕಳಿಯನ್ನು ಹೊಂದಿದ ವ್ಯಕ್ತಿ ಬಸವರಾಜ ಬೊಮ್ಮಾಯಿ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಯಾವಾಗ ಅಧಿಕಾರಕ್ಕೆ ಬಂದಿದೆ ಅಂದಿನಿಂದ ಅಭಿವೃದ್ಧಿಯ ಪರ್ವ ಪ್ರಾರಂಭವಾಗಿದೆ ಎಂದರು. ನೆರೆಹಾವಳಿ ಬೆಳೆಹಾನಿ, ಮನೆಗಳು ಹಾನಿಯಾಗಿ ಸಂಕಷ್ಟವನ್ನು ಎದುರಿಸಿದರೂ ಕಾಂಗ್ರೆಸ್ ಸರ್ಕಾರ ಕೇವಲ ₹೫೦ ಸಾವಿರ ಪರಿಹಾರ ನೀಡಿಲ್ಲ. ಸಿದ್ದರಾಮಯ್ಯ ಅವರು ಮುಂದಿನ ಅವಧಿಯಲ್ಲಿ ಸ್ಪರ್ಧೆ ಮಾಡಲ್ಲ ಎನ್ನುವ ಉದ್ದೇಶದಿಂದ ಮೂಡಾ, ವಾಲ್ಮೀಕಿ ನಿಗಮದಲ್ಲಿ ಸಾವಿರಾರು ಕೋಟಿ ಹಣವನ್ನು ಲೂಟಿ ಮಾಡುವ ಮೂಲಕ ಭ್ರಷ್ಟಾಚಾರ ಮಾಡಿದ್ದಾರೆ. ಅದೇ ರೀತಿ ಎಲ್ಲ ಮಂತ್ರಿಗಳು ಹಗರಣದಲ್ಲಿ ತೊಡಗಿಕೊಂಡಿದ್ದಾರೆ. ಅಬಕಾರಿ ಸಚಿವರು ಪರವಾನಗಿ ನೀಡುವ ನೆಪದಲ್ಲಿ ₹೧೮ರಿಂದ ₹೨೦ ಕೋಟಿ ಬೇಡಿಕೆ ಇಟ್ಟಿದ್ದಾರೆ ಎನ್ನುವಂಥದ್ದು ಮದ್ಯ ಮಾರಾಟಗಾರ ಸಂಘದವರು ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿರುವುದು ಸಾಕ್ಷಿಯಾಗಿದೆ ಎಂದರು. ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ. ಆದ್ದರಿಂದ, ಕಾಂಗ್ರೆಸ್‌ಗೆ ತಕ್ಕ ಪಾಠವನ್ನು ಕಲಿಸುವ ಉದ್ದೇಶದಿಂದ ಬಿಜೆಪಿ ಅಭ್ಯರ್ಥಿಗೆ ಮತವನ್ನು ನೀಡಬೇಕು ಕೋರಿದರು.ಮಾಜಿ ಶಾಸಕ ಶಂಕರಪಾಟೀಲ ಮುನೇನಕೊಪ್ಪ, ಪ್ರಮುಖರಾದ ಗವಿಸಿದ್ದಪ್ಪ ದ್ಯಾಮಣ್ಣನವರ, ಶೇಖರ ಅಂಗಡಿ, ಚನ್ನಪ್ಪ ಮರಡೂರ, ಗುರು ಅಂಗಡಿ, ವೀರಪ್ಪ ಅಂಗಡಿ, ನಾಗಪ್ಪ ಚಂದ್ರಾಪಟ್ಟಣ, ಸುಭಾಷ ಮರಡೂರು, ಮಹಾವೀರ ಕಾಳಪ್ಪನವರ ಹಾಗೂ ಇತರರು ಇದ್ದರು.