ಈ ವೇಳೆ ಮಾತನಾಡಿದ ಅಭ್ಯರ್ಥಿ ಶಶಿ ಹುಲಿಕುಂಟೇಮಠ್, ಆಗ್ನೇಯ ಪದವಿಧರರ ಕ್ಷೇತ್ರಕ್ಕೆಯುವ ಅಭ್ಯರ್ಥಿ ಬೇಕೆಂದು ಕಾಂಗ್ರೆಸ್ ನಾಯಕರು ವರ್ಷದ ಹಿಂದೆಯೇ ತಮ್ಮನ್ನುಅಭ್ಯರ್ಥಿಯನ್ನಾಗಿ ಘೋಷಿಸಿದ್ದರು. ಆಗಿನಿಂದಲೂ ತಾವು ನಿರಂತರವಾಗಿ ಆಗ್ನೇಯ ಕ್ಷೇತ್ರ ಪ್ರವಾಸ ಮಾಡಿ ಪದವಿಧರ ಮತದಾರರನ್ನು ಮುಖತಃ ಭೇಟಿ ಮಾಡಿ, ಅವರ ಬೆಂಬಲ ಕೋರಿದ್ದು, ಎಲ್ಲಾ ಕ್ಷೇತ್ರಗಳ ಶಾಸಕರು, ಮಾಜಿ ಶಾಸಕರಬೆಂಬಲ ಪಡೆದು ಅವರೊಂದಿಗೆ ಸಂಪರ್ಕದಲ್ಲಿದ್ದು ಅವರು ತಮ್ಮ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಕ್ಷೇತ್ರದೆಲ್ಲೆಡೆತಮ್ಮ ಪರವಾಗಿ ಉತ್ತಮ ಬೆಂಬಲ ವ್ಯಕ್ತವಾಗಿದ್ದು ತಮ್ಮ ಗೆಲುವು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ, ತುಮಕೂರು
ಆಗ್ನೇಯ ಪದವಿಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೇ ಮಠ್ ಅವರು ಕಾಂಗ್ರೆಸ್ ಮುಖಂಡರ ಜೊತೆ ಮಂಗಳವಾರ ನಗರದ ವಿವಿಧೆಡೆ ಮತದಾರರನ್ನು ಭೇಟಿ ಮಾಡಿ ಮತಯಾಚನೆ ಮಾಡಿದರು.ನ್ಯಾಯಾಲಯ ಆವರಣದಲ್ಲಿ ವಕೀಲರನ್ನು ಭೇಟಿ ಮಾಡಿ ಚುನಾವಣೆಯಲ್ಲಿ ತಮಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವಂತೆ ಕೋರಿದರು. ಅಲ್ಲದೆ ವಿವಿಧ ಕಚೇರಿಗಳು, ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಕರಪತ್ರ ನೀಡಿ ತಮಗೆ ಮನ ನೀಡುವಂತೆ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಅಭ್ಯರ್ಥಿ ಶಶಿ ಹುಲಿಕುಂಟೇಮಠ್, ಆಗ್ನೇಯ ಪದವಿಧರರ ಕ್ಷೇತ್ರಕ್ಕೆಯುವ ಅಭ್ಯರ್ಥಿ ಬೇಕೆಂದು ಕಾಂಗ್ರೆಸ್ ನಾಯಕರು ವರ್ಷದ ಹಿಂದೆಯೇ ತಮ್ಮನ್ನುಅಭ್ಯರ್ಥಿಯನ್ನಾಗಿ ಘೋಷಿಸಿದ್ದರು. ಆಗಿನಿಂದಲೂ ತಾವು ನಿರಂತರವಾಗಿ ಆಗ್ನೇಯ ಕ್ಷೇತ್ರ ಪ್ರವಾಸ ಮಾಡಿ ಪದವಿಧರ ಮತದಾರರನ್ನು ಮುಖತಃ ಭೇಟಿ ಮಾಡಿ, ಅವರ ಬೆಂಬಲ ಕೋರಿದ್ದು, ಎಲ್ಲಾ ಕ್ಷೇತ್ರಗಳ ಶಾಸಕರು, ಮಾಜಿ ಶಾಸಕರಬೆಂಬಲ ಪಡೆದು ಅವರೊಂದಿಗೆ ಸಂಪರ್ಕದಲ್ಲಿದ್ದು ಅವರು ತಮ್ಮ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಕ್ಷೇತ್ರದೆಲ್ಲೆಡೆತಮ್ಮ ಪರವಾಗಿ ಉತ್ತಮ ಬೆಂಬಲ ವ್ಯಕ್ತವಾಗಿದ್ದು ತಮ್ಮ ಗೆಲುವು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಮಾಜಿ ಶಾಸಕ ಡಾ.ಎಸ್. ರಫೀಕ್ ಅಹಮದ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹ್ಮದ್, ಹಿರಿಯ ಮುಖಂಡ ಎನ್. ಗೋವಿಂದರಾಜು, ಹಿಂದುಳಿದ ವರ್ಗಗಳ ಘಟಕದ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್, ಎಸ್.ಸಿ. ಘಟಕ ಜಿಲ್ಲಾಧ್ಯಕ್ಷ ನಿಂಗರಾಜು, ಕಾನೂನು ಘಟಕ ಅಧ್ಯಕ್ಷ ಶಿವಕುಮಾರಸ್ವಾಮಿ, ಯುವಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಲಾಹಿ ಸಿಕಂದರ್, ವಕೀಲರ ಸಂಘದ ಅಧ್ಯಕ್ಷ ಕೆಂಪರಾಜಯ್ಯ, ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿ ಮಹೇಶ್, ಖಜಾಂಚಿ ಸಿಂಧೂ, ವಕೀಲರಾದ ಹಾಲನೂರು ಅನಂತಕುಮಾರ್, ವೆಂಕಟೇಶಯ್ಯ, ಮಹಲಿಂಗಯ್ಯ, ವೆಂಕಟೇಶ್, ನಗರಪಾಲಿಕೆ ಮಾಜಿ ಸದಸ್ಯರಾದಟಿ.ಎಂ. ಮಹೇಶ್, ಎನ್. ಮಹೇಶ್ ಮೊದಲಾದವರು ಮತಯಾಚನೆ ಸಂದರ್ಭದಲ್ಲಿ ಹಾಜರಿದ್ದರು.