ಕಾಂಗ್ರೆಸ್‌ ಅಭ್ಯರ್ಥಿ ಶ್ರೀಧರ್‌ ಭರ್ಜರಿ ಗೆಲುವು

| Published : Jan 01 2024, 01:15 AM IST

ಕಾಂಗ್ರೆಸ್‌ ಅಭ್ಯರ್ಥಿ ಶ್ರೀಧರ್‌ ಭರ್ಜರಿ ಗೆಲುವು
Share this Article
  • FB
  • TW
  • Linkdin
  • Email

ಸಾರಾಂಶ

ಮಧುಗಿರಿ ಪುರಸಭೆ13ನೇ ವಾರ್ಡಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಂ.ಶ್ರೀಧರ್‌ ಗೆಲುವು ಸಾಧಿಸಿದ್ದಾರೆ.

ಪುರಸಭೆ 13ನೇ ವಾರ್ಡಿನ ಉಪಚುನಾವಣೆಯ ಫಲಿತಾಂಶ ಪ್ರಕಟ

ಕನ್ನಡಪ್ರಭ ವಾರ್ತೆ ಮಧುಗಿರಿ

ಇಲ್ಲಿನ ಪುರಸಭೆಯ 13ನೇ ವಾರ್ಡಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಎಂ. ಶ್ರೀಧರ್‌ ಭರ್ಜರಿ ಗೆಲುವು ಸಾಧಿಸಿದರು. ಈತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ 606 ಮತದಾರರು ತಮ್ಮ ಮತ ಚಲಾಯಿಸಿದ್ದರು.

ಶನಿವಾರ ನಡೆದ ಮತ ಏಣಿಕೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಎಂ. ಶ್ರೀಧರ್‌ 386 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ದಾಖಲಿಸಿದರು.

ಜೆಡಿಎಸ್‌, ಬಿಜೆಪಿ ಮೈತ್ರಿ ಅಭ್ಯರ್ಥಿ ಎಂ.ಆರ್‌. ಸುರೇಶ್‌ ಚಂದ್ರ 217 ಮತಗಳನ್ನು ಪಡೆದರು, 3 ಮತಗಳು ನೋಟಕ್ಕೆ ಬಿದ್ದಿವು. ಇದರಿಂದಾಗಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಎಂ. ಶ್ರೀಧರ್‌ 169 ಮತಗಳ ಅಂತರದಿಂದ ಜಯಶೀಲರಾದರು. ಇವರು ಮತಗಳಿಕೆಯಲ್ಲಿ ಶೇ.63.69 ಮತಗಳನ್ನು ಪಡೆದಿದ್ದು, ಬಿಜೆಪಿ ಅಭ್ಯರ್ಥಿ ಸುರೇಶ್‌ಚಂದ್ರ ಶೇ. 35.80 ಮತಗಳನ್ನು ಪಡೆದಿದ್ದಾರೆ.

ಪುರಸಭೆ ನೂತನ ಸದಸ್ಯರಾಗಿ ಚುನಾಯಿತರಾದ ಕಾಂಗ್ರೆಸ್‌ ಅಭ್ಯರ್ಥಿ ಎಂ.ಶ್ರೀಧರ್‌ ಸುದ್ದಿಗಾರರೊಂದಿಗೆ ಮಾತನಾಡಿ, ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಮತ್ತು ಎಂಎಲ್ಸಿ ಆರ್‌. ರಾಜೇಂದ್ರ ಅವರು ನನ್ನ ಮೇಲೆ ನಂಬಿಕೆ ಇಟ್ಟು ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಕೊಟ್ಟು ಕಣಕ್ಕಿಳಿಸಿದ್ದರು. ಅವರ ಮಾರ್ಗದರ್ಶನದಂತೆ ತಾಲೂಕಿನ ಎಲ್ಲ ಕಾಂಗ್ರೆಸ್‌ ಮುಖಂಡರು ಮತ್ತು ವಾರ್ಡಿನ ಮತದಾರ ಪ್ರಭುಗಳ ನನ್ನನ್ನು ಗೆಲ್ಲಿಸುವ ಮೂಲಕ ಕೈ ಬಲಪಡಿಸಿದ್ದಾರೆ. ಈ ಅಭೂತಪೂರ್ವ ಜಯಕ್ಕೆ ಕಾರಣಕರ್ತರಾದ ವಾರ್ಡಿನ ಪ್ರತಿ ಮತದಾರ ಬಂಧುಗಳಿಗೊ ಅಭಿನಂದನೆ ಸಲ್ಲಿಸಿದರು.

ಪರಾಜಿತ ಅಭ್ಯರ್ಥಿ ಸುರೇಶ್‌ಚಂದ್ರ ಮಾತನಾಡಿ, ನಮ್ಮ ಪಕ್ಷ ಒಳ್ಳೆ ಪ್ರಯತ್ನ ಮಾಡಿದೆ. ನಮ್ಮ ಪಕ್ಷದ ಎಲ್ಲ ಪದಾಧಿಕಾರಿಗಳು ,ಮುಖಂಡರು ಹಾಗೂ ಮತದಾರರು ನನ್ನ ಬೆಂಬಲಿಸಿದ್ದು ವಾರ್ಡಿನ ಜೊತೆ ನಿಕಟ ಸಂಪರ್ಕ ಮುಂದುವರಿಸುತ್ತೇನೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಎನ್‌. ಗಂಗಣ್ಣ ಮಾತನಾಡಿ, ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಗಳಿಸಲು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಅವರು ಪಟ್ಟಣ ಸೇರಿದಂತೆ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಕಗಳೇ ಶ್ರೀರಕ್ಷೆ, ಬರಗಾಲದಲ್ಲಿ ಗೋವುಗಳಿಗೆ ಗೋಶಾಲೆ ತೆರೆದು ಗೋಪಾಲಕರಿಗೆ ಡಿಸಿಸಿ ಬ್ಯಾಕ್‌ನಿಂದ ರೈತರಿಗೆ ಮಧ್ಯಾಹ್ನದ ಊಟ ನೀಡುವ ನಿಟ್ಟಿನಲ್ಲಿ ರೈತಪರ, ಬಡವರ ಹಾಗೂ ಕೂಲಿಕಾರ್ಮಿಕರ ಪರ ಕಾಳಾಜಿ ತೋರಿರುವ ಕೆ.ಎನ್‌.ರಾ ಜಣ್ಣನವರ ಹೃದಯ ಮಾತೃಹೃದಯವಲ್ಲವೆ.? ವಿರೋಧ ಪಕ್ಷಗಳ ಟೀಕೆಗೆ ಈಗಾಗಲೇ ಜನರು ಬುದ್ದಿ ಕಲಿಸಿದ್ದಾರೆ ಎಂದು ಜೆಡಿಎಸ್‌ನವರ ವಿರುದ್ಧ ಹರಿಹಾಯ್ದರು.

ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೆ.ಎನ್‌. ರಾಜಣ್ಣ ಹಾಸನಾಂಬೆ ದರ್ಶನದ ವೇಳೆ ಜನ ಪರವಾಗಿ ಕೈಗೊಂಡ ಕೆಲವು ತೀರ್ಮಾನಗಳಿಂದ ರಾಜ್ಯದಾದ್ಯಂತ 14 ಲಕ್ಷ ಭಕ್ತರು ಹಾಸನಾಂಬೆಯ ದರ್ಶನ ಪಡೆದರು. ಇದರಿಂದಾಗಿ ಇತಿಹಾಸದಲ್ಲೇ ಹುಂಡಿ ಹಣ ಸುಮಾರು 12 ಲಕ್ಷ ಕೋಟಿ ರು. ಸಂಗ್ರಹವಾಗಿದೆ.

ಚುನಾವಣಾಧಿಕಾರಿಯಾಗಿ ಶ್ರೀಪೀಠ ಎಸ್‌.ಕುಂಭವತ್‌. ತಹಸೀಲ್ದಾರ್‌ ಸಿಗ್ಬತ್‌ವುಲ್ಲಾ, ಶಿರಸ್ತೇದಾರ್ ಪ್ರವೀಣ್‌ ಕಾರ್ಯ ನಿರ್ವಹಿಸಿದ್ದರು.ಫ

ಫೋಟೊನಗರದ ಪುರಸಭೆಯ 13ನೇ ವಾರ್ಡಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಎಂ. ಶ್ರೀಧರ್‌ ಭರ್ಜರಿ ಗೆಲುವು ಸಾಧಿಸಿದರು. ಕಾರ್ಯಕರ್ತರು ಶ್ರೀಧರ್‌ ಅವರಿಗೆ ಹೂವಿನ ಹಾರ ಹಾಕಿ ಸಂಭ್ರಮಿಸಿದರು