ಮಳೆ ಲೆಕ್ಕಿಸದೆ ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ಪ್ರಚಾರ

| Published : Apr 24 2024, 02:21 AM IST

ಸಾರಾಂಶ

ಈಗ ಸುಪ್ರೀಂಕೋರ್ಟ್ ಮೂಲಕ ನರೇಂದ್ರ ಮೋದಿಯವರ ನಿಜಬಣ್ಣ ಬಯಲಾಗಿದೆ. ಸಂಪೂರ್ಣ ರೈತರನ್ನು ಕಡೆಗಣಿಸಿರುವ ಮೋದಿಗೆ ರಾಜ್ಯದ ಜನತೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಈ ತುಕಾರಾಂ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿ

ಪ್ರಧಾನಿ ನರೇಂದ್ರ ಮೋದಿಗೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿದ ಮೇಲೆ ರಾಜ್ಯದ ರೈತರಿಗೆ ಬರ ಪರಿಹಾರ ನೀಡಲು ಮುಂದಾಗಿರುವುದರಿಂದ ಇವರ ಯೋಗ್ಯತೆ ಎಂತಹದ್ದು ಎಂಬುದು ತಿಳಿಯುತ್ತದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಈ ತುಕಾರಾಂ ತಿಳಿಸಿದರು.

ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಮತಯಾಚನೆ ಮಾಡಿ ಮಾತನಾಡಿದರು.

ರಾಜ್ಯ ಸರಕಾರ ಬರ ಪರಿಹಾರಕ್ಕೆ ಕೇಂದ್ರ ಸರಕಾರವನ್ನು ಒತ್ತಾಯಿಸದರೂ ಬರ ಪರಿಹಾರ ನೀಡಲು ಮೀನಮೇಷ ಮಾಡಿತ್ತು. ಮೋದಿಯವರು ರಾಜ್ಯ ಸರಕಾರ ಪರಿಹಾರ ನೀಡುವಂತೆ ನಮಗೆ ವರದಿ ನೀಡಿಲ್ಲ ಎಂದು ಸುಳ್ಳು ಹೇಳಿದ್ದರು. ಈಗ ಸುಪ್ರೀಂಕೋರ್ಟ್ ಮೂಲಕ ನರೇಂದ್ರ ಮೋದಿಯವರ ನಿಜಬಣ್ಣ ಬಯಲಾಗಿದೆ. ಸಂಪೂರ್ಣ ರೈತರನ್ನು ಕಡೆಗಣಿಸಿರುವ ಮೋದಿಗೆ ರಾಜ್ಯದ ಜನತೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಎಂದರು.

ಕೆಎಂಎಫ್ ಅಧ್ಯಕ್ಷ ಎಸ್. ಭೀಮಾನಾಯ್ಕ ಮಾತನಾಡಿ, ಜಿಪಂ ಮಾಜಿ ಸದಸ್ಯರಾದ ಹಂಪಾಪಟ್ಟಣ ಭೀಮಜ್ಜ, ರೋಗಾಣಿ ಹುಲುಗಪ್ಪ, ಅಕ್ಕಿ ತೋಟೇಶ್, ಹೆಗ್ಡಾಳ್ ರಾಮಣ್ಣ, ಕುರಿ ಶಿವಮೂರ್ತಿ, ನಂದಿಬಂಡಿ ಸೋಮಣ್ಣ, ಮರಿರಾಮಪ್ಪ, ಗೆದ್ಲಗಟ್ಟಿ ತಿಮ್ಮಣ್ಣ, ಹೆಚ್.ಶಿವಾನಂದ, ಬಂಟ್ರು ಕುಬೇರ, ಡೊಳ್ಳಿನ ನಾಗಪ್ಪ, ಗೋವಿಂದನಾಯ್ಕ, ಗೋಣಿಬಸಪ್ಪ, ಟಿ.ಮಂಜುನಾಥ, ಬಿದ್ದಪ್ಪ, ಮಗಿಮಾವಿನಹಳ್ಳಿ ಕಿಟ್ಟಿ, ಮಂಜುನಾಥ, ಅಂಜಿನಪ್ಪ, ಮರಿಹನುಮಂತಪ್ಪ, ತುರಾಯಿನಾಯ್ಕ, ರೋಗಾಣಿ ಪ್ರಕಾಶ್ ಇತರರಿದ್ದರು.