ಕಾಂಗ್ರೆಸ್‌ ಅಭ್ಯರ್ಥಿ ವಿನೋದ ಅಸೂಟಿ ಟೆಂಪಲ್‌ ರನ್‌

| Published : Mar 28 2024, 12:49 AM IST

ಸಾರಾಂಶ

ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಎನ್.ಎಚ್. ಕೋನರೆಡ್ಡಿ ಅವರಿಗೆ ಆಶೀರ್ವದಿಸಿ ವಿಧಾನಸಭೆಗೆ ಕಳಿಸಿದ್ದೀರಿ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ನನ್ನನ್ನು ಬಹುಮತದೊಂದಿಗೆ ಗೆಲ್ಲಿಸಿ.

ನವಲಗುಂದ:

ಧಾರವಾಡ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಹಾಗೂ ಶಾಸಕ ಎನ್.ಎಚ್. ಕೋನರಡ್ಡಿ ಬುಧವಾರ ಟೆಂಪಲ್‌ ರನ್‌ ನಡೆಸಿದರು.

ಪಟ್ಟಣದ ಪ್ರಮುಖ ಮಠಗಳಾದ ಗವಿಮಠ, ನಾಗಲಿಂಗಸ್ವಾಮಿಮಠ, ಪಂಚಗ್ರಹ ಹಿರೇಮಠ ಹಾಗೂ ಹಜರತ್ ಮಲಂಗಶಾವಲಿ ದರ್ಗಾಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.

ಈ ವೇಳೆ ಲೋಕಸಭಾ ಅಭ್ಯರ್ಥಿ ವಿನೋದ ಅಸೂಟಿ ಮಾತನಾಡಿ, ಈ ಭಾಗದ ಜೀವನಾಡಿ ಮಹದಾಯಿ ನಾಲಾ ಯೋಜನೆ ಜಾರಿಗೆ ತರುವುದು ನನ್ನ ಮೊದಲ ಆಯ್ಕೆ. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಎನ್‌.ಎಚ್‌. ಕೋನರೆಡ್ಡಿ ಅವರಿಗೆ ಆಶೀರ್ವದಿಸಿ ವಿಧಾನಸಭೆಗೆ ಕಳಿಸಿದ್ದೀರಿ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ನನ್ನನ್ನು ಬಹುಮತದೊಂದಿಗೆ ಗೆಲ್ಲಿಸುವಂತೆ ಮನವಿ ಮಾಡಿದರು.

ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಈ ಬಾರಿ ಧಾರವಾಡ ಲೋಕಸಭಾ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ನಿಚ್ಚಿತ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗ್ಯಾರಂಟಿ ಯೋಜನೆಗಳು ನಮ್ಮ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ವಿ.ಎಲ್. ಹಿರೇಗೌಡರ, ಮುಖಂಡ ಶಾಂತವ್ವ ಗುಜ್ಜಳ, ಮಂಜು ಜಾಧವ, ಸದುಗೌಡ ಪಾಟೀಲ, ಈರಣ್ಣ ಸಿಡಗಂಟಿ, ಪದ್ಮಾವತಿ ಪೂಜಾರ, ಜೀವನ ಪವಾರ, ಪ್ರಕಾಶ ಸಿಗ್ಲಿ, ಅರ್ಜನ್ ಹಳೇಮನಿ ಸೇರಿದಂತೆ ಹಲವರಿದ್ದರು.