ಸಾರಾಂಶ
ಶಿರಸಿ: ಸಂಸತ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ ಅವರಿಗೆ ಅವಮಾನಿಸಿದ್ದಾರೆಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ವತಿಯಿಂದ ಅಮಿತ್ ಶಾ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಯಿತು.ಮಂಗಳವಾರ ನೂರಾರು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಅಮಿತ್ ಶಾ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ, ಸಚಿವ ಸಂಪುಟದಿಂದ ಅಮಿತ್ ಶಾ ಅವರನ್ನು ವಜಾಗೊಳಿಸುಂತೆ ಆಗ್ರಹಿಸಿ ಐದು ವೃತ್ತದಿಂದ ಸಹಾಯಕ ಆಯುಕ್ತರ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶಿರಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ ಮಾತನಾಡಿ, ಬಿಜೆಪಿ ನಾಯಕರ ಮನಸ್ಥಿತಿ ಸರಿಯಿಲ್ಲ. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ ಅವರನ್ನು ಸಂಸತ್‌ನಲ್ಲಿ ಅಮಿತ್ ಶಾ ಅವಮಾನಿಸಿದ್ದಾರೆ. ಅಮಿತ್ ಶಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ, ಅವರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.ಮಹಿಳಾ ಮುಖಂಡರಾದ ಗಾಯತ್ರಿ ನೇತ್ರೇಕರ ಮಾತನಾಡಿ, ಸಂವಿಧಾನ ರಚಿಸಿ, ದೇಶಕ್ಕೆ ಸಮರ್ಪಿಸಿದ ಮಹಾನ್ ನಾಯಕ ಅಂಬೇಡ್ಕರ ಅವರ ಮೇಲೆ ಅವಹೇಳಕನಕಾರಿ ಮಾತನ್ನಾಡಿದ ಅಮಿತ್ ಶಾ ದೇಶದ ಜನತೆಯ ಕ್ಷಮೆಯಾಚಿಸಬೇಕು. ಅಲ್ಲದೇ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಬಸವರಾಜ ದೊಡ್ಮನಿ ಮಾತನಾಡಿ, ಅಂಬೇಡ್ಕರ್ ಅವರನ್ನು ಸಂಸತ್‌ನಲ್ಲಿ ಅಮಿತ್ ಶಾ ಅವಮಾನಿಸಿದ್ದಾರೆ. ವಿಶ್ವವೇ ಗೌರವಿಸುವ ವ್ಯಕ್ತಿಯ ಕುರಿತು ಅವಹೇಳನ ಮಾಡಿದ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರನ್ನು ರಾಷ್ಟ್ರಪತಿ ಅವರು ಸಚಿವ ಸಂಪುಟದಿಂದ ವಜಾಗೊಳಿಸಬೇಕು. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ, ದೇಶದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಎಸ್.ಕೆ. ಭಾಗವತ, ದೀಪಕ್ ದೊಡ್ಡೂರು, ಯಡಳ್ಳಿ ಗ್ರಾಪಂ ಅಧ್ಯಕ್ಷ ಭಾಸ್ಕರ ಶೆಟ್ಟಿ ಗಿಡಮಾವಿನಕಟ್ಟೆ, ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಚಂದ್ರಕಾಂತ ರೇವಣಕರ, ಜಿಲ್ಲಾ ಮುಖಂಡರಾದ ರಘು ಕಾನಡೆ, ಮಹಾದೇವ ಚಲವಾದಿ, ಗಣೇಶ ದಾವಣಗೆರೆ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಶೆಟ್ಟಿ, ಮುಖಂಡರಾದ ಶ್ರೀಧರ್ ನಾಯ್ಕ ಶೈಲೇಶ್ ಗಾಂಧಿ ಕಾರ್ಮಿಕ ವಿಭಾಗದ ಅಧ್ಯಕ್ಷ ಶ್ರೀನಿವಾಸ ನಾಯ್ಕ, ಪ್ರಸನ್ನ ಶೆಟ್ಟಿ, ಬನವಾಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಫ್. ನಾಯ್ಕ, ಕುಮಾರ್ ಚಂದಾವರ್, ವನೀತಾ ಶೆಟ್ಟಿ, ಎನ್.ವಿ. ನಾಯ್ಕ, ಶಮಿನ್ ಬಾನು, ಮೋಹಿನಿ ಬೈಲೂರು, ಮಾಬ್ಲೇಶ್ವರ ಪಾವಸ್ಕರ, ವಿಠಲ್ ಪಾಟನಕರ್, ಲಕ್ಷ್ಮಣ ಚಂದಾವರ್, ರಾಘು ಶೆಟ್ಟಿ, ರವಿ ಜೋಗಳೇಕರ್, ನಾಗರತ್ನ ಜೋಗಳೇಕರ್, ಅನೀಲ ನೇತ್ರೇಕರ್, ಕಿಶೋರ್ ಮುರುಡೇಶ್ವರ, ಪರಮೇಶ್ವರ್ ವೆಂಕಟೇಶ್ ಶೆಟ್ಟಿ ಮತ್ತಿತರರು ಇದ್ದರು.