ಕಾಂಗ್ರೆಸ್ಸಿಂದ ಕೇಂದ್ರದ ಜೆಪಿಸಿಗೆ ಅಗೌರವ: ಗೋವಿಂದ ಕಾರಜೋಳ

| Published : Nov 10 2024, 01:47 AM IST

ಸಾರಾಂಶ

ರಾಜ್ಯದಲ್ಲಿ ಸಂವಿಧಾನಾತ್ಮಕವಾಗಿ ರಚನೆಯಾದ ಸರ್ಕಾರ ಇದೆಯೋ, ಇಲ್ಲವೋ ಎನ್ನುವ ಸಂಶಯ ಮೂಡುತ್ತಿದೆ. ಸಂವಿಧಾನದ ಬಗ್ಗೆ ಈ ಸರ್ಕಾರಕ್ಕೆ ಗೌರವವೇ ಇಲ್ಲ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

ಹುಬ್ಬಳ್ಳಿ: ರಾಜ್ಯದಲ್ಲಿ ಸಂವಿಧಾನಾತ್ಮಕವಾಗಿ ರಚನೆಯಾದ ಸರ್ಕಾರ ಇದೆಯೋ, ಇಲ್ಲವೋ ಎನ್ನುವ ಸಂಶಯ ಮೂಡುತ್ತಿದೆ. ಸಂವಿಧಾನದ ಬಗ್ಗೆ ಈ ಸರ್ಕಾರಕ್ಕೆ ಗೌರವವೇ ಇಲ್ಲ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿ, ವಕ್ಫ್ ಗದ್ದಲ ಹಿನ್ನೆಲೆಯಲ್ಲಿ ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್‌ ನಗರಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದರು. ಹಿಂದೆ ಅವರು ಕಾಂಗ್ರೆಸ್ಸಿಂದಲೇ ಸಿಎಂ ಆಗಿದ್ದರು. ಅವರ ಬಗ್ಗೆ ಸಿಎಂ, ಡಿಸಿಎಂ ಸೇರಿ ಕಾಂಗ್ರೆಸಿಗರು ಅತ್ಯಂತ ಹಗುರವಾಗಿ ಮಾತನಾಡಿದ್ದಾರೆ. ಜೆಪಿಸಿ ಅಧ್ಯಕ್ಷರು ರಾಜ್ಯಕ್ಕೆ ಬಂದಾಗ ಒಂದು ಪ್ರೋಟೋಕಾಲ್‌ ಇರುತ್ತದೆ. ಅದು ಕೂಡ ಇಲ್ಲಿ ಪಾಲನೆ ಆಗಿಲ್ಲ. ಈ ಮೂಲಕ ಜೆಪಿಸಿಗೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಸರ್ಕಾರ ಹಗರಣದಲ್ಲಿ ಮುಳುಗಿದ್ದು, ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ. ಎಸ್ಸಿ-ಎಸ್ಟಿಗೆ ಸೇರಬೇಕಾಗಿದ್ದ ₹25 ಸಾವಿರ ಕೋಟಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ವಾಲ್ಮೀಕಿ ಹಗರಣದ ದುಡ್ಡು ಲೋಕಸಭೆ ಚುನಾವಣೆಗೆ ಬಳಕೆ ಮಾಡಿಕೊಂಡಿದ್ದಾರೆ. ಉಪಚುನಾವಣೆಗೂ ಅದೇ ಹಣ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಂಡೂರ ಜನ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.