ಸಾರಾಂಶ
ಡಾ.ಅಂಬೇಡ್ಕರ್ ಮರಣದ ನಂತರ ಭಾರತ ರತ್ನ ಪ್ರಶಸ್ತಿ ಕೊಡುವಲ್ಲಿ ವಿಳಂಬ ಮಾಡಿದ್ದು ಕಾಂಗ್ರೇಸಿನವರು. ಆದರೇ ಭಾರತ ರತ್ನ ಕೊಡಲು ವಿ.ಪಿ.ಸಿಂಗ್ ಬರಬೇಕಾಯಿತು. ಅಂಬೇಡ್ಕರ್ ಅವರ ಪಂಚತೀರ್ಥ ಕ್ಷೇತ್ರಗಳ ಅಭಿವೃದ್ದಿಯೇ ಬಿಜೆಪಿಯ ಮುಖ್ಯ ಉದ್ದೇಶಡಾ.ಅಂಬೇಡ್ಕರ್ ಮರಣದ ನಂತರ ಭಾರತ ರತ್ನ ಪ್ರಶಸ್ತಿ ಕೊಡುವಲ್ಲಿ ವಿಳಂಬ ಮಾಡಿದ್ದು ಕಾಂಗ್ರೇಸಿನವರು. ಆದರೇ ಭಾರತ ರತ್ನ ಕೊಡಲು ವಿ.ಪಿ.ಸಿಂಗ್ ಬರಬೇಕಾಯಿತು. ಅಂಬೇಡ್ಕರ್ ಅವರ ಪಂಚತೀರ್ಥ ಕ್ಷೇತ್ರಗಳ ಅಭಿವೃದ್ದಿಯೇ ಬಿಜೆಪಿಯ ಮುಖ್ಯ ಉದ್ದೇಶಡಾ.ಅಂಬೇಡ್ಕರ್ ಮರಣದ ನಂತರ ಭಾರತ ರತ್ನ ಪ್ರಶಸ್ತಿ ಕೊಡುವಲ್ಲಿ ವಿಳಂಬ ಮಾಡಿದ್ದು ಕಾಂಗ್ರೇಸಿನವರು. ಆದರೇ ಭಾರತ ರತ್ನ ಕೊಡಲು ವಿ.ಪಿ.ಸಿಂಗ್ ಬರಬೇಕಾಯಿತು. ಅಂಬೇಡ್ಕರ್ ಅವರ ಪಂಚತೀರ್ಥ ಕ್ಷೇತ್ರಗಳ ಅಭಿವೃದ್ದಿಯೇ ಬಿಜೆಪಿಯ ಮುಖ್ಯ ಉದ್ದೇಶ
ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ
ದಲಿತರಿಗೆ ಹಾಗೂ ದಾದಾ ಸಾಹೇಬ್ ಡಾ ಬಿ.ಆರ್. ಅಂಬೇಡ್ಕರ್ ರವರಿಗೆ ಅನ್ಯಾಯ ಮಾಡಿದ್ದು ಕಾಂಗ್ರೇಸ್ಸಿಗರು ಎಂದು ಕೋಲಾರ ಸಂಸದ ಎಸ್.ಮುನಿಸ್ವಾಮಿ ಆರೋಪಿಸಿದರು.ನಗರದ ಬಿಜೆಪಿ ಸೇವಾ ಸೌಧದಲ್ಲಿ ಬಲವರ್ಧನೆಗಾಗಿ ಭೀಮ ಸಮಾವೇಶ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಲಿತರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ದಿ ಮಾಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ಆಕ್ರೋಶ ಹೊರಹಾಕಿದರು.ಪಂಚತೀರ್ಥ ಕ್ಷೇತ್ರಗಳ ಅಭಿವೃದ್ಧಿ
ಡಾ.ಅಂಬೇಡ್ಕರ್ ಮರಣದ ನಂತರ ಭಾರತ ರತ್ನ ಪ್ರಶಸ್ತಿ ಕೊಡುವಲ್ಲಿ ವಿಳಂಬ ಮಾಡಿದ್ದು ಕಾಂಗ್ರೇಸಿನವರು. ಆದರೇ ಭಾರತ ರತ್ನ ಕೊಡಲು ವಿ.ಪಿ.ಸಿಂಗ್ ಬರಬೇಕಾಯಿತು. ಅಂಬೇಡ್ಕರ್ ಅವರ ಪಂಚತೀರ್ಥ ಕ್ಷೇತ್ರಗಳ ಅಭಿವೃದ್ದಿಯೇ ಬಿಜೆಪಿಯ ಮುಖ್ಯ ಉದ್ದೇಶವಾಗಿದೆ ಎಂದರು.ಜ. 16 ರಂದು ಕೋಲಾರದ ನಾರಾಯಣಿ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ “ಬಲವರ್ಧನೆಗಾಗಿ ಭೀಮ ಸಮಾವೇಶ” ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಆ ಕಾರ್ಯಕ್ರಮಕ್ಕೆ ನಮ್ಮ ಸಮಾಜದ ಮುಖಂಡರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಗೂ ಗ್ರಾಮಗಳಲ್ಲಿ ನಮ್ಮನ್ನು ರಾಜಕೀಯವಾಗಿ ಬಳಸಿರುವ ಮುಖಂಡರುಗಳನ್ನು ಕರೆತರಬೇಕೆಂದು ಮನವಿ ಮಾಡಿದರು.ಮೋದಿ ಮತ್ತೊಮ್ಮೆ ಪ್ರಧಾನಿ
ಬಿಜಿಪಿ ಮುಖಂಡ ಸೀಕಲ್ ರಾಮಚಂದ್ರ ಗೌಡ ಮಾತನಾಡಿ ಬಿಜೆಪಿಯು ದಲಿತರ ಅಭಿವೃದ್ದಿಗಾಗಿ ಅವರ ಏಳಿಗೆಗಾಗಿ ಮೊದಲಿಂದಲೂ ಶ್ರಮಿಸುತ್ತಿದೆ. ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಲ್ಲಿ ಸಂಘಟಿತ , ಅಸಂಘಟಿತ ಕಾರ್ಮಿಕರು ನೊಂದಣಿ ಮಾಡಿಸುವ ಮೂಲಕ ಈ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳಬೇಕು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.ಕೇಂದ್ರ ಸರ್ಕಾರ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ತಲಾ 5 ಕೆಜಿ ಅಕ್ಕಿ ನೀಡುತ್ತಿದೆ. ಅದನ್ನು ಮರೆಮಾಚಿ ಕಾಂಗ್ರೆಸ್ 10 ಕೆಜೆ ಅಕ್ಕಿಯನ್ನು ನಾವು ಕೊಡುತ್ತೇವೆಂದು ಹೇಳುತ್ತಾರೆ. ಇದು ಸುಳ್ಳು ಹೇಳುವ ಸರ್ಕಾರವಾಗಿದೆ. ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ತಾವುಗಳು ಬೆಂಬಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ರಾಜಣ್ಣ , ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷರಾದ ಸುರೇಂದ್ರ ಗೌಡ , ಮುಖಂಡರಾದ ಆನಂದ್ ಗೌಡ, ನಗರ ಸಭಾ ಸದಸ್ಯರಾದ ಕೃಷ್ಣಮೂರ್ತಿ , ನಾರಾಯಣಸ್ವಾಮಿ, ಬೈರಗಾನಹಳ್ಳಿಯ ಗೋವಿಂದ , ಭರತ್ , ಅಭಿಲಾಷ್ , ರಾಮಾಂಜಿ , ಶಿವಕುಮಾರ್ ಹಾಗೂ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.