ಕಾಂಗ್ರೆಸ್ ಅಭಿಮಾನಿಗಳು ಒಗ್ಗಟ್ಟಿನ ಬಲ ಪ್ರದರ್ಶಿಸಿ: ಗೀತಾ

| Published : Apr 05 2024, 01:00 AM IST

ಕಾಂಗ್ರೆಸ್ ಅಭಿಮಾನಿಗಳು ಒಗ್ಗಟ್ಟಿನ ಬಲ ಪ್ರದರ್ಶಿಸಿ: ಗೀತಾ
Share this Article
  • FB
  • TW
  • Linkdin
  • Email

ಸಾರಾಂಶ

ಬ್ಲಾಕ್ ಕಾಂಗ್ರೆಸ್ ಸಮಿತಿವತಿಯಿಂದ ರಿಪ್ಪನ್‍ಪೇಟೆ ವೃತ್ತದಲ್ಲಿ ಹೊಸನಗರ-ರಿಪ್ಪನ್‍ಪೇಟೆ ಬ್ಲಾಕ್ ಕಾಂಗ್ರೆಸ್ ಘಟಕ ಕಚೇರಿಯನ್ನು ಲೋಕಸಭಾ ಚುನಾವಣೆ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ರಿಪ್ಪನಪೇಟೆ

ಕಾಂಗ್ರೆಸ್ ಸರ್ಕಾರ ರಾಜ್ಯ ಜನರಿಗೆ ಗ್ಯಾರಂಟಿ ನೀಡುವುದರ ಮೂಲಕ ಅಭಿವೃದ್ಧಿಯತ್ತ ಸಾಗುತ್ತಿದೆ. ಕಾಂಗ್ರೆಸ್ ಅಭಿಮಾನಿಗಳು ಜನಸಾಮಾನ್ಯರೊಂದಿಗೆ ಬೆರೆತು ಸಂಘಟನೆಯಿಂದ ಎಲ್ಲರೂ ಪಕ್ಷಕ್ಕೆ ಶಕ್ತಿ ತುಂಬುವಂತಾಗಬೇಕು ಎಂದು ಲೋಕಸಭಾ ಚುನಾವಣೆ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಸಮಿತಿವತಿಯಿಂದ ರಿಪ್ಪನ್‍ಪೇಟೆ ವೃತ್ತದಲ್ಲಿ ಗುರುವಾರ ಹೊಸನಗರ-ರಿಪ್ಪನ್‍ಪೇಟೆ ಬ್ಲಾಕ್ ಕಾಂಗ್ರೆಸ್ ಘಟಕ ಕಚೇರಿ ಉದ್ಘಾಟಿಸಿ ಮಾತನಾಡಿ, ಸಮಸ್ಯೆಗಳನ್ನು ಹೇಳಿಕೊಂಡು ಕಚೇರಿಗೆ ಬಂದ ಅಶಕ್ತರು ಶೋಷಿತ ಕುಟುಂಬಗಳಿಗೆ ನ್ಯಾಯ ಒದಗಿಸಿಕೊಡಬೇಕು. ಇಲ್ಲಿ ಪಕ್ಷಚಟುವಟಿಕೆಗಳಿಗೆ ಮಾತ್ರ ಹೆಚ್ಚು ಒತ್ತು ನೀಡದೆ. ಸಾರ್ವಜನಿಕಸಮಸ್ಯೆಗಳ ಪರಿಹಾರಿಸುವ ಬಗ್ಗೆಯೂ ಆಸಕ್ತಿ ತೋರಬೇಕು. ಜನಸಾಮಾನ್ಯರನ್ನು ವಿಶ್ವಾಸಕ್ಕೆ ತಗೆದುಕೊಂಡು ಕಾಂಗ್ರೆಸ್ ಪಕ್ಷದ ಜನಪರ ಯೋಜನೆಗಳ ಬಗ್ಗೆ ಮನವರಿಕೆ ಮಾಡಬೇಕು ಎಂದರು.

ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ರವರ ಗೆಲುವಿಗೆ ಎಲ್ಲರೂ ಕೂಡಿ ಸಂಘಟನಾತ್ಮಕ ಬಲ ಪ್ರದರ್ಶಿಸಬೇಕಿದೆ. ರಾಜಕೀಯದಲ್ಲಿ ದ್ವೇಷ-ಅಸೂಯೆ ಮನಸ್ಥಾಪಗಳು ಸಹಜ ಆದರೆ ಅದನ್ನು ಬದಿಗೆ ಇಟ್ಟು ಗೀತಾ ಅವರ ಗೆಲುವಿಗೆ ಎಲ್ಲರೂ ಒಂದಾಗಿ ಶ್ರಮಿಸಬೇಕು ಎಂದರು.

ಲೋಕಸಭಾ ಚುನಾವಣೆ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರತಡಕೆಲ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ಚಂದ್ರುಮೌಳಿಗೌಡರು, ನಟ ಶಿವರಾಜಕುಮಾರ್, ವಿಧಾನಪರಿಷತ್ ಮಾಜಿ ಸದಸ್ಯ ಅಯನೂರು ಮಂಜುನಾಥ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶ್ವೇತಾಬಂಡಿ, ಅನಿತಾಕುಮಾರಿ, ಬಂಡಿ ರಾಮಚಂದ್ರ, ಸಾಕಮ್ಮ, ಧನಲಕ್ಷ್ಮಿ, ಸುಮಸುಬ್ರಹ್ಮಣ್ಯ, ವೈ.ಎಚ್.ನಾಗರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ವಿ.ಈಶ್ವರಪ್ಪಗೌಡ, ಗಣಪತಿ ಗವಟೂರು ಇನ್ನಿತರ ಸ್ಥಳೀಯ ಮುಖಂಡರು ಇದ್ದರು.