ನಿಪ್ಪಾಣಿಗೆ ಬಂದು ಹೋದ ಅಂಬೇಡ್ಕರ್‌ನ್ನ ಮರೆತ ಕಾಂಗ್ರೆಸ್‌

| Published : Apr 14 2025, 01:17 AM IST

ಸಾರಾಂಶ

ಡಾ.ಬಿ.ಆರ್.ಅಂಬೇಡ್ಕರ್‌ ಅವರು ನಿಪ್ಪಾಣಿ ಬಂದು ಹೋಗಿ 100 ವರ್ಷ ಗತಿಸಿದ ಈ ಸುಸಂದರ್ಭದಲ್ಲಿ ಅಂಬೇಡ್ಕರ್‌ ಅವರನ್ನು ಹೆಮ್ಮೆಯಿಂದ ಗೌರವಿಸುವ ಕಾರ್ಯ ಬಿಜೆಪಿ ಪಕ್ಷದಿಂದ ಮಾಡುತ್ತಿದೆ. ಆದರೆ, ಕಾಂಗ್ರೆಸ್ ಪಕ್ಷ ಇದನ್ನು ಮರೆತಿದೆ ಎಂದು ಉತ್ತರ ಕನ್ನಡ ಲೋಕಸಭಾ ಮತಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಡಾ.ಬಿ.ಆರ್.ಅಂಬೇಡ್ಕರ್‌ ಅವರು ನಿಪ್ಪಾಣಿ ಬಂದು ಹೋಗಿ 100 ವರ್ಷ ಗತಿಸಿದ ಈ ಸುಸಂದರ್ಭದಲ್ಲಿ ಅಂಬೇಡ್ಕರ್‌ ಅವರನ್ನು ಹೆಮ್ಮೆಯಿಂದ ಗೌರವಿಸುವ ಕಾರ್ಯ ಬಿಜೆಪಿ ಪಕ್ಷದಿಂದ ಮಾಡುತ್ತಿದೆ. ಆದರೆ, ಕಾಂಗ್ರೆಸ್ ಪಕ್ಷ ಇದನ್ನು ಮರೆತಿದೆ ಎಂದು ಉತ್ತರ ಕನ್ನಡ ಲೋಕಸಭಾ ಮತಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಚನ್ನಮ್ಮಾಜಿ ವರ್ತುಳದಲ್ಲಿ ಭಾನುವಾರ ಭೀಮ ಹೆಜ್ಜೆ ಶತಮಾನದ ಸಂಭ್ರಮ ರಥಯಾತ್ರೆ ಮತ್ತು ಬೈಕ್ ರ್‍ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರದ ಭಾರತದ ದೇಶ ಹೇಗಿರಬೇಕು ಎಂಬುವುದನ್ನು ಶ್ರೇಷ್ಠ ಸಂವಿಧಾನದ ಮೂಲಕ ಕಟ್ಟಿಕೊಟ್ಟವರು ಡಾ.ಬಿ.ಆರ್.ಅಂಬೇಡ್ಕರ್‌ ಅವರು, ತಮ್ಮ ಜೀವನಾನುಭವನ್ನು ಸಂವಿಧಾನದಲ್ಲಿ ಸೇರಿರುವುದರಿಂದ ಅದು ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನವಾಗಿದೆ. ಶೋಷಿತರು, ದೀನ ದಲಿತರು, ತುಳಿತಕ್ಕೆ ಒಳಗಾದವರಿಗೆ ರಚನೆಯಾಗಿದ್ದು ಸಂವಿಧಾನ. ಅವರ ಕೊಡುಗೆ ಎಷ್ಟು ಸ್ಮರಿಸಿದರು ಕಡಿಮೆ ಎಂದರು. ನರೇಂದ್ರ ಮೋದಿಯವರ ಬಿಜೆಪಿ ಸರ್ಕಾರ ಡಾ.ಬಿ.ಆರ್.ಅಂಬೇಡ್ಕರ್‌ ಜನ್ಮ ಸ್ಥಳ ಸೇರಿದಂತೆ ಪಂಚ ಸ್ಥಳಗಳನ್ನು ಅಭಿವೃದ್ಧಿ ಪಡಿಸಿ ವಿಶೇಷ ಗೌರವ ನೀಡಿದ್ದಾರೆ. ಅಂಬೇಡ್ಕರ್‌ ಅವರ ತತ್ವ ಸಿದ್ಧಾಂತಗಳಿಗೆ, ವಿಚಾರಗಳಿಗೆ ಬಿಜೆಪಿ ಪಕ್ಷ ಧ್ವನಿಯಾಗಿದೆ ಎಂದು ತಿಳಿಸಿದರು.ಕಾಂಗ್ರೆಸ್ ಪಕ್ಷದಿಂದ ಅಂಬೇಡ್ಕರ್‌ಗೆ ಮೋಸ:

ಕಾಂಗ್ರೆಸ್ ಪಕ್ಷ ಹಾಗೂ ನೆಹರುರವರು ಅಂಬೇಡ್ಕರ್‌ ಅವರಿಗೆ ಪ್ರಾಮುಖ್ಯತೆ ಕೊಡಲಿಲ್ಲ. ಭಾರತದ ವಿಭಜನೆಗೆ ಅಂಬೇಡ್ಕರ್‌ ಅವರು ಮೊದಲು ಒಪ್ಪಿರಲಿಲ್ಲ. ಧರ್ಮ ಆಧಾರಿತ ದೇಶ ವಿಭಜನೆ ಮಾಡುವದಾದರೇ ಭಾರತದಲ್ಲಿ ಹಿಂದುಗಳು ಇರಲಿಲ್ಲ ಪಾಕಿಸ್ತಾನಕ್ಕೆ ಮುಸ್ಲಿಂರು ಹೋಗಲಿ ಎಂದು ಹೇಳಿದರು. ಎಲ್ಲರಿಗೂ ಎಲ್ಲ ಅವಕಾಶಗಳನ್ನು ಸಂವಿಧಾನದ ಮೂಲಕ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಅಂಬೇಡ್ಕರ್‌ ಅವರಿಗೆ ಮೋಸ ದ್ರೋಹ ವಂಚನೆ ಮಾಡಿದೆ. ಅವರ ಹೆಸರಿನಲ್ಲಿ ಮತ ಕೇಳಲು ಬರುವ ಕಾಂಗ್ರೆಸ್‌ಗರು ಅಂಬೇಡ್ಕರ್‌ ಅವರನ್ನು ಎರಡು ಬಾರಿ ಲೋಕಸಭೆಯಲ್ಲಿ ನಿಲ್ಲಿಸಿ ಸೋಲಿಸಿತ್ತು ಕಾಂಗ್ರೆಸ್ ಪಕ್ಷ ಎಂದು ಆರೋಪಿಸಿದರು.ಅಂಬೇಡ್ಕರ್‌ ತೀರಿ ಹೋದ ನಂತರ ಅವರ ಅಂತಿಮ ಸಂಸ್ಕಾರ ಮಾಡಲು ದೇಹಲಿ ಎಲ್ಲಿ ಜಾಗ ನೀಡಿರಲಿಲ್ಲ. ಅವರ ದೇಹ ರವಾನಿಸಲು ವಿಮಾನವನ್ನು ನೀಡಲಿಲ್ಲ. ದೇಣಿಗೆಯ ಮೂಲಕ ಅವರ ಪಾರ್ಥಿವ ಶಾರೀರವನ್ನು ತೆಗೆದುಕೊಂಡು ಹೋಗಲಾಯಿತು. ಕಾಂಗ್ರೆಸ್ ಪಕ್ಷದಿಂದ ಸಾಕಷ್ಟು ದ್ರೋಹ ಮಾಡಿದೆ. ದಲಿತರು ಶೋಷಿತರ ಪರವಾಗಿ ಯಾವುತ್ತು ಕಾಂಗ್ರೆಸ್ ಪಕ್ಷ ಧ್ವನಿ ಎತ್ತಿಲ್ಲ. ಮತ ಬ್ಯಾಂಕ್‌ ಮಾಡಿಕೊಂಡು ಅವರಿಗೆ ದ್ರೋಹ ಮಾಡಿದ್ದಾರೆ. ಬಿಜೆಪಿ ಪಕ್ಷದಿಂದ ಭೀಮ ಹೆಜ್ಜೆ ಶತಮಾನದ ಸಂಭ್ರಮ ಕಾರ್ಯಕ್ರಮದ ಮೂಲಕ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗುತ್ತಿದೆ. ಏ.15 ರಂದು ನಿಪ್ಪಾಣಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಎಲ್ಲರು ಈ ಕಾರ್ಯಕ್ರಮಕ್ಕೆ ಆಗಮಿಸಲು ಮನವಿ ಮಾಡಿಕೊಂಡರು. ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ರಥ ಯಾತ್ರೆಯನ್ನು ಕಿತ್ತೂರಿನಲ್ಲಿ ಬರಮಾಡಿಕೊಂಡರು. ಮಾಜಿ ಸಂಸದ ಮುನಿಸ್ವಾಮಿ, ಮಾಜಿ ಶಾಸಕ ಸಂಜಯ ಪಾಟೀಲ, ಲಕ್ಷ್ಮೀ ಇನಾಂದಾರ, ಎಸ್ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ, ಶ್ರೀಕರ ಕುಲಕರ್ಣಿ, ಸಂದೀಪ ದೇಶಪಾಂಡೆ, ಬಸವರಾಜ ಪರವಣ್ಣವರ, ನಿಜಲಿಂಗಯ್ಯ ಹಿರೇಮಠ, ಉಳವಪ್ಪ ಉಳ್ಳಾಗಡ್ಡಿ, ಚನ್ನಬಸಪ್ಪ ಮೊಖಾಶಿ, ಶಿವಾನಂದ ಹನಮಸಾಗರ, ಅಪ್ಪಣ ಪಾಗಾದ, ಬಸನಗೌಡ ಸಿದ್ರಾಮನಿ, ಯಲ್ಲಪ್ಪ ವಕ್ಕುಂದ, ವಿಜಯಕುಮಾರ ಶಿಂದೆ, ಬಸವರಾಜ ಮಾತನವರ ಸೇರಿದಂತೆ ಇತರರು ಇದ್ದರು.