ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಐದು ಸಾವಿರ ಕೋಟಿ ಹಗರಣ ಬೂದಿ ಮುಚ್ಚಿದ ಕೆಂಡದಂತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಮುಡಾ ಹಗರಣ ಇದೆ

ಕೊಪ್ಪಳ: ನೂರಾರು ಕೋಟಿ ಲೂಟಿ ಮಾಡಿದ ನಾಗೇಂದ್ರಗೆ ಮತ್ತೆ ಸಚಿವ ಸ್ಥಾನ ನೀಡುವ ಭಾಗ್ಯ ಕಾಂಗ್ರೆಸ್ ನೀಡುವ ಸಂಪ್ರದಾಯ ಬೆಳೆಸಿಕೊಂಡಿದೆ ಎಂದು ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ಬಸವರಾಜ ರಾಜೂರು ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಚಿವ ನಾಗೇಂದ್ರ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಜರುಗಿದ ಬಿಜೆಪಿಯ 2ನೇ ದಿನದ ಅನಿರ್ದಿಷ್ಟಾವಧಿ ಧರಣಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಚಿವ ನಾಗೇಂದ್ರ ಕಳೆದ ಸಿಎಂ ಸಿದ್ದರಾಮಯ್ಯ ಅವಧಿಯಲ್ಲಿ ಮಂತ್ರಿ ಆಗಿದ್ದರು. ವಾಲ್ಮೀಕಿ ನಿಗಮದ ಹಗರಣದಲ್ಲಿ ಭಾಗಿಯಾಗಿ ನೂರಾರು ಕೋಟಿ ಲೂಟಿ ಮಾಡಿದರು. ಆ ಲೂಟಿ ಮಾಡಿದ ಹಣ ಲೋಕಸಭೆ ಚುನಾವಣೆಗೆ ಹಾಗೂ ಅನ್ಯ ರಾಜ್ಯಗಳ ಚುನಾವಣೆಗೆ ಬಳಕೆ ಮಾಡಿದ್ದಾರೆ. ಕಾಂಗ್ರೆಸ್ಸಿನರ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ. ಈ ದುಡ್ಡು ಅವರ ಮನೆಯದ್ದಲ್ಲ. ಇದು ರಾಜ್ಯದ ಜನತೆಯ ಬೆವರು ಸುರಿಸಿದ ಹಣವಾಗಿದೆ. ಸಚಿವ ನಾಗೇಂದ್ರ ಆರೋಪ ಸಾಬೀತಾದ ಮೇಲೆ ಜೈಲಿಗೆ ಹಾಕಿದ್ದರು. ಈಗ ಹೊರಗಡೆ ಬಂದಿದ್ದಾರೆ. ₹187 ಕೋಟಿ ಹಗರಣ ಏನಾಗಿದೆ ಎಂಬುದರ ಬಗ್ಗೆ ಅವರ ಹೆಸರಿನ ಸಮೇತ ಹೇಳುತ್ತೇನೆ ಎಂದ ನಾಗೇಂದ್ರ ಮಾತಿಗೆ ಹೆದರಿ ಸಿಎಂ ಡಿಕೆಶಿ ಅವರಿಗೆ ಸಚಿವ ಸ್ಥಾನ ನೀಡಿದ್ದಾರೆ ಎಂದರು.

ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಐದು ಸಾವಿರ ಕೋಟಿ ಹಗರಣ ಬೂದಿ ಮುಚ್ಚಿದ ಕೆಂಡದಂತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಮುಡಾ ಹಗರಣ ಇದೆ. ಹೋರಾಟದ ಮೂಲಕ ಕಾಂಗ್ರೆಸ್ಸಿಗರಿಗೆ ತಕ್ಕ ಪಾಠ ಬಿಜೆಪಿಯೇ ಕಲಿಸುತ್ತದೆ. ಸಚಿವ ನಾಗೇಂದ್ರ ರಾಜೀನಾಮೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣವರ್ ಮಾತನಾಡಿ, ರಾಜ್ಯ ಸರ್ಕಾವು ಜನರ ತೆರಿಗೆ ಹಣ ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೀಸಲಾದ ಅನುದಾನದ ಬಳಕೆಯಲ್ಲಿ ಪಾರದರ್ಶಕತೆ ಕಾಪಾಡಬೇಕು. ಪರಿಶಿಷ್ಠ ಪಂಗಡದ ಸಮುದಾಯದ ಅಭಿವೃದ್ಧಿಗೆ ಮೀಸಲಾದ ನಿಗಮದ ಹಣದ ಕುರಿತು ಉಂಟಾಗಿರುವ ಆರೋಪಗಳಿಗೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

2ನೇ ದಿನ ಪ್ರತಿಭಟನೆ ಯಲಬುರ್ಗಾ ಬಿಜೆಪಿ ಮಂಡಲದವರಿಂದ ಜರುಗಿತು. ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ವಿಜಯಕುಮಾರ ತಾಳಕೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ ಹೆಸರೂರು, ಶಿವು ಅರಕೇರಿ, ಯಲಬುರ್ಗಾ ಮಂಡಲ ಅಧ್ಯಕ್ಷ ಮಾರುತಿ ಗಾವರಾಳ, ಅಮರೇಶ ಹುಬ್ಬಳ್ಳಿ, ವಿಶ್ವನಾಥ ಮರಿಬಸಪ್ಪನವರ್, ಬಸಲಿಂಗಪ್ಪ ಭೂತೆ, ಮಾಜಿ ಸೈನಿಕ ನಾಗರಾಜ ವೆಂಕಟಾಪೂರ, ಶ್ರೀನಿವಾಸ ತಿಮ್ಮಾಪೂರ, ಜಗದೀಶ ಸೂಡಿ, ಲಕ್ಷ್ಮಣ ಕಾಳಿ, ಹಂಚ್ಯಾಳಪ್ಪ ತಳವಾರ, ಪ್ರಕಾಶ ತಹಸೀಲ್ದಾರ, ಬಸವನಗೌಡ ತೊಂಡಿಹಾಳ, ಬಸವನಗೌಡ, ಉಮೇಶಗೌಡ ಪೊಪಾ, ಸೊಮನಗೌಡ ಪಾಟೀಲ ಸೋಂಪೂರು, ಬಸವರಾಜ ಹಾಳಕೇರಿ ಇತರರಿದ್ದರು.