ಜೈನ ಸಮಾಜದ ಜೊತೆಗೆ ಕಾಂಗ್ರೆಸ್ ಸರ್ಕಾರ

| Published : Jul 23 2025, 01:55 AM IST

ಸಾರಾಂಶ

ಸರ್ಕಾರದ ಇತಿಮಿತಿಯಲ್ಲಿ ಸಹಾಯ ಸಹಕಾರ ನೀಡಬೇಕಾಗುತ್ತಿದ್ದು, ನಿಮ್ಮ ಎಲ್ಲ ಕುಂದು-ಕೊರತೆಗಳನ್ನು ನಮ್ಮ ಸರ್ಕಾರದ ಮುಖ್ಯಮಂತ್ರಿಯವರ ಗಮನಕ್ಕೆ ತರುವ ಪ್ರಯತ್ನ ಮಾಡುತ್ತೇನೆ. ನಮ್ಮ ಕಾಂಗ್ರೆಸ್ ಸರ್ಕಾರ ಸದಾ ನಿಮ್ಮ ಜೊತೆಗೆ ನಿಲ್ಲುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಹಾರೂಗೇರಿ

ಸರ್ಕಾರದ ಇತಿಮಿತಿಯಲ್ಲಿ ಸಹಾಯ ಸಹಕಾರ ನೀಡಬೇಕಾಗುತ್ತಿದ್ದು, ನಿಮ್ಮ ಎಲ್ಲ ಕುಂದು-ಕೊರತೆಗಳನ್ನು ನಮ್ಮ ಸರ್ಕಾರದ ಮುಖ್ಯಮಂತ್ರಿಯವರ ಗಮನಕ್ಕೆ ತರುವ ಪ್ರಯತ್ನ ಮಾಡುತ್ತೇನೆ. ನಮ್ಮ ಕಾಂಗ್ರೆಸ್ ಸರ್ಕಾರ ಸದಾ ನಿಮ್ಮ ಜೊತೆಗೆ ನಿಲ್ಲುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಹೇಳಿದರು.

ಪಟ್ಟಣದ ಜೈನ ಸಮುದಾಯ ಭವನದಲ್ಲಿ ನಾಂದಣಿಯ ಜೀನಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಹಾಗೂ ಕೊಲ್ಹಾಪೂರದ ಪೂಜ್ಯ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ನಡೆದ ಸಂಸ್ಕಾರ, ಶಿಕ್ಷಣ, ಆರೋಗ್ಯ, ಕೃಷಿ ಮತ್ತು ಉದ್ಯೋಗ, ಸಮಾಜದ ಆರೋಗ್ಯಕ್ಕಾಗಿ ದಕ್ಷಿಣ ಭಾರತ ಜೈನ ಸಭೆ 103ನೇ ತ್ರೈವಾರ್ಷಿಕ ಅಧಿವೇಶನದಲ್ಲಿ ಮಾತನಾಡಿದ ಅವರು, ಶಿಕ್ಷಣ, ಕೃಷಿ, ರಾಜಕೀಯ ಮತ್ತು ಸಾಮಾಜಿಕ ಹಾಗೂ ಇನ್ನಿತರೇ ರಂಗದಲ್ಲಿಯೂ ಮುಂದೆ ಬರಬೇಕೆಂದು ದಕ್ಷಿಣ ಭಾರತ ಜೈನ ಸಭಾ ತಲೆ ಎತ್ತಿದೆ. ಕೃಷಿ ಅವಲಂಭಿತವಾದ ಸಮುದಾಯದಲ್ಲಿ ಅನೇಕ ಜನರು ಒಳ್ಳೆಯ ಹುದ್ದೆಗಳನ್ನು ಅಲಂಕಾರಿಸಿದ್ದಾರೆ ಎಂದರು.ಸಚಿವ ಡಿ.ಸುಧಾಕರ ಮಾತನಾಡಿ, ನಮ್ಮ ರಾಜ್ಯ ಸರ್ಕಾರ ಜೈನ ಸಮಾಜದ ಪರವಾಗಿ ನಿಲ್ಲುತ್ತದೆ. ಕಾಂಗ್ರೆಸ್ ಪಕ್ಷ ಎಲ್ಲ ಸಮಾಜದವರಿಗೂ ಸಾಮಾಜಿಕ ನ್ಯಾಯ ನಿಡುತ್ತಿರುವ ಪಕ್ಷ. ಆದ್ದರಿಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗದ ಜೈನ ಸಾಮಾಜಕ್ಕೆ ಮುಂದಿನ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳ ಆದೇಶದಂತೆ ಜೈನ ಸಮಾಜಕ್ಕೆ ನಿಗಮ ಮಾಡುತ್ತೇವೆ ಎಂದು ಭರವಸೆ ನೀಡಿದರು.ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಅಲ್ಪಸಂಖ್ಯಾತರಾದ ಜೈನ ಸಮುದಾಯದವರಿಗೆ ಸರ್ಕಾರದ ಸವಲತ್ತುಗಳು ಫಲಾನುಭವಿಗಳಿಗೆ ಸಿಗುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟ ಶಾಕಕರು ಮತ್ತು ಸಚಿವರು ಅತ್ಯಂತ ಮುಗ್ದರಾದ ಜೈನ ಸಮಾಜಕ್ಕೆ ಎಂಎಲ್ಸಿ ಮತ್ತು ನಿಗಮ ಮಾಡುವ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದರು.ಎಂಎಲ್ಸಿ ಚನ್ನರಾಜ ಹಟ್ಟಿಹೋಳಿ, ಮಾಜಿ ಸಚಿವ ವೀರಕುಮಾರ ಪಾಟೀಲ, ಶ್ರೀಮಂತ ಪಾಟೀಲ, ಮಹೇಶ ಕುಮಟಳ್ಳಿ, ಚಿದಾನಂದ ಸವದಿ, ಅಧ್ಯಕ್ಷ ಬಾಲಚಂದ್ರ ಪಾಟೀಲ, ಮಾಜಿ ಶಾಸಕ ರಮೇಶ ಕತ್ತಿ, ಜಿನ್ನಪ್ಪ ಅಸ್ಕಿ, ಅಪ್ಪಾಸಾಬ ಕುಲಗುಡೆ, ಡಿ.ಸಿ.ಸದಲಗಿ, ಜಿನ್ನಪ್ಪ ಅಸ್ಕಿ, ಮಹಾವೀರ ನಿಲಜಗಿ, ಉತ್ತಮ ಪಾಟೀಲ, ಬಾಬು ಪರಮಗೌಡರ, ಧೂಳಗೌಡ ಪಾಟೀಲ, ಸುರೇಶ ಬದನಿಕಾಯಿ, ಬಸಗೌಡ ನಾಗನೂರ, ಭೀಮಗೌಡ ಕರ್ಣವಾಡಿ, ಶ್ರೀಧರ ಸದಲಗಿ, ಜೈನ ಸಮುದಾಯದ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.