ಸಾರಾಂಶ
ತುರ್ವಿಹಾಳ : ರಾಜ್ಯದ ಕಾಂಗ್ರೆಸ್ ಸರ್ಕಾರದ ಅನೇಕ ಯೋಜನೆಗಳು ಜನರಪವಾಗಿವೆ ಎಂದು ನರಗಾಭಿವೃದ್ಧಿ ಸಚಿವ ಬೈರತಿ ಸುರೇಶ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀಗುರು ಅಮೋಘಸಿದ್ಧೇಶ್ವರ ಮಠದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಹಾಗೂ ನೀರಾವರಿ ಇಲಾಖೆಯ ಆವರಣದಲ್ಲಿ ನಡೆದ ಕನಕಭವನ, ಇಂದಿರಾ ಕ್ಯಾಂಟಿನ್, ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟನೆ ಮತ್ತು ಕನಕದಾಸ, ಸಂಗೋಳ್ಳಿ ರಾಯಣ್ಣ ಪುತ್ಥಳಿ ಅನಾವರಣಾ ಹಾಗೂ ಪಟ್ಟಣ ಸೇರಿ ಮಸ್ಕಿ ಕ್ಷೇತ್ರದಾದ್ಯಂತ 800 ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು, ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರು ಕ್ಷೇತ್ರದ ಅಭಿವೃದ್ಧಿಗೆ ಪ್ರಮಾಣಿಕವಾಗಿ ಪ್ರಯತ್ನಿಸುತ್ತಿದ್ದಾರೆ. ಅದರ ಭಾಗವಾಗಿಯೇ ಇಂದು 800 ಕೋಟಿ ರು. ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಕಾಲ ಕಾಲಕ್ಕೆ ಮಳೆ ಬೆಳೆಗಳು ಅಭಿವೃದ್ಧಿಗೆ ಪೂರಕವೋ ಅದೇ ಮಾದರಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಂದ ಸಮಗ್ರ ಪ್ರಗತಿಯನ್ನು ಸಾಧಿಸಬಹುದಾಗಿದೆ ಎಂದರು.
ಸಮಾರಂಭದಲ್ಲಿ ಆಶೀರ್ವಾದ ನೀಡಿದ ಕಾಗಿನೇಲೆ ಕನಕಗುರಪಿಠದ ನಿರಂಜನಾನಂದ ಪುರಿ ಸ್ವಾಮಿಗಳು,ಶರಣರ, ಸಂತರ ಹಾದಿಯಲ್ಲಿ ಸಾಗಿ ಲಕ್ಷಾಂತರ ಭಕ್ತಾದಿಗಳಿಗೆ ಶ್ರೀಗುರು ಅಮೋಘಸಿದ್ದೇಶ್ವರ ಮಠ ದೊಡ್ಡ ಹೆಮ್ಮರವಾಗಿ ಬೆಳೆಯಲಿ ಎಂದು ಆಶಿಸಿದರು. ಇತ್ತೀಚಿನ ದಿನಗಳಲ್ಲಿ ವರದಕ್ಷಣೆಯಂತಹ ಪಿಡುಗು ಸಮಾಜಕ್ಕೆ ಕಾಡುತ್ತಿದದ್ದನ್ನು ಗಮನಿಸಿದ ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರು ತಮ್ಮ ಮತ್ತು ತಮ್ಮ ಸಹೋದರನ ಮಗನ ಮದುವೆಯನ್ನು ಯಾವುದೇ ಆಡಂಬರ ವಿಲ್ಲದೇ ಸಾಮೂಹಿಕ ವಿವಾಹದಲ್ಲಿ ಜರುಗಿಸಿ ಸರಳತೆ ಹಾಗೂ ರಾಜಕೀಯದಲ್ಲಿ ಮಾದರಿ ಶಾಸಕರಾಗಿದ್ದಾರೆ ಎಂದರು.
ಇನ್ನು, ಬುಲ್ಲೆಟ್ ಬೈಕ್ ನಲ್ಲಿ ಮಾಜಿ ಸೈನಿಕ ನಿಂದ ಕರ್ನಾಟಕದಾದ್ಯಂತ ಸಂಚಾರ. ರಾಷ್ಟ್ರೀಯ ಹಬ್ಬಗಳು, ದಾರ್ಶನಿಕರು ಜಯಂತಿಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳಿಗೆ ಬುಲೆಟ್ ಬೈಕ್ ಮೂಲಕವೇ ಕರ್ನಾಟಕದಾದ್ಯಂತ ಸಂಚರಿಸುತ್ತ ಸಾರ್ವಜನಿಕರ ಭಾರೀ ಮೆಚ್ಚುಗೆಗೆ ಪಾತ್ರರಾದ ಗದಗ ಜಿಲ್ಲೆ ರೋಣ ತಾಲೂಕಿನ ಹೊಸಹಳ್ಳಿ ಗ್ರಾಮದಿಂದ ಆಗಮಿಸಿದ ಮಾಜಿ ಸೈನಿಕ ಮಲ್ಲಪ್ಪ ಮೇಟಿ ಅವರು, ಕನಕದಾಸರ ಹಾಗೂ ಸಂಗೊಳ್ಳಿ ರಾಯಣ್ಣನವರ ಸ್ತಬ್ಧಚಿತ್ರ ಹಾಗೂ ಧ್ವಜಗಳನ್ನು ಕಟ್ಟಿ ಪಟ್ಟಣದಾದ್ಯಂತ ಸಂಚರಿಸಿದುದು ವಿಶೇಷವಾಗಿತ್ತು.
ಸಮಾರಂಭದಲ್ಲಿ 74 ನವ ಜೋಡಿಗಳು ಹೊಸ ಜೀವನಕ್ಕೆ ಕಾಲಿಟ್ಟರು. ಈ ಸಚಿವರಾದ ಬೈರತಿ ಸುರೇಶ, ಎನ್.ಎಸ್.ಬೋಸರಾಜು ಶಿವರಾಜ ತಂಗಡಗಿ,ವಿವಿಧ ಮಠಗಳ ಮಠಾಧೀಶರಾದ,ಚಿದಾನಂದಯ್ಯ ಗುರುವಿನ್,ಅಮರ ಗುಂಡಯ್ಯ ಶಿವಾಚಾರ್ಯರು ಪುರವರ ಹಿರೇಮಠ ತುರ್ವಿಹಾಳ,ಗುಂಡಯ್ಯ ಅಪ್ಪಾಜಿ ಸರ್ವೇಶ್ವರ ಮಠ. ಹಾಗೂ ಸಚಿವರಾದ ಎನ್.ಎಸ್.ಬೋಸರಾಜ, ಶಿವರಾಜ್ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ, ಶಾಸಕರಾದ ಹಂಪಯ್ಯ ನಾಯಕ, ಬಸನಗೌಡ ದದ್ದಲ್, ಮಾಜಿ ಸಚಿವರಾದ ಅಮರೇಗೌಡ ಬಯ್ಯಾ ಪುರ, ಕೆ.ಶಿವನಗೌಡ ನಾಯಕ, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ವಿಧಾನ ಪರಿಷತ್ ಸದಸ್ಯ ಎ. ವಸಂತಕುಮಾರ, ವಿಧಾನಪರಿಷತ್ ಸದಸ್ಯ ಶರಣೇಗೌಡ ಬಯ್ಯಾಪುರ, ಕಾಡಾ ಅಧ್ಯಕ್ಷ ಹಸನ್ ಸಾಬ್ ದೋಟಿಹಾಳ, ತುರವಿಹಾಳ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಕೆ.ಶಾಮೀದ್ ಸಾಬ್,ಮಲ್ಲನಗೌಡ ದೇವರಮನಿ, ಪಾರೂಖ ಸಾಬ ಖಾಜಿ, ಉಮರ ಸಾಬ್, ನಲ್ಲವೇಂಕಟೆಶ್ವ ರಾವ್, ಕಾಂಗ್ರೆಸ್ ಮುಖಂಡ ಸಿದ್ದನಗೌಡ ತುರವಿಹಾಳ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಕೆಪಿಸಿಸಿ ಸದಸ್ಯ ನಲ್ಲಾ ವೆಂಕಟೇಶ್ವರರಾವ್, ಜಿಲ್ಲಾಧಿಕಾರಿ ನಿತೀಶ ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಸೇರಿದಂತೆ ಅನೇಕರು ಇದ್ದರು.
ವಿದ್ಯಾರ್ಥಿಗಳ ಶ್ರಮಕ್ಕೆ ಮೆಚ್ಚುಗೆಬೇಸಿಗೆಯಲ್ಲಿ ಮಠಕ್ಕೆ ಆಗಮಿಸಿದ ಸಾರ್ವಜನಿಕರಿಗೆ ನೀರು, ಸ್ವಚ್ಛತೆ ಸೇರಿದಂತೆ ಅನೇಕ ಕಾರ್ಯಗಳು ವಿದ್ಯಾರ್ಥಿಗಳು ಅತಿ ಅಚ್ಚುಕಟ್ಟಾಗಿ ನಿಭಾಯಿಸಿದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ಕೌಟ್ ಮತ್ತು ಗೈಡ್ಸ್ ಹಾಗೂ ರೋವೆರ್ ರೇಂಜರ್ಸ್ ವಿದ್ಯಾರ್ಥಿಗಳಿಂದ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ.