ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನಿಷ್ಕ್ರಿಯ: ಆರೋಪ

| Published : Apr 23 2024, 12:52 AM IST

ಸಾರಾಂಶ

ನಮ್ಮ ತೆರಿಗೆ ಹಣದಿಂದ ಸೌಲಭ್ಯ ಕೊಡುತ್ತಿದ್ದಾರೆ. ಬರೀ ಸುಳ್ಳು ಹೇಳಿ ಕಾಲಹರಣ ಮಾಡುತ್ತಿದ್ದಾರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನಿಷ್ಕ್ರಿಯಗೊಂಡಿದೆ.

ಹರಪನಹಳ್ಳಿ: ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ದೇಶವನ್ನು ಉತ್ತುಂಗಕ್ಕೆ ಕೊಂಡೊಯ್ಯಲಿದ್ದಾರೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಹೇಳಿದರು.

ತಾಲೂಕಿನ ಬಾಗಳಿ, ಕೊಂಗನಹೊಸೂರು, ಮೈದೂರು, ಚಿಗಟೇರಿ, ಬೆಣ್ಣಿಹಳ್ಳಿ, ಮತ್ತಿಹಳ್ಳಿ, ಸೇರಿದಂತೆ ಮುಂತಾದ ಗ್ರಾಮಗಳಲ್ಲಿ ಸೋಮವಾರ ಮತಯಾಚಿಸಿ ಮಾತನಾಡಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಯಾರಿಗೂ ಸರಿಯಾಗಿ ಸಿಗುತ್ತಿಲ್ಲ, ಅಲ್ಲದೇ ನಮ್ಮ ತೆರಿಗೆ ಹಣದಿಂದ ಸೌಲಭ್ಯ ಕೊಡುತ್ತಿದ್ದಾರೆ. ಬರೀ ಸುಳ್ಳು ಹೇಳಿ ಕಾಲಹರಣ ಮಾಡುತ್ತಿದ್ದಾರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನಿಷ್ಕ್ರಿಯಗೊಂಡಿದೆ ಎಂದು ಹೇಳಿದರು.

ಬಿಜೆಪಿ ದೇಶದ ರೈತರು, ಯುವಕರು, ಕಾರ್ಮಿಕರು ಮತ್ತು ಮಹಿಳೆಯರ ಏಳಿಗೆಗೆ ಶ್ರಮಿಸುತ್ತಿದ್ದರೆ, ಕಾಂಗ್ರೆಸ್ ಕೊಲೆ, ಸುಲಿಗೆ, ಕ್ರೀಮಿನಲ್‌ಗಳಿಗೆ ಕುಮ್ಮಕ್ಕು ಕೊಡುತ್ತಿದೆ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.

ಮಾಜಿ ಶಾಸಕ ಜಿ.ಕರುಣಾಕರರೆಡ್ಡಿ, ಕಮಲಾ ನಿರಾಣಿ ಮಾತನಾಡಿದರು.

ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಮಾಜಿ ಶಾಸಕ ಜಿ.ಕರುಣಾಕರರೆಡ್ಡಿ ಸಮ್ಮುಖದಲ್ಲಿ ಬಾಗಳಿ ಗ್ರಾಮದ ನಿವೃತ್ತ ಶಿಕ್ಷಕರಾದ ಕರಿಯಪ್ಪ, ಆನಂದಪ್ಪ, ಮುಖಂಡರಾದ ಎಚ್.ಉಮೇಶ್, ದೇವರಾಜ, ಸಿದ್ದೇಶ್ ಬಿಜೆಪಿಗೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಮುಖಂಡರಾದ ಆರ್.ಲೋಕೇಶ, ವಿಷ್ಣುರೆಡ್ಡಿ, ಯಡಿಹಳ್ಳಿ ಶೇಖರಪ್ಪ, ಎನ್.ಮಂಜುನಾಥ, ಬಾಗಳಿ ಬಿ.ಜಗದೀಶ, ಶೃಂಗಾರತೋಟ ನಿಂಗರಾಜ, ಚಿಕ್ಕಹಳ್ಳಿ ನಾಗಪ್ಪ, ಸಿದ್ದೇಶ, ಬಿ.ವೈ.ಹಾಲೇಶ್, ಕರಿಯಪ್ಪ, ಕೊಟ್ರೇಶ್, ದ್ವಾರಕೀಶ, ಮಲ್ಲಿಕಾರ್ಜುನ, ಗುಡ್ಡಪ್ಪ ಇದ್ದರು.