ಸಾರಾಂಶ
ರಾಜ್ಯದ ಗೃಹ ಮಂತ್ರಿಗಳು 52 ಜನರ ಬಂಧನವಾಗಿದೆ ಎಂದರೆ ಸಾಲದು, ನೈಜ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ಮುಂದೆ ಈ ರೀತಿಯ ಘಟನೆಗಳು ಆಗದಂತೆ ಕ್ರಮ ಜರುಗಿಸಬೇಕೆಂದು ಸತೀಸ್ ಕುಂಪಲ ಆಗ್ರಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು ಹಿಂದು ಧರ್ಮೀಯರು ಶ್ರದ್ಧಾ ಭಕ್ತಿ ಯಿಂದ ಪೂಜಿಸುವ ಗಣೇಶೋತ್ಸವದ ಮೆರವಣಿಗೆ ಮೇಲೆ ನಾಗಮಂಗಲ ದಲ್ಲಿ ಅನ್ಯಮತೀಯ ಮತಾಂಧ ಶಕ್ತಿಗಳು ಕಲ್ಲು ತೂರಾಟ ಮಾಡುವುದರ ಮೂಲಕ ದುಷ್ಕ್ರುತ್ಯ ಮೆರೆದಿದ್ದಾರೆ. ಇಂತಹ ಪ್ರಕರಣ ಪದೇಪದೇ ಮರುಕಳಿಸಲು ಕಾಂಗ್ರೆಸ್ ಸರ್ಕಾರ ಕ್ರಿಮಿನಲ್‌ಗಳ ಬಗ್ಗೆ ತೋರುತ್ತಿರುವ ಮೃದು ದೋರಣೆಯೇ ಪ್ರಮುಖ ಕಾರಣ ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಆರೋಪಿಸಿದ್ದಾರೆ.
ಹಿಂದುಗಳನ್ನು ಗುರಿಯಾಗಿಸಿ ಕಲ್ಲು ತೂರಾಟ ನಡೆಸಿರುವುದು ಇದೊಂದು ಪೂರ್ವಯೋಜಿತ ಕೃತ್ಯ ಎಂದು ಸಾಬೀತಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಹಿಂದುಗಳು ಯಾತನೆ ಅನುಭವಿಸುತ್ತಿದ್ದಾರೆ. ಪೊಲೀಸ್ ಇಲಾಖೆ ಸರ್ಕಾರದ ಕೈಗೊಂಬೆಯಂತೆ ಕಾರ್ಯ ನಿರ್ವಹಿಸುತ್ತಿದೆ. ನಾಗಮಂಗಲ ಪರಿಸರದಲ್ಲಿ ಗಲಭೆ ನಡೆಸಿದ ಕಿಡಿಗೇಡಿಗಳನ್ನು ಬಂಧಿಸುವ ಬದಲಿಗೆ ಸ್ಥಳೀಯ ಹಿಂದು ಮನೆಯೊಳಗೆ ಪೋಲಿಸರು ನುಗ್ಗಿ ಅಮಾಯಕ ಯುವಕರನ್ನು ಠಾಣೆಗೆ ಕರೆದೊಯ್ಯುವ ಮೂಲಕ ಗಾಯದ ಮೇಲೆ ಬರೆ ಎಳೆದಂತೆ ಪೋಲಿಸ್ ಇಲಾಖೆ ಮುಖಾಂತರ ಕಾಂಗ್ರೇಸ್ ಸರ್ಕಾರ ನಡೆದುಕೊಳ್ಳುತ್ತಿದೆ.ರಾಜ್ಯದ ಗೃಹ ಮಂತ್ರಿಗಳು 52 ಜನರ ಬಂಧನವಾಗಿದೆ ಎಂದರೆ ಸಾಲದು, ನೈಜ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಯಾಗ
ಬೇಕು, ಮುಂದೆ ಈ ರೀತಿಯ ಘಟನೆಗಳು ಆಗದಂತೆ ಕ್ರಮ ಜರುಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.ವಿವೇಕಾನಂದರು ಅಮೆರಿಕದಲ್ಲಿ ಭಾರತದ ಶ್ರೇಷ್ಠತೆ
ಸಾರಿದರೆ, ರಾಹುಲ್‌ಗಾಂಧಿ ಮಾನ ಕಳೆದರು: ಕುಂಪಲಮಂಗಳೂರು: ಸ್ವಾಮಿ ವಿವೇಕಾನಂದರು ಅಮೆರಿಕದಲ್ಲಿ ಭಾರತದ ಶ್ರೇಷ್ಠತೆ ಸಾರಿದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತದ ಮಾನ ಕಳೆದಿದ್ದಾರೆ ಎಂದು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಕಿಡಿಕಾರಿದ್ದಾರೆ.ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕದ ಅನಿವಾಸಿ ಭಾರತೀಯರಿಗೆ ಭಾರತ ಬಗ್ಗೆ ಅಭಿಮಾನ ಮೂಡಿಸುವಂತಹ ಪ್ರೇರಕ ಮಾತಗಳನ್ನು ಆಡಿದ್ದರು. ರಾಹುಲ್ ಗಾಂಧಿ ಚೀನಾದ ಬಗ್ಗೆ ಮೆಚ್ಚುಗೆ ಮಾತಗಳನ್ನು ಆಡುತ್ತಿರುವುದನ್ನು ನೋಡಿದರೆ ದೇಶದ ಚುಕ್ಕಾಣಿ ಇವರ ಕೈ ಸೇರಿದರೆ ಯಾವ ರೀತಿ ಅರಾಜಕತೆ ದೇಶದಲ್ಲಿ ಸೃಷ್ಟಿಯಾಗಬಹುದೆಂದು ಇದು ಸೂಚಿಸುತ್ತದೆ. ದೇಶದ ಯುವ ಜನತೆ ಹಿಂದೆ ನಡೆದಿರುವ ಅನಾಹುತ, ದೇಶವನ್ನು ಜಾತಿ ಆಧಾರದಲ್ಲಿ ಛಿದ್ರಗೊಳಿಸಿ ಅಧಿಕಾರದ ಗದ್ದುಗೆಗೆ ಬರುವ ಕಾಂಗ್ರೆಸ್‌ನ ವಿನಾಶ ಕಾಲೇ ವಿಪರೀತ ಬುದ್ದಿಗೆ ಪೂರ್ಣ ಅಂತ್ಯ ಹಾಕಬೇಕಿರುವುದು ಅವಶ್ಯವಾಗಿದೆ ಎಂದು ಸತೀಶ್ ಕುಂಪಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.