ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸಿದ್ದರಾಮಯ್ಯ ಅವರು 2006ರಲ್ಲಿ ಕಾಂಗ್ರೆಸ್ಸಿಗೆ ಬಂದರೂ ಕೂಡ. 2006 ರಿಂದ 2026 ವರೆಗೂ ಸಿದ್ದರಾಮಯ್ಯನವರಿಗೆ ಎಲ್ಲಾ ಹಂತಗಳು ಅಧಿಕಾರವನ್ನು ಕೊಟ್ಟಿದೆ, ಹಾಗಾಗಿ ಅವರಿಗೆ ಎಲ್ಲೂ ಸಹ ಕಾಂಗ್ರೆಸ್ ದ್ರೋಹ ಮಾಡಿಲ್ಲ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಉಗ್ರಪ್ಪ, ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದ ವಿಚಾರವನ್ನು ಪ್ರಸ್ತಾಪಿಸಿ ಅವರ ಸಾಮರ್ಥ್ಯವನ್ನು ಅವರ ಜನಾನುರಾಗಿ ಪ್ರವೃತ್ತಿಯನ್ನು ನೋಡಿ ಪಕ್ಷ ಅವಕಾಶ ನೀಡಿದೆ ಎಂದರು.ವ್ಯಕ್ತಿಗಳು ಪರಮನೆಂಟ್ ಅಲ್ಲ, ಅಲ್ಟಿಮೇಟ್ಲಿ ಪಾರ್ಟಿ, ದೇಶ ಪರ್ಮನೆಂಟ್ ಆಗುತ್ತದೆ. ಇವತ್ತು ನಾನು ಇರುತ್ತೇನೆ ನಾಳೆ ಇನ್ಯಾರೋ ಬರಬಹುದು ನನ್ನ ಜಾಗಕ್ಕೆ. ಆದರೆ, ನಾವು ಎಲ್ಲಿವರೆಗೂ ಇರುತ್ತೆವೊ ಬದ್ಧತೆಯಿಂದ ಇರೆಬೇಕು. ಅದು ಸಿದ್ದರಾಮಯ್ಯ ಆಗಿರಬಹುದು ಬೇರೆ ಯಾರೆ ಆಗಿರಬಹುದು ಎಂದರು.
ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಖಾತೆಗಳ ಅಸಮಾಧಾನ ಹಾಗೂ ಸಚಿವ ಸ್ಥಾನಕ್ಕೆ ಬೇಡಿಕೆ ಕುರಿತು ಮಾತನಾಡಿದ ವಿ.ಎಸ್.ಉಗ್ರಪ್ಪ ಅವರು, ನಾನು ಒಬ್ಬ ಸಣ್ಣ ಉಪಾಧ್ಯಕ್ಷ ಇರಬಹುದು ಮಾಜಿ ಸಂಸದ ಇರಬಹುದು. ರಾಜಕೀಯ ವ್ಯವಸ್ಥೆಯಲ್ಲಿ ಸಹಜವಾಗಿ ಜನಪ್ರತಿನಿಧಿಗಳು ಅವರ ಭಾವನೆಗಳನ್ನು ಪಕ್ಷದ ಮುಖಂಡರ ಮುಂದೆ ವ್ಯಕ್ತಪಡಿಸುತ್ತಾರೆ. ಅದು ಅವರ ಹಕ್ಕು. ಈ ಬಗ್ಗೆ ಅಂತಿಮವಾಗಿ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ. ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ ಎಂದರು.ಸಿದ್ದರಾಮಯ್ಯನವರು ಸಿಡಬ್ಲ್ಯೂಸಿಯಲ್ಲಿದ್ದಾರೆ. ಪಾರ್ಟಿಯ ಅತುನ್ನತ ಸ್ಥಾನದಲ್ಲಿದ್ದಾರೆ. ಅವರಿಗೂ ಕೂಡ ಇದನ್ನ ಸರಿ ಮಾಡುವ ಜವಾಬ್ದಾರಿ ಇದೆ. ಎಐಸಿಸಿ ಅಧ್ಯಕ್ಷರಾದ ಖರ್ಗೆ ಅವರಿದ್ದಾರೆ. ಸಹಜವಾಗಿ ಕೆಲವರು ನಾವು ಮಂತ್ರಿಗಳಾಗಬೇಕು ಅಂತ ಹೊರಟಿದ್ದಾರೆ. ಬಹಳಷ್ಟು ಜನರಿಗೆ ಅರ್ಹತೆ ಇದೆಯೋ ಇಲ್ಲವೋ? ಮತ್ತೊಂದು ಮಗದೊಂದು ಗೊತ್ತಿಲ್ಲ. ಅದಕ್ಕೆ ನಾನು ಹೇಳಿದೆ ರಾಮಾಯಣದಲ್ಲಿ ಹೇಳಿದಾರೆ. ಎಂಥವರು ಮಂತ್ರಿಗಳಾಗಬೇಕು ಅಂದ್ರೆ. ಅವರು ರಾಮಾಯಣವನ್ನು ತೆಗೆದು ಅಯೋಧ್ಯ ಕಾಂಡ ಸ್ತೋತ್ರ ಓದಿದ್ರೆ ಗೊತ್ತಾಗುತ್ತದೆ. ಬಹಳಷ್ಟು ಜನ ಶಾಸಕರಾದ ತಕ್ಷಣ ಮಂತ್ರಿಗಳಾಗಬೇಕು ಅಂತ ಹೊರಟಿದ್ದಾರೆ. ಸಮಗ್ರವಾಗಿ ರಾಜ್ಯದ ಕಾಪಾಡುವಂಥವರು. ಸಂವಿಧಾನ ಕಾಪಾಡುವಂತವರು. ಸಂವಿಧಾನ ಅರ್ಥ ಮಾಡಿಕೊಂಡವರು. ಸಾಮಾಜಿಕ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡಿರುವವರು. ಈ ರಾಜ್ಯದ ಎಸ್ಸಿ, ಎಸ್ಟಿ, ಒಬಿಸಿ, ಪೈನಾರಿಟಿ ಎಲ್ಲ ವರ್ಗದ ಜನರ. ದುಃಖದುಮ್ಮಾನಗಳನ್ನು ಅರ್ಥ ಮಾಡಿಕೊಂಡವರನ್ನು ಮಂತ್ರಿ ಮಂಡಲದಲ್ಲಿ ತಂದರೆ ರಾಜ್ಯ ಸರ್ವತೋಮುಖ ಅಭಿವೃದ್ಧಿ ಆಗಲಿಕ್ಕೆ ಸಾಧ್ಯ. ಆ ದಿಕ್ಕಿನಲ್ಲಿ ನಮ್ಮ ಹೈಕಮಾಂಡ್ ಗಮನಹರಿಸುತ್ತದೆ ಎಂಬ ವಿಶ್ವಾಸ ಇದೆ ಎಂದರುಭಗವಾನಗೆ ರಾಮಾಯಣದ ಬಗ್ಗೆ ಅರಿವು ಇಲ್ಲ:
ವಾಲ್ಮೀಕಿ ರಾಮಾಯಣದ ಬಗ್ಗೆ ಕೆ.ಎಸ್.ಭಗವಾನ್ ಅವರು ವಿವಾದಾತ್ಮಕ ಹೇಳಿಕೆ ಕುರಿತು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ಭಗವಾನ್ ಅವರು ವಯಸ್ಸಿನ ಕಾರಣವೊ ಏನೋ ಗೊತ್ತಿಲ್ಲ. ಏನೇನೊ ಬಾಯಿಗೆ ಬಂದ ಹಾಗೆ ಮಾತಾಡ್ತಾರೆ. ಅವರನ್ನು ನಾನು ಅನೇಕ ಸಾರಿ ಇಗ್ನೋರ್ ಮಾಡಬೇಕು ಅಂತಿದ್ದೆ. ಮಹರ್ಷಿ ವಾಲ್ಮೀಕಿ ರಾಮಾಯಣ ಬಗ್ಗೆ ಕೆಟ್ಟ ರೀತಿ ಮಾತಾಡಿದ್ದಾನೆ. ಇವರಿಗೆ ರಾಮಾಯಣದ ಬಗ್ಗೆ ಅರಿವು ಇಲ್ಲ. ಕೆ.ಎಸ್.ಭಗವಾನ್ ಮನಸಾ ಇಚ್ಚೆ ಮಾತಾಡ್ತಾಯಿಲ್ಲ, ಹೆಸರು ಭಗವಾನ್ ಅಂತ ಇಟ್ಕೊಂಡು.ಗಾಂಧೀಜಿ ಬಯಸಿದ್ದು ಗಾಂಧಿ ರಾಜ್ಯವಲ್ಲ, ರಾಮರಾಜ್ಯ. ಗಾಂಧಿಗಿಂತ ದೊಡ್ಡ ಮನುಷ್ಯನಾ ನೀನು. ಸೋ ಕಾಲ್ಡ್ ಇಂಟೆಲೆಕ್ಚುವಲ್ ಅಂತ ತೋರ್ಪಡಿಸಿಕೊಳ್ತಿರುವ ಭಗವಾನ್ ಈ ರೀತಿ ಮಾತಾಡಬಾರದು. ವಾಲ್ಮೀಕಿ ಸಮಾಜದ ಮೇಲೆ ಸಿಟ್ಟಿದ್ದರೆ ಈ ರೀತಿ ಮಾತಾಡೋದು ಶೋಭೆ ತರೋದಿಲ್ಲ. ನಮ ಭಾವನೆಗೆ ಧಕ್ಕೆ ಮಾಡಿದ್ದೀರಿ ಈ ದೇಶದ ಜನರ ಕ್ಷಮೆ ಕೇಳಬೇಕೆಂಬ ಆಗ್ರಹವನ್ನು ಉಗ್ರಪ್ಪ ಮಾಡಿದರು.ಭೋವಿ ಜಾತಿನೇ ಬೇರೆ, ವಡ್ಡರ ಜಾತಿನೇ ಬೇರೆ: ಉಗ್ರಪ್ಪ
ರಾಜ್ಯದಲ್ಲಿ ಭೋವಿ ಮತ್ತು ವಡ್ಡರ ಸಮಾಜದ ಜನರಿಗೆ ಪರಿಶಿಷ್ಟ ಜಾತಿ (ಎಸ್ಸಿ) ಪ್ರಮಾಣಪತ್ರ ನೀಡುವ ವಿಚಾರದಲ್ಲಿ ಅಧಿಕಾರಿಗಳು ಸೃಷ್ಟಿಸುತ್ತಿರುವ ಗೊಂದಲಕ್ಕೆ ತೆರೆ ಎಳೆಯಬೇಕು ಹಾಗೂ ಭೋವಿ ಮತ್ತು ವಡ್ಡರ ಜಾತಿಗಳು ಸಂಪೂರ್ಣ ವಿಭಿನ್ನ ಎಂಬ ಸತ್ಯವನ್ನು ಸರ್ಕಾರ ಒಪ್ಪಿಕೊಳ್ಳಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು.
ಈ ಎರಡು ಜಾತಿಗಳ ನಡುವಿನ ವ್ಯತ್ಯಾಸ ಮತ್ತು ಇತಿಹಾಸವನ್ನು ಸ್ಪಷ್ಟಪಡಿಸಿದ್ದು, ಅಧಿಕಾರಿಗಳ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಪ್ರಸ್ತುತ ಸರ್ಕಾರಿ ಕಚೇರಿಗಳಲ್ಲಿ ಭೋವಿ ಜಾತಿಯವರು ಎಸ್ಸಿ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದಾಗ ಅಧಿಕಾರಿಗಳು ತಪ್ಪು ತಿಳುವಳಿಕೆಯಿಂದ ವರ್ತಿಸುತ್ತಿದ್ದಾರೆ. ಅಧಿಕಾರಿಗಳು ವಡ್ಡರ ಸಮಾಜಕ್ಕೂ ನಿಮಗೂ ಸಂಬಂಧವಿದೆಯೇ ಎಂದು ಪ್ರಶ್ನಿಸುತ್ತಿದ್ದಾರೆ. ಸಂಬಂಧವಿದ್ದರೆ ಮಾತ್ರ ಪ್ರಮಾಣಪತ್ರ ನೀಡಲಾಗುವುದು, ಇಲ್ಲದಿದ್ದರೆ ಇಲ್ಲ ಎನ್ನುವ ನಿಯಮಗಳನ್ನು ಹೇರುತ್ತಿದ್ದಾರೆ. ಈ ಗೊಂದಲದಿಂದಾಗಿ ಇಡೀ ರಾಜ್ಯದಲ್ಲಿ ಒಂದು ತಾಲೂಕು ಪಂಚಾಯಿತಿ ಸದಸ್ಯ ಸ್ಥಾನವೂ ಇಲ್ಲದ ಅತ್ಯಂತ ಸಣ್ಣ ಮತ್ತು ಹಿಂದುಳಿದ ಸಮುದಾಯದ ಜನರಿಗೆ ತೀವ್ರ ಅನ್ಯಾಯವಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
1950ರ ಎಸ್ಸಿ ಪಟ್ಟಿಯಲ್ಲಿ ಆರಂಭದಲ್ಲೇ ಭೋವಿ ಸಮಾಜದವರನ್ನು (ಪಲ್ಲಕ್ಕಿ ಹೊರವರು, ಬೇಡದವರು) ಎಸ್ಸಿ ಪಟ್ಟಿಗೆ ಸೇರಿಸಲಾಗಿತ್ತು. ತದನಂತರ ದೇವರಾಜ ಅರಸು ಅವರ ಕಾಲದಲ್ಲಿ ವಡ್ಡರ ಸಮಾಜವೂ ಎಸ್ಸಿ ಪಟ್ಟಿಗೆ ಸೇರ್ಪಡೆಯಾಯಿತು ಎಂದರು.ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ವಾಲ್ಮೀಕಿ ನಾಯಕರು, ಮರಾಠಿ ನಾಯಕರು, ಕಾಡು ಕುರುಬರು ಹಾಗೂ ಜೇನು ಕುರುಬರು ಹೇಗೆ ಪ್ರತ್ಯೇಕ ಮತ್ತು ವಿಭಿನ್ನ ಜಾತಿಗಳಾಗಿದ್ದಾರೋ, ಅದೇ ರೀತಿ ಭೋವಿ ಜಾತಿನೇ ಬೇರೆ ಮತ್ತು ವಡ್ಡರ ಜಾತಿನೇ ಬೇರೆ ಎಂದು ಸ್ಪಷ್ಟಪಡಿಸಿದ್ದಾರೆ.