ಸಾರಾಂಶ
ಕಾಂಗ್ರೆಸ್ ನಾಯಕರಿಗೆ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಹಳೇ ಡೈಲಾಗ್‌ಗಳಾದ ೧೫ ಲಕ್ಷ ಖಾತೆಗೆ ಹಾಕುದ್ರಾ? ೨ ಕೋಟಿ ಉದ್ಯೋಗ ಸೃಷ್ಟಿಸಿದ್ದೀರಾ? ಇದು ಬಿಟ್ಟರೆ ಬೇರೇನೂ ಸಿಗುತ್ತಿಲ್ಲ ಎಂದು ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕಾಂಗ್ರೇಸ್ ನಾಯಕರಿಗೆ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಹಳೇ ಡೈಲಾಗ್‌ಗಳಾದ ೧೫ ಲಕ್ಷ ಖಾತೆಗೆ ಹಾಕುದ್ರಾ? ೨ ಕೋಟಿ ಉದ್ಯೋಗ ಸೃಷ್ಟಿಸಿದ್ದೀರಾ? ಇದು ಬಿಟ್ಟರೆ ಬೇರೇನೂ ಸಿಗುತ್ತಿಲ್ಲ ಎಂದು ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್ ತಿಳಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಕಳೆದ ೧೦ ವರ್ಷಗಳಿಂದ ಉತ್ತಮ ಆಡಳಿತ ನಡೆಸಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಹಗರಣಗಳಂತೆ, ಈ ೧೦ ವರ್ಷಗಳಲ್ಲಿ ಯಾವುದೇ ಹಗರಣಗಳು ನಡೆದಿಲ್ಲ. ಅದಕ್ಕೆ ಕಾಂಗ್ರೇಸ್‌ನವರಿಗೆ ಟೀಕಿಸಲು ಬೇರೆ ಏನು ಸಿಗುತ್ತಿಲ್ಲ.ಕೇಂದ್ರ ಹಲವಾರು ಅಭಿವೃದ್ಧಿ ಕೆಲಸ ಮಾಡಿದೆ:
ಕಳೆದ ೧೦ ವರ್ಷದಲ್ಲಿ ದೇಶದಲ್ಲಿ ಉತ್ತಮ ರಸ್ತೆಗಳು, ರೈಲ್ವೆ ಯೋಜನೆಗಳು, ಆಯುಷ್ಮಾನ್ ಭಾರತ್ ಕಾರ್ಡ್ ಮೂಲಕ ೫ ಲಕ್ಷದ ತನಕ ಉಚಿತವಾಗಿ ಆರೋಗ್ಯ ಸೇವೆ, ಜಲ ಜೀವನ್ ಮಿಷನ್ ಅಡಿ ಕುಡಿಯುವ ನೀರು ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೇಂದ್ರ ಸರ್ಕಾರ ಮಾಡಿದೆ ವಿಶ್ವದಲ್ಲೇ ಮಾದರಿಯಾಗಿ ನಡೆಯುತ್ತಿದೆ. ಭಾರತಕ್ಕೆ ವಿಶ್ವದಲ್ಲೇ ವಿಶೇಷ ಗೌರವ ತಂದುಕೊಟ್ಟಿದ್ದಾರೆ ಎಂದರು.ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಬರುವುದು ಗ್ಯಾರಂಟಿ:
ಮೋದಿ ನೇತೃತ್ವದಲ್ಲಿ ದೇಶ ಮತ್ತೊಮ್ಮೆ ಮುನ್ನೆಡಯಬೇಕು ಎಂಬುದು ದೇಶದ ಬಹುಪಾಲು ಜನರ ಆಸೆ ಆದ್ದರಿಂದ ನೂರಕ್ಕೆ ನೂರು ಮತ್ತೇ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಬರುವುದು ಗ್ಯಾರಂಟಿ. ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ನಾವು ೨೮ಕ್ಕೆ ೨೮ ಸೀಟು ಗೆಲ್ಲುತ್ತೇವೆ, ರಾಜ್ಯದಲ್ಲಿ ಕಾಂಗ್ರೆಸ್ ಗೆಲುವು ಭ್ರಮೆಯಾಗಿದೆ ಎಂದು ಲೇವಡಿ ಮಾಡಿದರು.ರೈತರಿಗೆ ಯಾವ ಗ್ಯಾರಂಟಿಯೂ ಇಲ್ಲ: ರಾಜ್ಯದ ಕಾಂಗ್ರೆಸ್ ಸರ್ಕಾರ ಮಹಿಳೆಯರು ಹಾಗೂ ಯುವಕರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಿದೆ, ಅದು ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಒಂದು ಕಡೆ ಕೊಟ್ಟು ಇನ್ನೊಂದು ಕಡೆ ಕಿತ್ತುಕೊಳ್ಳುವ ಕೆಲಸವನ್ನು ಮಾಡುತ್ತಿದ್ದು ರಾಜ್ಯದ ರೈತರಿಗೆ ಯಾವುದೇ ಗ್ಯಾರಂಟಿ ಯೋಜನೆಗಳನ್ನು ನೀಡದೆ ಮೋಸ ಮಾಡಿದೆ ಎಂದು ಆರೋಪಿಸಿದರು. ಗ್ಯಾರಂಟಿ ಹೆಸರಲ್ಲಿ ಕಾಂಗ್ರೆಸ್ ಜನರನ್ನು ದಿಕ್ಕು ತಪ್ಪಿಸುತ್ತಿದೆ:
ರೈತರ ಜಮೀನುಗಳಿಗೆ ದಿನನಿತ್ಯ ೭ ಗಂಟೆ ನಿರಂತರ ವಿದ್ಯುತ್ ನೀಡದೆ ತಾರತಮ್ಯ ಮಾಡುತ್ತಿದೆ, ೫ ಗ್ಯಾರಂಟಿಗಳನ್ನು ನೀಡುತ್ತೇವೆ ಎಂದು ಕಾಂಗ್ರೆಸ್ ಜನರನ್ನು ದಿಕ್ಕು ತಪ್ಪಿಸುತ್ತಿದೆ. ೫ ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ಸಿಗುತ್ತಿಲ್ಲ. ರಾಜ್ಯದಲ್ಲಿ ಭೀಕರ ಬರಗಾಲವಿದೆ, ಮೊದಲು ಇದಕ್ಕೆ ಪರಿಹಾರ ನೀಡಿ ಆಮೇಲೆ ಕೇಂದ್ರ ಸರ್ಕಾರದ ಮೇಲೆ ಕೈ ತೋರಿಸಲಿ ಎಂದರು.ಕಾಂಗ್ರೆಸ್‌ಗೆ ರೈತರ ಬಗ್ಗೆ ಕಾಳಜಿ ಇಲ್ಲ:
ರಾಜ್ಯ ಸರ್ಕಾರ ೫ ಗ್ಯಾರಂಟಿ ಯೋಜನೆಗಳಿಂದ ದಿವಾಳಿಯಾಗಿದ್ದು ಬೊಕ್ಕಸ ಖಾಲಿಯಾಗಿದೆ. ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ೨೦೧೮ರಲ್ಲಿ ೨೫ ಸಾವಿರ ಕೋಟಿ ರು. ರೈತರ ಸಾಲಮನ್ನಾ ಮಾಡಿದ್ದರು. ಆದರೆ, ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ. ಯಾವುದೇ ನೀರಾವರಿ ಯೋಜನೆಗಳಿಲ್ಲ. ಎಸ್‌ಇಪಿ, ಟಿಎಸ್‌ಪಿ ಯೋಜನೆಯ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು ಈ ಹಿಂದೆ ಬಿಜೆಪಿಯೊಂದಿಗೆ ೨೦ ತಿಂಗಳು ಹಾಗೂ ಕಾಂಗ್ರೆಸ್‌ನೊಂದಿಗೆ ೧೪ ತಿಂಗಳ ಕಾಲ ನಡೆದ ಆಡಳಿತದಲ್ಲಿ ಸಚಿವನಾಗಿದ್ದು ಬಿಜೆಪಿಯೊಂದಿಗೆ ಇದ್ದ ಹೊಂದಾಣಿಕೆ ಕಾಂಗ್ರೆಸ್‌ನೊಂದಿಗೆ ಇರಲಿಲ್ಲ ಎಂದರು.ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್, ಜೆಡಿಎಸ್ ರಾಜ್ಯ ವಕ್ತಾರ ಸಿ.ಎಂ.ನಾಗರಾಜು, ಜೆಡಿಎಸ್ ಮುಖಂಡ ಬಿ.ಪುಟ್ಟಸ್ವಾಮಿ, ಬಿಜೆಪಿ ಮುಖಂಡ ಸಿ.ಎನ್.ಬಾಲರಾಜ್, ಬಿಜೆಪಿ ಜಿಲ್ಲಾ ವಕ್ತಾರ ಕಾಡಹಳ್ಳಿ ಕುಮಾರ್ ಇದ್ದರು.
ಕುಮಾರಸ್ವಾಮಿ ಮಹಿಳೆಯರು ಬಗ್ಗೆ ತಪ್ಪಾಗಿ ಮಾತನಾಡಿಲ್ಲ. ಕಾಂಗ್ರೆಸ್ ಪಕ್ಷದವರಿಗೆ ವಿಚಾರ ಇಲ್ಲದೆ. ಇದನ್ನು ತಿರುಚಿದ್ದಾರೆ. ಕುಮಾರಸ್ವಾಮಿಗೆ ಮಹಿಳೆಯರ ಬಗ್ಗೆ ಅಪಾರ ಗೌರವ ಇದೆ ಕಾಂಗ್ರೆಸ್ ಪಕ್ಷದವರಿಗೆ ದೇಶದಲ್ಲೇ ಅಸ್ತಿತ್ವವೇ ಇಲ್ಲ. ೧೧ ತಿಂಗಳಲ್ಲಿ ರಾಜ್ಯ ಸರ್ಕಾರದ ಬಂಡವಾಳ ಬಯಲಾಗಿದೆ.ಬಂಡೆಪ್ಪ ಕಾಶಂಪೂರ್, ಮಾಜಿ ಸಚಿವ