ಸಾರಾಂಶ
ದೇಶದಲ್ಲಿ ಮತಗಳ್ಳತನದಿಂದ ಸಂವಿಧಾನ ಅಡಿಪಾಯಕ್ಕೆ ಧಕ್ಕೆಯಾಗುತ್ತಿದೆ ಎಂದು ಹರಿಹರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಮುಖ್ಯಸ್ಥ ನಂದಿಗಾವಿ ಶ್ರೀನಿವಾಸ್ ಕೇಂದ್ರ ಸರ್ಕಾರ ವಿರುದ್ಧ ದೂರಿದ್ದಾರೆ.
ಮಲೇಬೆನ್ನೂರು: ದೇಶದಲ್ಲಿ ಮತಗಳ್ಳತನದಿಂದ ಸಂವಿಧಾನ ಅಡಿಪಾಯಕ್ಕೆ ಧಕ್ಕೆಯಾಗುತ್ತಿದೆ ಎಂದು ಹರಿಹರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಮುಖ್ಯಸ್ಥ ನಂದಿಗಾವಿ ಶ್ರೀನಿವಾಸ್ ಕೇಂದ್ರ ಸರ್ಕಾರ ವಿರುದ್ಧ ದೂರಿದರು.
ಪಟ್ಟಣದ ವೃತ್ತದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಏರ್ಪಡಿಸಿದ್ದ ಮತಗಳ್ಳರೇ ಕುರ್ಚಿ ಬಿಡಿ ಎಂದು ಒತ್ತಾಯಿಸಿ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೂಚನೆ ಮೇರೆಗೆ ಅವರಿಗೆ ಬೆಂಬಲ ನೀಡಲು, ಪಕ್ಷ ಬಲಪಡಿಸಲು ಪ್ರಜಾಪ್ರಭುತ್ವದಲ್ಲಿ ಮತದಾನ ಹಕ್ಕು ಇದೆ. ಅದಕ್ಕೆ ಕೇಂದ್ರ ಸರ್ಕಾರ ಕನ್ನ ಹಾಕುತ್ತಿದೆ. ನಕಲಿ ಮತದಾರರನ್ನು ಸೃಷ್ಟಿಸಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿರುವ ಕ್ರಮ ಖಂಡನೀಯ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬಿದ್ ಅಲಿ ಮಾತನಾಡಿ, ಮತಗಳ್ಳರೇ ಗಡಿಬಿಡಿ ಎಂದು ಸಂದೇಶ ನೀಡುತ್ತಾ ಲೋಕಸಭೆಯಿಂದ ಪ್ರತಿ ಹಳ್ಳಿಯವರೆಗೂ ಅಭಿಯಾನ ನಡೆಯುತ್ತಿದೆ. ಬ್ರಿಟಿಷ್ ಆಳ್ವಿಕೆ ವಿರುದ್ಧ ಹೋರಾಟ ಮಾಡಿದಂತೆ ದೇಶದಲ್ಲಿ ಭಾಜಪ ಸರ್ಕಾರದ ವಿರುದ್ಧವೂ ಬೃಹತ್ ಪ್ರತಿಭಟನೆ ಮಾಡಬೇಕಾದ ಸನ್ನಿವೇಶ ಬಂದಿದೆ. ಭಂಡತನದ ಕೇಂದ್ರ ಸರ್ಕಾರ ಬೇಗನೇ ಪತನವಾಗಲಿ ಎಂದರು.
ಮುಖಂಡರಾದ ಗಿರೀಶ್, ಜಿ.ಮಂಜುನಾಥ್, ಬೆಣ್ಣೆಹಳ್ಳಿ ಹಾಲೇಶಪ್ಪ, ನಯಾಜ್, ಫಾಜಿಲ್, ಜಾಕಿರ್, ಬೀರಪ್ಪ, ಕೊಟ್ರಪ್ಪ, ಕುಮಾರ್, ಬಿ.ವೀರಯ್ಯ, ಅರೀಫ್, ಯಶವಂತ್, ಕನ್ನಪ್ಪ, ರಾಜಪ್ಪ, ಸುರೇಶ್, ನಜೀರ್, ಚಂದ್ರಶೇಖರ್, ಬಾಷಾ, ತಾಹಿರ್.ಶ್ರೀನಿಧಿ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.- - -
-ಚಿತ್ರ-೧: ಮಲೇಬೆನ್ನೂರಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಮೇಣದ ಬತ್ತಿಗಳ ಬೆಳಗಿಸಿ ಪ್ರತಿಭಟನೆ ನಡೆಸಲಾಯಿತು.