ಪಹಲ್ಗಾಮ್‌ ದುರ್ಘಟನೆಗೆ ಕಾಂಗ್ರೆಸ್‌ನಿಂದ ಮೌನ ಪ್ರತಿಭಟನೆ

| Published : Apr 27 2025, 01:31 AM IST

ಪಹಲ್ಗಾಮ್‌ ದುರ್ಘಟನೆಗೆ ಕಾಂಗ್ರೆಸ್‌ನಿಂದ ಮೌನ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟವರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಮೇಣದ ಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟವರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಮೇಣದ ಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಿದರು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಶುಕ್ರವಾರ ಸಂಜೆ ಹೊರಟ ಮೌನ ಮೆರವಣಿಗೆಯು ಎನ್.ಆರ್. ವೃತ್ತಕ್ಕೆ ಬಂದು ಕೆಲ ಸಮಯ ಮಾನವ ಸರಪಳಿ ನಿರ್ಮಿಸಿ ಕಾಶ್ಮೀರದಲ್ಲಿ ನಡೆದ ದಾಳಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಇದೆ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್ ಮಾಧ್ಯಮದೊಂದಿಗೆ ಮಾತನಾಡಿ, ಅಖಂಡ ಭಾರತದ ಜನಸಂಖ್ಯೆಗೆ ಸವಾಲು ಹಾಕಿರುವ ಟೆರೆರಿಸ್ಟ್ ಗಳು ಕಾಶ್ಮೀರದಲ್ಲಿ ನಮ್ಮ ಕನ್ನಡಿಗರನ್ನು ಹಾಗೂ ಭಾರತದ ೨೬ ಜನರನ್ನು ಗುಂಡಿಕ್ಕಿ ಕೊಲೆ ಮಾಡಿರುವುದು ಇಡಿ ದೇಶದಲ್ಲಿ ಒಗ್ಗಟ್ಟಾಗಿ ಪಕ್ಷಾತೀತವಾಗಿ ನಮ್ಮ ದೇಶವನ್ನು ದ್ವೇಷಿಸುತ್ತಿರುವ ಪಾಕಿಸ್ತಾನವನ್ನು ಸರ್ವನಾಶ ಮಾಡುವುದಕ್ಕೆ ನಾವು ಎಲ್ಲರೂ ಹಾಗೂ ನಮ್ಮ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕರು ಕೂಡ ಒಂದಾಗಿ ಎದುರಿಸಲು ತೀರ್ಮಾನ ತೆಗೆದುಕೊಂಡಿದ್ದಾರೆ ಎಂದರು.

ಹಾಸನದಲ್ಲೂ ಕೂಡ ಕಾಂಗ್ರೆಸ್ ಪಕ್ಷದಿಂದ ಸಂತಾಪ ಸೂಚಿಸಿ ಮೌನ ಮೆರವಣಿಗೆ ಮಾಡಲಾಗಿದೆ. ನಮ್ಮ ದೇಶವನ್ನು ಅಭದ್ರಗೊಳಿಸಲು ಮುಂದಾದ ಉಗ್ರಗಾಮಿಗಳನ್ನು ಹೊಡೆದುರುಳಿಸಬೇಕು ಎಂದರು.

ಕಾಂಗ್ರೆಸ್ ಯುವ ಮುಖಂಡ ಚಂದ್ರಶೇಖರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಇರುವ ಅಧಿಕಾರಕ್ಕೆ ನಾವು ಸಹಕಾರ ಕೊಡುತ್ತಿದ್ದೇವೆ, ಏಪ್ರಿಲ್ ೨೨ ರಂದು ಕಾಶ್ಮೀರದ ಪ್ರವಾಸಿ ತಾಣದಲ್ಲಿ ನಡೆದ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇವೆ. ಈ ದಾಳಿಯಲ್ಲಿ ಸಾವನಪ್ಪಿದ ಅವರಿಗೆ ದೇವರು ಶಾಂತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು. ಈ ವಿಶ್ವ ಭೂಪಟದಿಂದಲೇ ಪಾಕಿಸ್ತಾನವನ್ನು ಹೊರ ಹಾಕಬೇಕು ಎಂದು ಆಗ್ರಹಿಸಿದರು.

ಮೌನ ಮೆರವಣಿಗೆಯಲ್ಲಿ ಕಾಂಗ್ರೆಸ್ ಮುಖಂಡರಾದ ಮಂಜುನಾಥ್ ಶರ್ಮ, ತಾರಚಂದನ್, ಅಶ್ರೂ, ವಿನಯ್ ಗಾಂಧಿ, ರಾಮಚಂದ್ರ, ಅಶೋಕ್, ಲಕ್ಷ್ಮಣ್, ಸ್ವರೂಪ್, ಪ್ರಕಾಶ್, ಕಯಿಂ ಸೇರಿದಂತೆ ಇತರರು ಉಪಸ್ಥಿತರಿದ್ದರು.