ಸಾರಾಂಶ
ಬಿಜೆಪಿ ಬಾವುಟ ತೆರವುಗೊಳಿಸಿರುವ ಪಾಲಿಕೆಯ ಸಿಬ್ಬಂದಿ ಕ್ರಮವನ್ನು ಕಟುವಗಿ ಖಂಡಿಸಿರುವ ಬಿಜೆಪಿ ಗ್ರಾಮೀಣ ಅಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಇದರ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕೈವಾಡವಿದೆ. ಇದನ್ನಿಟ್ಟುಕೊಂಡು ಕಾಂಗ್ರೆಸ್ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ನಗರದಲ್ಲಿ ಬಿಜೆಪಿ ಬಾವುಟ ತೆರವುಗೊಳಿಸಿರುವ ಪಾಲಿಕೆಯ ಸಿಬ್ಬಂದಿ ಕ್ರಮವನ್ನು ಕಟುವಗಿ ಖಂಡಿಸಿರುವ ಬಿಜೆಪಿ ಗ್ರಾಮೀಣ ಅಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಇದರ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕೈವಾಡವಿದೆ. ಇದನ್ನಿಟ್ಟುಕೊಂಡು ಕಾಂಗ್ರೆಸ್ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದ್ದೇಶಪೂರ್ವಕವಾಗಿ ಬಿಜೆಪಿ ಬಾವುಟಗಳನ್ನ ತೆರವು ಮಾಡಲಾಗಿದೆ, ಬಾವುಟ ತೆರವುಗೊಳಿಸಿದರ ಹಿಂದೆ ಸಚಿವ ಪ್ರೀಯಾಂಕ ಖರ್ಗೆ ಕೈವಾಡ ಇದೆ, ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ಕಾಂಗ್ರೆಸ್ ಗೆ ಭಯ ಶುರುವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸೋಲಿನ ಭಯ ಶುರುವಾಗಿದೆ.
ವಿಜಯೇಂದ್ರ ನೇತೃತ್ವದಲ್ಲಿ ಕಾಂಗ್ರೆಸ್ ಗೆ ತಕ್ಕಪಾಠ ಕಲಿಸುತ್ತೇವೆಂದು ಕಾಂಗ್ರೆಸ್ ವಿರುದ್ದ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ ಕಿಡಿ ಕಾರಿದ್ದಾರೆ.ಕಲಬುರಗಿಯಲ್ಲಿಂದು ಬಿಜೆಪಿ ರಾಜ್ಯಾದ್ಯಕ್ಷ ವಿಜಯೇಂದ್ರ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು, ಜೊತೆಗೇ ನೂತನ ಜಿಲ್ಲೆ, ನಗರಾಧ್ಯಕ್ಷರ ಪದಗ್ರಹಣ ಸಮಾರಂಭವೂ ಇತ್ತು. ಅಭಿನಂದನಾ ಸಮಾರಂಭಕ್ಕಾಗಿ ಕಲಬುರಗಿ ನಗರಾದ್ಯಂತ ಬಿಜೆಪಿ ಬಾವುಟಗಳು ರಾರಾಜಿಸುತ್ತಿದ್ದವು.
ಕಾರ್ಯಕ್ರಮಕ್ಕೂ ಮುನ್ನವೇ, ಬೆಳಗಿನ 5 ಗಂಟೆಯಿಂದಲೇ ಮಹಾನಗರ ಪಾಲಿಕೆ ಸಿಬ್ಬಂದಿ ಬಿಜೆಪಿ ಬಾವುಟಗಳ ತೆರವು ಮಾಡಿದ್ದರು. ಅನುಮತಿ ಇಲ್ಲದೇ ಬಾವುಗಳನ್ನು ಅಳವಡಿಸಿದ್ದಾರೆಂದು ಪಾಲಿಕೆಯಿಂದ ಈ ಕ್ರಮ ಕೈಗೊಳ್ಳಲಾಗಿತ್ತು. ಈ ಬೆಳವಣಿಗೆಯನ್ನೇ ಸೇಡಿನ ರಾಜಕೀಯ ಎಂದು ಬಿಜೆಪಿ ಮುಖಂಡರು ಟೀಕಿಸಿದ್ದಾರೆ.