ಚುನಾವಣೇಲಿ ಕಾಂಗ್ರೆಸ್‌ ಪ್ರಭುತ್ವ ಸ್ಥಾಪಿಸುತ್ತಿದೆ : ನಂಜುಂಡ ಪ್ರಸಾದ್‌ ಪ್ರಶಂಸೆ

| N/A | Published : Mar 24 2025, 12:36 AM IST / Updated: Mar 24 2025, 12:48 PM IST

ಚುನಾವಣೇಲಿ ಕಾಂಗ್ರೆಸ್‌ ಪ್ರಭುತ್ವ ಸ್ಥಾಪಿಸುತ್ತಿದೆ : ನಂಜುಂಡ ಪ್ರಸಾದ್‌ ಪ್ರಶಂಸೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನಲ್ಲಿ ಇತ್ತೀಚೆಗೆ ನಡೆದ ಫ್ಯಾಕ್ಸ್‌ ಹಾಗೂ ಡೇರಿ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪ್ರಭುತ್ವ ಸಾಧಿಸುತ್ತಿದೆ. ಇದಕ್ಕೆ ಕಾರಣರಾದ ಮತದಾರರಿಗೆ ಎಚ್.ಎಸ್. ಮಹದೇವಪ್ರಸಾದ್‌ರ ಕುಟುಂಬ ಧನ್ಯವಾದ ಸಲ್ಲಿಸಲಿದೆ ಎಂದು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್. ನಂಜುಂಡ ಪ್ರಸಾದ್‌ ಹೇಳಿದರು.

 ಗುಂಡ್ಲುಪೇಟೆ : ತಾಲೂಕಿನಲ್ಲಿ ಇತ್ತೀಚೆಗೆ ನಡೆದ ಫ್ಯಾಕ್ಸ್‌ ಹಾಗೂ ಡೇರಿ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪ್ರಭುತ್ವ ಸಾಧಿಸುತ್ತಿದೆ. ಇದಕ್ಕೆ ಕಾರಣರಾದ ಮತದಾರರಿಗೆ ಎಚ್.ಎಸ್. ಮಹದೇವಪ್ರಸಾದ್‌ರ ಕುಟುಂಬ ಧನ್ಯವಾದ ಸಲ್ಲಿಸಲಿದೆ ಎಂದು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್. ನಂಜುಂಡ ಪ್ರಸಾದ್‌ ಹೇಳಿದರು.

ತಾಲೂಕಿನ ಭೋಗಯ್ಯನ ಹುಂಡಿ ಗ್ರಾಮದಲ್ಲಿ ಕೋಟೆಕೆರೆ ಫ್ಯಾಕ್ಸ್‌ ನೂತನ ಅಧ್ಯಕ್ಷ ಕೆ.ಎಂ. ಮಹದೇವಸ್ವಾಮಿ, ಉಪಾಧ್ಯಕ್ಷ ರಾಮಕೃಷ್ಣಯ್ಯರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದರು.

ಇತ್ತೀಚಿನ ಕೆಲ ವರ್ಷಗಳಲ್ಲಿ ಫ್ಯಾಕ್ಸ್‌ ಹಾಗೂ ಡೇರಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ ಆಗಿತ್ತು. ಆದರೀಗ ಫ್ಯಾಕ್ಸ್‌ ಹಾಗೂ ಡೇರಿ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲುತ್ತಿದೆ. ಕಾಂಗ್ರೆಸ್‌ ಗೆಲುವಿಗೆ ಕಾರಣರಾದ ಮತದಾರರಿಗೆ ಅಭಿನಂದನೆ ಹಾಗೂ ಧನ್ಯವಾದ ಎಂದರು.

ಕೋಟೆಕೆರೆ ಫ್ಯಾಕ್ಸ್‌ ಚುನಾವಣೆಯಲ್ಲಿ ಸಂಘದ ಮಾಜಿ ಅಧ್ಯಕ್ಷ ಬಿ.ಸಿ.ಮಹದೇವಸ್ವಾಮಿ ತ್ಯಾಗದ ಪರಿಣಾಮ ಹಾಗೂ ಅವರ ಶ್ರಮ ಇದೆ, ಜೊತೆಗೆ ಫ್ಯಾಕ್ಸ್‌ ವ್ಯಾಪ್ತಿಯ ಕಾರ್ಯಕರ್ತರು ಶ್ರಮವೂ ಅಡಗಿದೆ ಎಂದರು.

ನೂತನ ಅಧ್ಯಕ್ಷ ಕೆ.ಎಂ.ಮಹದೇವಸ್ವಾಮಿ ಮಾತನಾಡಿ, ನನ್ನ ಗೆಲುವು ಫ್ಯಾಕ್ಸ್‌ ವ್ಯಾಪ್ತಿಯ ಮತದಾರರು ಹಾಗು ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಅರ್ಪಿಸುತ್ತೇನೆ. ಅಲ್ಲದೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲ ನೀಡಿದವರಿಗೆ ಧನ್ಯವಾದ ಸಲ್ಲಿಸುವೆ ಎಂದರು.

ಸಂಘದ ನೂತನ ಉಪಾಧ್ಯಕ್ಷ ರಾಮಕೃಷ್ಣಯ್ಯ, ಜಿಪಂ ಮಾಜಿ ಸದಸ್ಯ ಕೆ.ಶಿವಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ಸಂಘದ ಮಾಜಿ ಅಧ್ಯಕ್ಷ ಬಿ.ಸಿ.ಮಹದೇವಸ್ವಾಮಿ ಮಾತನಾಡಿದರು.

ಸಮಾರಂಭದಲ್ಲಿ ಹಾಪ್‌ ಕಾಮ್ಸ್‌ ನೂತನ ಅಧ್ಯಕ್ಷ ಎಂ.ನಾಗೇಶ್‌, ಗ್ರಾಪಂ ಅಧ್ಯಕ್ಷ ಡಿ.ಉಲ್ಲಾಸ್‌, ತಾಪಂ ಮಾಜಿ ಉಪಾಧ್ಯಕ್ಷ ಬಂಗಾರನಾಯಕ, ನೂತನ ನಿರ್ದೇಶಕರು, ಸಂಘದ ಸಿಇಒ ದೊರೆಸ್ವಾಮಿ ನಾಯಕ, ಮುಖಂಡರಾದ ಬಸವರಾಜು, ಶಂಕರನಾಯಕ, ಕೆ.ಪಿ.ಕುಮಾರ್‌, ಜಿ.ಮಹೇಶ್‌, ಮಲ್ಲು ಬೆಟ್ಟದಮಾದಹಳ್ಳಿ, ಅವೀಶ ಸೇರಿದಂತೆ ಕೋಟೆಕೆರೆ ಫ್ಯಾಕ್ಸ್‌ ವ್ಯಾಪ್ತಿಯ ಕಾಂಗ್ರೆಸ್‌ ಕಾರ್ಯಕರ್ತರು ಇದ್ದರು.

ಕೋಟೆಕೆರೆ ಫ್ಯಾಕ್ಸ್‌ಗೆ ಅಧ್ಯಕ್ಷರಾಗಿ ಕೆ.ಎಂ.ಮಹದೇವಸ್ವಾಮಿ, ಉಪಾಧ್ಯಕ್ಷರಾಗಿ ರಾಮಕೃಷ್ಣಯ್ಯ ಆಯ್ಕೆ |

 ಗುಂಡ್ಲುಪೇಟೆ : ತಾಲೂಕಿನ ಕೋಟೆಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಯುವ ಕಾಂಗ್ರೆಸ್‌ ಮುಖಂಡ ಕೆ.ಎಂ.ಮಹದೇವಸ್ವಾಮಿ, ಉಪಾಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ಸಿಗ ರಾಮಕೃಷ್ಣಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ತಾಲೂಕಿನ ಭೋಗಯ್ಯನಹುಂಡಿ ಗ್ರಾಮದ ಕೋಟೆಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕ್ಯಾಂಪ್‌ನಲ್ಲಿ ನಡೆದ ಅಧ್ಯಕ್ಷ ಸ್ಥಾನಕ್ಕೆ ಕೆ.ಎಂ.ಮಹದೇವಸ್ವಾಮಿ, ಉಪಾಧ್ಯಕ್ಷ ಸ್ಥಾನಕ್ಕೆ ರಾಮಕೃಷ್ಣಯ್ಯ ನಾಮಪತ್ರ ಸಲ್ಲಿಸಿದರು.

ಅಧ್ಯಕ್ಷ,ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಅವಧಿ ಮುಗಿಯುವ ತನಕ ಇತರೆ ಯಾವ ನಿರ್ದೇಶಕರು ನಾಮಪತ್ರ ಸಲ್ಲಿಸದ ಹಿನ್ನಲೆ ಅಧ್ಯಕ್ಷರಾಗಿ ಕೆ.ಎಂ.ಮಹದೇವಸ್ವಾಮಿ, ಉಪಾಧ್ಯಕ್ಷರಾಗಿ ರಾಮಕೃಷ್ಣಯ್ಯ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ನಾಗೇಶ್ ಘೋಷಿಸಿದರು.

ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆಯೇ ಕಾಂಗ್ರೆಸ್‌ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ಚುನಾವಣೆಯಲ್ಲಿ ನೂತನ ಅಧ್ಯಕ್ಷ ಕೆ.ಎಂ.ಮಹದೇವಸ್ವಾಮಿ, ಉಪಾಧ್ಯಕ್ಷ ರಾಮಕೃಷ್ಣಯ್ಯ, ನಿರ್ದೇಶಕರಾದ ಶೇಖರ್‌, ಪುಟ್ಟಸ್ವಾಮಿ(ಪುಟ್ಟಣ್ಣ), ಬಸಪ್ಪ ದೇವರು, ಸದಾಶಿವಪ್ಪ(ಸದಾ), ರಾಮೇಗೌಡ, ಜಿ.ಮಹೇಶ್‌, ಹೊಣಕಾರನಾಯಕ, ಶಿವಮ್ಮ, ರತ್ನಮ್ಮ, ಸಂಘದ ಸಿಇಒ ದೊರೆಸ್ವಾಮಿ ನಾಯಕ ಇದ್ದರು.ಅಪ್ಪನ ನಂತರ ಮಗ ಅಧ್ಯಕ್ಷ:

ಗುಂಡ್ಲುಪೇಟೆ : ತಾಲೂಕಿನ ಕೋಟೆಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಕುರುಬರಹುಂಡಿ ಗ್ರಾಮದ ಕೆ.ಎಂ.ಮಹದೇವಸ್ವಾಮಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.೧೯೮೭ ರಲ್ಲಿ ನೂತನ ಅಧ್ಯಕ್ಷ ಕೆ.ಎಂ.ಮಹದೇವಸ್ವಾಮಿ ಅವರ ತಂದೆ ಕೆ.ಎಸ್.ಮಲ್ಲಿಕಾರ್ಜುನಪ್ಪ ಕೋಟೆಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಕುರುಬರಹುಂಡಿ ಗ್ರಾಮದ ಕೆ.ಎಸ್.ಮಲ್ಲಿಕಾರ್ಜುನಪ್ಪ ಕೋಟೆಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಬಳಿಕ ಅವರ ಪುತ್ರನೇ ಅಧ್ಯಕ್ಷರಾಗಿದ್ದು, ವಿಶೇಷ ಹಾಗೂ ಅಪರೂಪ ಎನ್ನಬಹುದು.