ಬಡವರು ನೇಕಾರರಿಗೆ ಕಾಂಗ್ರೆಸ್ ಮಾತೃಪಕ್ಷ

| Published : May 02 2024, 01:35 AM IST

ಸಾರಾಂಶ

ಹಲವಾರು ಸೌಲಭ್ಯಗಳನ್ನು ನೀಡಿರುವ ಕಾಂಗ್ರೆಸ್ ಬಡವರು, ನೇಕಾರರಿಗೆ ಮಾತೃ ಪಕ್ಷ ಇದ್ದಂತೆ ಎಂದು ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರಹಲವಾರು ಸೌಲಭ್ಯಗಳನ್ನು ನೀಡಿರುವ ಕಾಂಗ್ರೆಸ್ ಬಡವರು, ನೇಕಾರರಿಗೆ ಮಾತೃ ಪಕ್ಷ ಇದ್ದಂತೆ ಎಂದು ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಹೇಳಿದರು.

ಚಿಮ್ಮಡ ಗ್ರಾಮದ ಅಶೋಕ ಧಡೂತಿಯವರ ಮನೆಯ ಆವರಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನೇಕಾರರಿಗೆ ಆಶ್ರಯ ಮನೆಗಳನ್ನು ನಿರ್ಮಿಸಿದ್ದು ಕಾಂಗ್ರೆಸ್, ಆಶ್ರಯ ಮನೆಗಳ ₹ 32 ಕೋಟಿ ಸಾಲವನ್ನು ಮನ್ನಾ ಮಾಡಿದ್ದು, ನೇಕಾರರಿಗೆ ಉಚಿತ ವಿದ್ಯುತ್ ನೀಡುತ್ತಿರುವುದು ಕಾಂಗ್ರೆಸ್ ಪಕ್ಷವಾಗಿದೆ. ಆದರೆ, ಕೇಂದ್ರ ಬಿಜೆಪಿ ಸರ್ಕಾರ ದಿನಬಳಕೆಯ ವಸ್ತುಗಳ ಬೆಲೆಯೇರಿಸುವ ಮೂಲಕ ಬಡವರನ್ನು ಲೂಟಿ ಹೊಡೆಯುತ್ತಿದೆ, ರೈತರನ್ನು ಕೇವಲವಾಗಿ ಕಾಣುವ ಇವರು ಆಯ್ದ ಕೆಲವು ಉದ್ಯಮಿಗಳಿಗೆ ಮಾತ್ರ ಭರಪೂರ ನೆರವು ನೀಡುತ್ತಿದ್ದಾರೆ. ಕಾಂಗ್ರೆಸ್ ಆಭ್ಯರ್ಥಿ ಸಂಯುಕ್ತಾ ಪಾಟೀಲರಿಗೆ ಮತ ನೀಡುವ ಮೂಲಕ ಬಡವರು, ಮಧ್ಯಮವರ್ಗದ ವಿರೋಧಿ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕು ಎಂದರು.

ನೇಕಾರ ಧುರೀಣ ರವೀಂದ್ರ ಕಲಬುರ್ಗಿ ಮಾತನಾಡಿ, ರೈತರು, ನೇಕಾರರು, ಬಡವರು, ಮಧ್ಯಮ ವರ್ಗದವರಿಗೆ ಪಂಚ ಗ್ಯಾರಂಟಿ ಮೂಲಕ ಪ್ರತಿಯೊಂದು ಮನೆಗಳಿಗೆ ಸರ್ಕಾರದ ಸೌಲಭ್ಯಗಳು ತಲುಪುತ್ತಿವೆ ಎಂದು ತಿಳಿಸಿದರು.

ನೆಕಾರರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಂಗಪ್ಪ ಹಳ್ಳೂರ, ಅಶೋಕ ಧಡೂತಿ ಮಾತನಾಡಿದರು. ಪ್ರಮುಖರಾದ ಅರುಣ ಗಾಣಿಗೇರ, ಪಿರಸಾಬ ನದಾಫ್‌, ಇಮಾಮ್‌ ಯಾದವಾಡ, ಮಹಾದೇವ ಅಥಣಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.