ಸಾರಾಂಶ
ಚಿಕ್ಕಮಗಳೂರು: ಆರ್‌ಎಸ್‌ಎಸ್‌ನ ದೇಶಭಕ್ತಿಗೆ ಸರ್ಟಿಫಿಕೇಟ್ ಕೊಡುವ ಯೋಗ್ಯತೆ ಕಾಂಗ್ರೆಸಿಗಿಲ್ಲ. ಸಚಿವ ಪ್ರಿಯಾಂಕ್ ಖರ್ಗೆ ಮಾತ್ರವಲ್ಲ, ಕಾಂಗ್ರೆಸ್ ಡಿಎನ್‌ಎನಲ್ಲೇ ಸುಳ್ಳು ಬಂದಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಆರ್‌ಎಸ್‌ಎಸ್ ನಿಷೇಧಿ ಸುವುದಾಗಿ ಖರ್ಗೆ ನೀಡಿರುವ ಹೇಳಿಕೆಗೆ ಕಿಡಿಕಾರಿದ ಸಿ.ಟಿ.ರವಿ, ಮಹಾತ್ಮ ಗಾಂಧಿ ಹತ್ಯೆ ಆರೋಪದಲ್ಲಿ ಮೊದಲ ಬಾರಿಗೆ ಆರ್‌ಎಸ್‌ಎಸ್ ಬ್ಯಾನ್ ಮಾಡಿದರು. 3 ತನಿಖೆಯಲ್ಲಿ ಗಾಂಧಿ ಹತ್ಯೆಯಲ್ಲಿ ಆರ್‌ಎಸ್‌ಎಸ್ ಪಾತ್ರವಿಲ್ಲ ಅನ್ನೋದು ಸಾಬೀತಾ ಯಿತು. ನೆಹರೂ ಸರ್ಕಾರವೇ ಆರ್‌ಎಸ್‌ಎಸ್ ನಿಷೇಧ ವಾಪಸ್ಸು ಪಡೆದುಕೊಂಡಿತು ಎಂದರು.ಇವತ್ತಿಗೂ ಆರ್‌ಎಸ್‌ಎಸ್ ಗಾಂಧಿ ಹತ್ಯೆ ಮಾಡಿದ್ದು ಎಂದು ಆರೋಪಿಸುತ್ತಾರೆ. ಅಂದು ಕಾಂಗ್ರೆಸ್ಸೇ ಅಧಿಕಾರದಲ್ಲಿ ಇದ್ದರೂ ಒಂದೇ ಒಂದು ಆರೋಪ ಸಾಬೀತು ಮಾಡಲಿಕ್ಕೆ ಆಗಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರ ಸುಪುತ್ರರ ಬಾಯಲ್ಲಿ ಎಷ್ಟು ಸುಳ್ಳು ಬರುತ್ತದೆ ಎನ್ನುವುದು ಸಾಬೀತಾಗಿದೆ ಎಂದು ಹೇಳಿದರು.ಎರಡನೇ ಬಾರಿ ಆರ್‌ಎಸ್‌ಎಸ್ ಬ್ಯಾನ್ ಮಾಡಿದ್ದು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ. ತುರ್ತು ಪರಿಸ್ಥಿತಿ ಜೊತೆಗೆ ಇಂದಿರಾ ಗಾಂಧಿ ಅಧಿಕಾರವೂ ಹೊಯಿತು. 3ನೇ ಬಾರಿ ಬ್ಯಾನ್ ಮಾಡಿದ್ದು ವಿವಾದಾಸ್ಪದ ಕಟ್ಟಡ ಬಾಬರಿ ಮಸೀದಿ ದ್ವಂಸವಾದಾಗ. ಬಾಬರ್ ಇಲ್ಲಿ ಹುಟ್ಲಿಲ್ಲ, ಆದರೆ, ಕಾಂಗ್ರೆಸ್ಸಿಗೆ ರಾಮನಿಗಿಂತ ಬಾಬರ್ ಮೇಲೆ ಪ್ರೀತಿ ಜಾಸ್ತಿ ಎಂದು ಟೀಕಿಸಿದರು.ಮೂರು ಸಂದರ್ಭದಲ್ಲೂ ಅವರಿಂದ ಆರೋಪ ಸಾಬೀತು ಮಾಡಲು ಆಗಲಿಲ್ಲ. 1963ರ ಗಣರಾಜ್ಯೋತ್ಸವದ ಪೆರೆಡ್‌ನಲ್ಲಿ ಪೊಲೀಸ್, ಮಿಲಿಟರಿ ಹೊರತುಪಡಿಸಿ ಭಾಗವಹಿಸಿದ ಸಂಘಟನೆ ಆರ್‌ಎಸ್‌ಎಸ್, ಅಂದಿನ ಪಿಎಂ ನೆಹರೂ, ಪಕ್ಷ ಇದೇ ಕಾಂಗ್ರೆಸ್, ಅಂಬೇಡ್ಕರ್ ಹೆಸರು ಹೇಳೋ ಯೋಗ್ಯತೆಯೂ ಕಾಂಗ್ರೆಸ್ ಪಾರ್ಟಿಗಿಲ್ಲ ಎಂದರು.ಟೂಲ್‌ಕಿಟ್‌ನ ಒಂದು ಭಾಗ:ಎಂಎಲ್‌ಸಿ ರವಿಕುಮಾರ್ ಅವರು ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎನ್ನುವ ಕಾಂಗ್ರೆಸ್ ಆರೋಪ ಟೂಲ್‌ಕಿಟ್‌ನ ಒಂದು ಭಾಗ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದರು.ಕಾಂಗ್ರೆಸ್ಸಿನದ್ದು ದಿನ ಬೆಳಗಾದರೆ ಭ್ರಷ್ಟಾಚಾರ, ಲೋಕಾಯುಕ್ತ ಹೆಸರಲ್ಲಿ ವಸೂಲಿಗೆ ಐಪಿಎಸ್ ಅಧಿಕಾರಿಯೇ ನಿಲ್ಲುತ್ತಾರೆ. ಇದು ಕಾಂಗ್ರೆಸ್ಸಿಗೆ ಗಂಭೀರ ವಿಷಯವೇ ಅಲ್ಲ ಎಂದು ಟೀಕಿಸಿದರು.ಕಾಂಗ್ರೆಸ್ ಶಾಸಕ ಪಾಟೀಲ್ ಮನೆ ಬೇಕು ಅಂದರೆ ಲಂಚ ಕೊಡಬೇಕು ಎನ್ನುತ್ತಾರೆ. ಇದು ಅವರಿಗೆ ಗಂಭೀರವಲ್ಲ, ಇದನ್ನೆಲ್ಲಾ ಬದಿಗೆ ಸರಿಸಲು ರವಿಕುಮಾರ್ ಆಶ್ಲೀಲ ಪದ ಹೇಳಿದ್ದಾರೆಂದು ಕ್ರಿಯೇಟ್ ಮಾಡಿದ್ದಾರೆ ಎನ್ನಿಸುತ್ತದೆ ಎಂದರು.ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ ಬದಿಗೆ ಹೋಯಿತು. ಲಂಚ ಕೊಟ್ಟರೆ ಮನೆ ಎನ್ನುವ ಬಿ.ಆರ್.ಪಾಟೀಲ್ ಹೇಳಿಕೆ ಬದಿಗೆ ಹೋಯಿತು. ಆಡಳಿತ ಪಕ್ಷದ ಶಾಸಕರ ಅಸಹನೆ ಬದಿಗೆ ಸರಿಸಲು ಈ ರೀತಿ ಟೂಲ್ ಕಿಟ್ ರಾಜಕಾರಣ ಮಾಡುತ್ತಿ ದ್ದಾರೆ ಎಂದು ದೂರಿದರು.ನಾನಂತು ಯಾವ ಮಾಧ್ಯಮದಲ್ಲೂ ರವಿಕುಮಾರ್ ಅವರ ಹೇಳಿಕೆ ಕೇಳಿಲ್ಲ ನೋಡಿಲ್ಲ ಎಂದು ಹೇಳಿದರು.