ಕಾಂಗ್ರೆಸ್‌ ದೇಶದ ವಿರುದ್ಧವೇ ಮಾತನಾಡುತ್ತಿದೆ: ಕರಂದ್ಲಾಜೆ

| Published : May 17 2025, 01:21 AM IST

ಕಾಂಗ್ರೆಸ್‌ ದೇಶದ ವಿರುದ್ಧವೇ ಮಾತನಾಡುತ್ತಿದೆ: ಕರಂದ್ಲಾಜೆ
Share this Article
  • FB
  • TW
  • Linkdin
  • Email

ಸಾರಾಂಶ

ದೇಶಕ್ಕೆ ಪ್ರಧಾನಿ ಮೋದಿ ಆದ ಬಳಿಕ ಭಾರತೀಯ ಸೇನೆ ಸ್ವಾವಲಂಬಿ, ಮೇಕ್ ಇನ್ ಇಂಡಿಯಾ ಮಾಡುವ ಸಂಕಲ್ಪ ಮಾಡಿದ್ದರು. ಈಗ ಸೇನೆ ಸ್ವಾವಲಂಬಿಯಾಗಿದೆ. ಎಚ್‌ಎಎಲ್ ಯುದ್ಧ ವಿಮಾನ ತಯಾರಿಸಲು ಹಣ ನೀಡಲಾಗಿದೆ. ಬಿಇಎಲ್, ಬಿಎಚ್‌ಎಲ್ ಸಂಸ್ಥೆಗಳನ್ನು ಸ್ವಾವಲಂಬಿ ಮಾಡಲಾಗುತ್ತಿದೆ. ಇದನ್ನು ಸಹಿಸಿಕೊಳ್ಳದ ಕಾಂಗ್ರೆಸ್ ಅನವಶ್ಯಕ ಆರೋಪ ಮಾಡುತ್ತಿದೆ.

ಹುಬ್ಬಳ್ಳಿ: ದೇಶ ಸಂಕಷ್ಟ ಹಾಗೂ ಸಾಧನೆ ಮಾಡಿದಾಗ ಕಾಂಗ್ರೆಸ್ ಪಕ್ಷ ದೇಶದ ವಿರುದ್ಧ ಮಾತನಾಡುತ್ತದೆ. ತಮ್ಮ ಅಧಿಕಾರ ಅವಧಿಯಲ್ಲಿ ದೇಶ ರಕ್ಷಣೆ, ಗಡಿ ಪ್ರದೇಶ ಕಾಪಾಡಲು ಹಾಗೂ ಸೇನೆ ಬಲಗೊಳಿಸುವ ಕಾರ್ಯ ಮಾಡಲಿಲ್ಲ ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದರು.

ಆಪರೇಷನ್ ಸಿಂದೂರದ ಬಗ್ಗೆ ಕಾಂಗ್ರೆಸ್ ನಾಯಕರು ಎತ್ತಿರುವ ಅಪಸ್ವರ ಕುರಿತು ಶುಕ್ರವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಈ ರೀತಿ ಪ್ರತಿಕ್ರಿಯಿಸಿದರು.

ದೇಶಕ್ಕೆ ಪ್ರಧಾನಿ ಮೋದಿ ಆದ ಬಳಿಕ ಭಾರತೀಯ ಸೇನೆ ಸ್ವಾವಲಂಬಿ, ಮೇಕ್ ಇನ್ ಇಂಡಿಯಾ ಮಾಡುವ ಸಂಕಲ್ಪ ಮಾಡಿದ್ದರು. ಈಗ ಸೇನೆ ಸ್ವಾವಲಂಬಿಯಾಗಿದೆ. ಎಚ್‌ಎಎಲ್ ಯುದ್ಧ ವಿಮಾನ ತಯಾರಿಸಲು ಹಣ ನೀಡಲಾಗಿದೆ. ಬಿಇಎಲ್, ಬಿಎಚ್‌ಎಲ್ ಸಂಸ್ಥೆಗಳನ್ನು ಸ್ವಾವಲಂಬಿ ಮಾಡಲಾಗುತ್ತಿದೆ. ಇದನ್ನು ಸಹಿಸಿಕೊಳ್ಳದ ಕಾಂಗ್ರೆಸ್ ಅನವಶ್ಯಕ ಆರೋಪ ಮಾಡುತ್ತಿದೆ ಎಂದು ಕಿಡಿಕಾರಿದರು.

ಸರ್ಜಿಕಲ್ ಸ್ಟ್ರೈಕ್ ಮೂಲಕ ಪಾಕಿಸ್ತಾನಕ್ಕೆ ನುಗ್ಗಿ ಹೊಡೆದಾಗ ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡಿದ್ದರು. ಈಗಲೂ ಪ್ರಶ್ನೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯುದ್ಧ ಯಾಕೆ ಬೇಕು ಎಂದಿದ್ದರು. ಸಚಿವ ಜಮೀರ್ ಅಹ್ಮದ ನಾನೆ ಬಾಂಬು ಕಟ್ಟಿಕೊಂಡು ಹೋಗುತ್ತೇನೆ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ನಾಯಕರು ಹೈಕಮಾಂಡ್ ಅಣತಿಯಂತೆ ಮಾತನಾಡುತ್ತಿದ್ದಾರೆ ಎಂಬುವುದು ಸ್ಪಷ್ಟ ಪಡಿಸಬೇಕು ಎಂದರು.

ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಚೀನಾ, ಪಾಕಿಸ್ತಾನ ಹಾಗೂ ಬಾಂಗ್ಲಾ ದೇಶಕ್ಕೆ ಭೂಮಿ ಬಿಟ್ಟುಕೊಡಲಾಗಿದೆ. ಈಗ ಕೇಂದ್ರ ಸರ್ಕಾರ ಭಾರತದ ಒಂದಿಂಚು ಭೂಮಿಯನ್ನು ಯಾರು ಅತಿಕ್ರಮಣ ಮಾಡಲು ಬಿಡುತ್ತಿಲ್ಲ. ಈಗ ಇರುವುದು ಮೋದಿ ಸರ್ಕಾರ ಹೊರತು ಕಾಂಗ್ರೆಸ್ ಸರ್ಕಾರ ಅಲ್ಲ. ಚೀನಾದ ಅನೇಕ ವಸ್ತುಗಳ ಮೇಲೆ ಸಹ ಸ್ಥಗಿತಮಾಡಲಾಗಿದೆ. ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಏಕಾಏಕಿ ಮುರಿಯಲು ಸಾಧ್ಯವಿಲ್ಲ ಎಂದರು.