ಸಾರಾಂಶ
ಕಾಂಗ್ರೆಸ್ ಮುಖಂಡರು ಜೆಡಿಎಸ್ ಸೇರ್ಪಡೆ ಸುದ್ದಿ ಸತ್ಯಕ್ಕೆ ದೂರ
ಕನ್ನಡಪ್ರಭ ವಾರ್ತೆ, ಕಡೂರುತಾಲೂಕಿನ ಯಗಟಿ ಹೋಬಳಿ ಹೋಚಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷ ಸಧೃಡವಾಗಿದೆ ಎಂದು ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ತಿಳಿಸಿದರು.
ಮಂಗಳವಾರ ತಾಲೂಕಿನ ಹೋಚಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮರವಂಜಿ ಗ್ರಾಮದ ಶ್ರೀ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮರವಂಜಿ, ಹೋಚಿಹಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡರು ಜೆಡಿಎಸ್ ಸೇರ್ಪಡೆಗೊಂಡಿರುವುದಾಗಿ ಇತ್ತೀಚಿಗೆ ಪತ್ರಿಕೆಗಳಲ್ಲಿ ವರದಿಯಾಗಿದ್ದು, ಇದು ಸತ್ಯಕ್ಕೆ ದೂರವಾಗಿದೆ ಎಂದು ಸ್ಪಷ್ಟನೆ ನೀಡಿದರು.ಹೋಚಿಹಳ್ಳಿ, ಮರವಂಜಿಯ ಗ್ರಾಪಂ ಸದಸ್ಯರು ಒಗ್ಗಟಿನಿಂದ ಇದ್ದು ಕಳೆದ ಎಂಎಲ್‍ಎ ಮತ್ತು ಎಂಪಿ ಚುನಾವಣೆಯಲ್ಲಿ ಈ ಎರಡು ಗ್ರಾಮಗಳ ಮತದಾರರು ಅತಿ ಹೆಚ್ಚಿನ ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿದ್ದಾರೆ. ಗ್ಯಾರಂಟಿ ಯೋಜನೆಯಿಂದ ಗ್ರಾಮಸ್ಥರು, ಬಡವರಿಗೆ ಅನುಕೂಲವಾಗಿದೆ ಇಂತಹ ಸಂಧರ್ಭದಲ್ಲಿ 50 ಜನ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಯಾಗಿದ್ದಾರೆ ಎಂಬುದು ಸುಳ್ಳು. ಇಲ್ಲಿನ ಸೊಸೈಟಿ ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಓರ್ವ ಕಾಂಗ್ರೆಸ್ ಸದಸ್ಯ ಅಧ್ಯಕ್ಷ ಸ್ಥಾನದ ಆಸೆಗಾಗಿ ಜೆಡಿಎಸ್ ಬೆಂಬಲಕ್ಕೆ ನಿಂತಿದ್ದು ಉಳಿದಂತೆ ಯಾರೊಬ್ಬರು ಕಾಂಗ್ರೆಸ್ ತೊರೆದಿಲ್ಲ ಬೇರೆ ಪಕ್ಷಕ್ಕೆ ಹೋಗಿಲ್ಲ ಎಂದರು.ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಆರ್.ಭೋಗಪ್ಪ ಮಾತನಾಡಿ ಇಲ್ಲಿನ ಮೂಲ ಕಾಂಗ್ರೆಸ್ ನವರು ಯಾರು ಇತರೆ ಪಕ್ಷಕ್ಕೆ ಪಕ್ಷಾಂತರ ಮಾಡಿಲ್ಲ. ಮರವಂಜಿ ಗ್ರಾಮಕ್ಕೆ ಸಮುದಾಯ ಭವನ, ಸಿಸಿ ರಸ್ತೆಗಳನ್ನು ಕಾಂಗ್ರೆಸ್ ಎಂಎಲ್‍ಎಗಳ ಅನುದಾನದಲ್ಲಿ ನಡೆದಿದೆ. ಗ್ರಾಮದ ಮೂಲಭೂತ ಸಮಸ್ಯೆಗಳಿಗೆ ನಮ್ಮ ಪಕ್ಷ ಬೆಂಬಲಿಸುತ್ತಿದ್ದು ಕಾಂಗ್ರೆಸ್ ಪಕ್ಷದ ಕಾರ್ಯ ಕರ್ತರು ಸಧೃಡವಾಗಿದ್ದು ವಿಚಲಿತರಾಗಿಲ್ಲ ಎಂದರು.ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಂಗಪ್ಪ ಮಾತನಾಡಿ, ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಾಸಕ ಕೆ.ಎಸ್. ಆನಂದ್ ಅವರನ್ನು ಒಪ್ಪಿಕೊಂಡು ಮತ ನೀಡಿದ್ದು ಇಲ್ಲಿನ ಜನರು ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರುವುದು ಸಾಧ್ಯವೆ? ಬೇರೆ ಪಕ್ಷಕ್ಕೆ ಹೋಗಲು ಇಲ್ಲಿ ಯಾರಿಗೂ ಇಷ್ಟವಿಲ್ಲ ಎಂಬುದನ್ನು ಇತರೆ ಪಕ್ಷದವರು ತಿಳಿದುಕೊಳ್ಳಲಿ ಎಂದರು.ಗ್ರಾಮದ ದಲಿತ ಮುಖಂಡ ನರಸಿಂಹಪ್ಪ, ಉಪ್ಪಾರ ಮುಖಂಡ ಸತೀಶ್, ಲಿಂಗಾಯತ ಮುಖಂಡ ಓಂಕಾರಪ್ಪ ಮಾತನಾಡಿ, ನಾವು ಶಾಸಕ ಆನಂದಪ್ಪ ಅವರನ್ನು ಒಪ್ಪಿಕೊಂಡು ಗೆಲ್ಲಿಸಿದ್ದೇವೆ ಗ್ರಾಮದ ಎಲ್ಲ ಸಮುದಾಯದವರು ಸಹ ಕಾಂಗ್ರೆಸ್ ಪರವಾಗಿ ಇದ್ದೇವೆ ಶಾಸಕರು ಗ್ರಾಮಕ್ಕೆ 25 ಲಕ್ಷಕ್ಕೂ ಹೆಚ್ಚಿನ ಅನುದಾನ ಅಭಿವೃದ್ಧಿಗೆ ನೀಡಿದ್ದಾರೆ ಜೆಡಿಎಸ್ ಸೇರ್ಪಡೆ ನಡೆದಿಲ್ಲ ಎಂದರು.ಹೋಚಿಹಳ್ಳಿ ಗ್ರಾಪಂ ಅಧ್ಯಕ್ಷೆ ರಾಧ ಮಂಜುನಾಥ್, ಉಪಾಧ್ಯಕ್ಷ ಮಲ್ಲೇಶಪ್ಪ, ಸದಸ್ಯರಾದ ಎಂ.ಕೆ.ರಂಗಪ್ಪ,ನಂಜುಂಡಪ್ಪ, ಶರಾವತಿ ಲಿಂಗರಾಜ್, ಮಂಜಣ್ಣ, ಕಲ್ಲೇಶಪ್ಪ, ರಾಜೇಶ್, ಹನುಮಂತಪ್ಪ, ಚಿಕ್ಕಣ್ಣ, ಶಿವಣ್ಣ, ಟಿ.ವೆಂಕಟೇಶ್, ರಾಜಪ್ಪ,ರಂಗಪ್ಪ ಸೇರಿದಂತೆ ಗ್ರಾಮದ ಮುಖಂಡರು ಇದ್ದರು.18ಕೆಕೆಡಿಯು3.ಕಡೂರು ತಾಲೂಕು ಮರವಂಜಿ ಗ್ರಾಮದ ಶ್ರೀ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಹೋಚಿಹಳ್ಳಿ, ಮರವಂಜಿ ಗ್ರಾ.ಪಂ. ಸದಸ್ಯರು,ಕಾಂಗ್ರೆಸ್ ಕಾರ್ಯಕರ್ತರು, ಜಿ.ಪಂ.ಮಾಜಿ ಸದಸ್ಯ ಶರತ್‍ಕೃಷ್ಣಮೂರ್ತಿ, ಎಚ್.ಆರ್.ಭೋಗಪ್ಪ ಮತ್ತಿತರರು ಇದ್ದರು.