ಸಾರಾಂಶ
ಬಡವರ, ದೀನ-ದಲಿತರ ಮತ್ತು ನೊಂದವರ ಧ್ವನಿಯಾಗಿರುವ ಕಾಂಗ್ರೆಸ್ ಸ್ವಾತಂತ್ರ್ಯ ನಂತರದಲ್ಲಿ ಅಭಿವೃದ್ಧಿ ಕಾರ್ಯ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವ ಮೂಲಕ ಬಲಿಷ್ಠ ಮತ್ತು ಮುಂದುವರಿದ ಭಾರತದ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದೆ ಎಂದು ತೇರದಾಳ ಕ್ಷೇತ್ರದ ಮಹಿಳಾ ವಿಭಾಗದ ಅಧ್ಯಕ್ಷೆ ರೇಣುಕಾ ಮಡ್ಡಿಮನಿ ಹೇಳಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಬಡವರ, ದೀನ-ದಲಿತರ ಮತ್ತು ನೊಂದವರ ಧ್ವನಿಯಾಗಿರುವ ಕಾಂಗ್ರೆಸ್ ಸ್ವಾತಂತ್ರ್ಯ ನಂತರದಲ್ಲಿ ಅಭಿವೃದ್ಧಿ ಕಾರ್ಯ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವ ಮೂಲಕ ಬಲಿಷ್ಠ ಮತ್ತು ಮುಂದುವರಿದ ಭಾರತದ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದೆ ಎಂದು ತೇರದಾಳ ಕ್ಷೇತ್ರದ ಮಹಿಳಾ ವಿಭಾಗದ ಅಧ್ಯಕ್ಷೆ ರೇಣುಕಾ ಮಡ್ಡಿಮನಿ ಹೇಳಿದರು.ಬುಧವಾರ ಬನಹಟ್ಟಿಯ ವಿವಿಧ ವಾರ್ಡ್ ಗಳಲ್ಲಿ ಕಾರ್ಯಕರ್ತರ ಪಡೆಯೊಂದಿಗೆ ಗ್ಯಾರಂಟಿ ಪತ್ರಗಳನ್ನು ಮನೆಮನೆಗೆ ವಿತರಿಸಿ ಮಾತನಾಡಿದ ಅವರು, ಉದ್ಯಮಿಗಳ ಲಕ್ಷಾಂತರ ಕೋಟಿ ರು. ಸಾಲ ಮನ್ನಾ ಮಾಡುವುದಕ್ಕಿಂತ ರೈತರ ಸಾಲ ಮನ್ನಾ, ಬೆಲೆ ಏರಿಕೆಯಿಂದ ತತ್ತರಿಸಿರುವ ಬಡವರು ನೆಮ್ಮದಿಯಿಂದ ಜೀವನ ನಡೆಸಲು ಶ್ರಮಿಸಬೇಕಿದ್ದ ಬಿಜೆಪಿ ತಾನು ಘೋಷಿಸಿದ್ದ ಆಶ್ವಾಸನೆ ಈಡೇರಿಸದೇ ದೇಶವಾಸಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಹತ್ತಾರು ಕನಸುಗಳೊಡನೆ ಬಂದಿರುವ ಯುವ ನಾಯಕಿ ಸಂಯುಕ್ತಾ ಪಾಟೀಲರನ್ನು ಗೆಲ್ಲಿಸುವ ಮೂಲಕ ಮತದಾರರು ಬಾಗಲಕೋಟೆ ಲೋಕಸಭೆ ಕ್ಷೇತ್ರ ಅಭಿವೃದ್ಧಿ ಮಾಡಿ ಮಾದರಿ ಕ್ಷೇತ್ರವಾಗಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿದರು.
ಶಂಕರ ಕೆಸರಗೊಪ್ಪ, ಅರುಣ ನಡುವಿನಮನಿ, ಶಾಂತವೀರ ಬೀಳಗಿ, ರವಿಚಂದ್ರ ನಡುವಿನಮನಿ ಸೇರಿದಂತೆ ನೂರಾರು ಕಾರ್ಯಕರ್ತರಿದ್ದರು.