‘ಕೈ ಸೇರ್ಪಡೆ ಶುದ್ಧ ಸುಳ್ಳು,‘ದಳ’ ಬಿಡಲಾರೆವು: ಎಚ್.ಎಸ್.ಗೋವಿಂದಶೆಟ್ಟಿ ಸ್ಪಷ್ಟನೆ

| Published : Apr 23 2024, 12:54 AM IST

‘ಕೈ ಸೇರ್ಪಡೆ ಶುದ್ಧ ಸುಳ್ಳು,‘ದಳ’ ಬಿಡಲಾರೆವು: ಎಚ್.ಎಸ್.ಗೋವಿಂದಶೆಟ್ಟಿ ಸ್ಪಷ್ಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಹಬ್ಬ ಎಂದು ಕರೆದು ಕಾಂಗ್ರೆಸ್ ಶಲ್ಯ ಹಾಕಿ ಕಾಂಗ್ರೆಸ್ ಸೇರಿದ್ದಾರೆ ಎಂದು ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ನಾವು ಹಬ್ಬಕ್ಕೆ ಕರೆದಿದ್ದರಿಂದ ಹೋಗಿದ್ದೇವೆಯೇ ಹೊರತು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಕ್ಕೆ ಹೋಗಿಲ್ಲ, ನಾವು ಕಾಂಗ್ರೆಸ್ ಸೇರಿಲ್ಲ,

ಕನ್ನಡಪ್ರಭ ವಾರ್ತೆ ಬೇಲೂರು

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯನ್ನು ಹರಡುತ್ತಿದ್ದು, ತಾವು ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದೇವೆ, ಎನ್ ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದೇವೆ ಎಂದು ಕಾಫಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಎಚ್.ಎಸ್.ಗೋವಿಂದಶೆಟ್ಟಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಬಿಕ್ಕೋಡು ಸಮೀಪ ಸ್ನೇಹಿತರ ಮನೆಯ ಕಾರ್ಯಕ್ರಮಕ್ಕೆ ಹೋಗಿದ್ದಾಗ ನಮ್ಮ ಬಗ್ಗೆ ಸನ್ಮಾನಿಸುವ ಸಂದರ್ಭ ನಮಗೆ ಗೊತ್ತಿಲ್ಲದ ಹಾಗೆ ಕಾಂಗ್ರೆಸ್ ಶಲ್ಯ ಹಾಕಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ನಾವು ಜೆಡಿಎಸ್ ಪಕ್ಷದಲ್ಲೇ ಇದ್ದು ಮುಂದೆಯೂ ಸಹ ಇರುತ್ತೇವೆ. ನಾವು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಸೇರಲ್ಲ. ನಮ್ಮ ಪಕ್ಷದ ಆಭ್ಯರ್ಥಿ ಪ್ರಜ್ವಲ್ ರೇವಣ್ಣ ಪರವಾಗಿ ನಾವು ಬಿಕ್ಕೋಡು, ಅರೇಹಳ್ಳಿ ಹೋಬಳಿಗಳಲ್ಲಿ ಹೆಚ್ಚು ಲೀಡ್ ಕೊಡಿಸಲು ಪ್ರಚಾರದಲ್ಲಿ ತೊಡಗಿದ್ದೇವೆ. ನಾವು ಯಾವುದೇ ಕಾರಣಕ್ಕೂ ಜೆಡಿಎಸ್ ಬಿಟ್ಟಿಲ್ಲ. ಬಿಡುವುದೂ ಇಲ್ಲವೆಂದು ಸ್ಪಷ್ಟಪಡಿಸಿದರು.

ಜೆಡಿಎಸ್ ಮುಖಂಡ, ಗುತ್ತಿಗೆದಾರ ಗೋಪಾಲಗೌಡ ಮಾತನಾಡಿ, ಹಬ್ಬ ಎಂದು ಕರೆದು ಕಾಂಗ್ರೆಸ್ ಶಲ್ಯ ಹಾಕಿ ಕಾಂಗ್ರೆಸ್ ಸೇರಿದ್ದಾರೆ ಎಂದು ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ನಾವು ಹಬ್ಬಕ್ಕೆ ಕರೆದಿದ್ದರಿಂದ ಹೋಗಿದ್ದೇವೆಯೇ ಹೊರತು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಕ್ಕೆ ಹೋಗಿಲ್ಲ, ನಾವು ಕಾಂಗ್ರೆಸ್ ಸೇರಿಲ್ಲ, ನಾವು ಈಗಲೂ ಜೆಡಿಎಸ್ ಪಕ್ಷದಲ್ಲಿ ಕೆಲಸ ಮಾಡುತಿದ್ದೇವೆ, ಕಾಂಗ್ರೆಸ್ ನವರು ಸುಳ್ಳು ಹೇಳುತಿದ್ದಾರೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿಧಿ ಮಾತನಾಡಿ, ಜೆಡಿಎಸ್ ಮುಖಂಡ, ಕಾಫಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಎಚ್.ಎಸ್.ಗೋವಿಂದಶೆಟ್ಟಿ ಹಾಗೂ ಗುತ್ತಿಗೆದಾರ ಗೋಪಾಲಗೌಡರು ಕಾಂಗ್ರೆಸ್ ಸೇರಿದ್ದಾರೆಂಬುದು ಶುದ್ಧ ಸುಳ್ಳು, ಇವರನ್ನು ಖಾಸಗಿ ಕಾರ್ಯಕ್ರಮಕ್ಕೆ ಕರೆದು ಸನ್ಮಾನಿಸಿ ಇವರಿಗೆ ತಿಳಿಯದೇ ಕಾಂಗ್ರೆಸ್ ಶಲ್ಯ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಬಿತ್ತರಿಸಿದ್ದಾರೆಯೇ ಹೊರತು, ಇವರು ಯಾರೂ ಕಾಂಗ್ರೆಸ್ ಪಕ್ಷ ಸೇರಿಲ್ಲ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಜಯಣ್ಣಾಚಾರ್ ಇದ್ದರು.