ಕಾರಿನಲ್ಲೇ ಹೃದಯಾಘಾತ: ಕಾಂಗ್ರೆಸ್ ಮುಖಂಡ ಸಾವು

| Published : Mar 26 2025, 01:31 AM IST

ಸಾರಾಂಶ

ನಗರದ ಬನಶಂಕರಿ ಬಡಾವಣೆಯ ನಿವಾಸಿ, ಕಾಂಗ್ರೆಸ್ ಯುವ ಮುಖಂಡ, ಗುತ್ತಿಗೆದಾರ ಸುರೇಶ ಪೈ ವಾಹನ ಚಾಲನೆ ಮಾಡುವಾಗಲೇ ಹೃದಯಾಘಾತ ಆಗಿದ್ದರಿಂದ ಕಾರು ರಸ್ತೆ ಬದಿಯ ಕಾಂಪೌಂಡ್‌ಗೆ ಡಿಕ್ಕಿ ಹೊಡೆದು, ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಬಿಐಇಟಿ ಕಾಲೇಜು ಬಳಿಯ ಈಶ್ವರ ಧ್ಯಾನ ಮಂದಿರ ಸಮೀಪ ಸೋಮವಾರ ತಡರಾತ್ರಿ ಸಂಭವಿಸಿದೆ.

- ಗುತ್ತಿಗೆದಾರ, ಬನಶಂಕರಿ ಬಡಾವಣೆಯ ನಿವಾಸಿ ಸುರೇಶ್‌ ಪೈ ಮೃತವ್ಯಕ್ತಿ

- ಬಿಐಇಟಿ ಕಾಲೇಜು ಬಳಿ ಸೋಮವಾರ ತಡರಾತ್ರಿ ಘಟನೆ

- - - ದಾವಣಗೆರೆ: ನಗರದ ಬನಶಂಕರಿ ಬಡಾವಣೆಯ ನಿವಾಸಿ, ಕಾಂಗ್ರೆಸ್ ಯುವ ಮುಖಂಡ, ಗುತ್ತಿಗೆದಾರ ಸುರೇಶ ಪೈ ವಾಹನ ಚಾಲನೆ ಮಾಡುವಾಗಲೇ ಹೃದಯಾಘಾತ ಆಗಿದ್ದರಿಂದ ಕಾರು ರಸ್ತೆ ಬದಿಯ ಕಾಂಪೌಂಡ್‌ಗೆ ಡಿಕ್ಕಿ ಹೊಡೆದು, ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಬಿಐಇಟಿ ಕಾಲೇಜು ಬಳಿಯ ಈಶ್ವರ ಧ್ಯಾನ ಮಂದಿರ ಸಮೀಪ ಸೋಮವಾರ ತಡರಾತ್ರಿ ಸಂಭವಿಸಿದೆ. ವಾಹನ ಕಾಂಪೌಂಡ್‌ಗೆ ಡಿಕ್ಕಿ ಹೊಡೆಯುತ್ತಿದ್ದಂತೆ ಸ್ಥಳೀಯರು, ದಾರಿಹೋಕರು ಗಾಯಾಳು ರಕ್ಷಣೆಗೆ ಧಾವಿಸಿದರು. ಅಷ್ಟರಲ್ಲಾಗಲೇ ಸುರೇಶ ಪೈ ಸಾವನ್ನಪ್ಪಿದ್ದರು. ದಕ್ಷಿಣ ಸಂಚಾರ ಪೊಲೀಸ್ ಠಾಣೆ ಪಿಎಸ್ಐ ಶೈಲಜ ಹಾಗೂ ಅಧಿಕಾರಿ, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

- - - -25ಕೆಡಿವಿಜಿ6: ಸುರೇಶ ಪೈ

-25ಕೆಡಿವಿಜಿ7, 8, 9: ಸುರೇಶ ಪೈ ಕಾರು ಕಾಂಪೌಂಡ್‌ಗೆ ಡಿಕ್ಕಿ ಹೊಡೆದಿರುವುದು.