ಜಾವಗಲ್‌ ದರ್ಗಾಕ್ಕೆ ಕಾಂಗ್ರೆಸ್ ಮುಖಂಡರ ದಂಡು

| Published : Apr 13 2024, 01:10 AM IST / Updated: Apr 13 2024, 12:05 PM IST

ಸಾರಾಂಶ

ಜಾವಗಲ್‌ ಪಟ್ಟಣದ ಪ್ರಸಿದ್ಧ ದರ್ಗಾಗೆ ರಂಜಾನ್ ಹಬ್ಬದ ಅಂಗವಾಗಿ ಭೇಟಿ ನೀಡಿ ಬಾಬಾ ಅವರ ಸಮಾಧಿಗೆ ಪೂಜೆ ಸಲ್ಲಿಸಿ ವೈ.ಎನ್.ಕೃಷ್ಣೇಗೌಡ ಬಿರುಸಿನ ಚುನಾವಣೆ ಪ್ರಚಾರ ಮಾಡಿದರು.

  ಜಾವಗಲ್ :  ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾತಿ ಧರ್ಮ ಮೀರಿ ದೇಶದ ಎಲ್ಲಾ ವರ್ಗದವರಿಗೂ ದೇಶದ ಸಂಪತ್ತು ಸಮಾನ ಹಂಚಿಕೆ ಮಾಡಲಾಗುವುದು. ಪ್ರತಿವರ್ಷಕ್ಕೆ ಮಹಿಳೆಯರಿಗೆ ಒಂದು ಲಕ್ಷ ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದು ಪಕ್ಷದ ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಅಧಿಕಾರಕ್ಕೆ ಬಂದ ಕೂಡಲೇ ಜಾತಿ ಧರ್ಮ ಸೇರಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೈ.ಎನ್.ಕೃಷ್ಣೇಗೌಡ ತಿಳಿಸಿದರು.

ಪಟ್ಟಣದ ಪ್ರಸಿದ್ಧ ದರ್ಗಾಗೆ ರಂಜಾನ್ ಹಬ್ಬದ ಅಂಗವಾಗಿ ಭೇಟಿ ನೀಡಿ ಬಾಬಾ ಅವರ ಸಮಾಧಿಗೆ ಪೂಜೆ ಸಲ್ಲಿಸಿ ನಂತರ ಜಾವಗಲ್ ಪಟ್ಟಣದಲ್ಲಿ ಹಾಗೂ ಹೋಬಳಿಯ ವ್ಯಾಪ್ತಿಯಲ್ಲಿ ಹಾಸನ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರ ಪರ ಬಿರುಸಿನ ಚುನಾವಣೆ ಪ್ರಚಾರ ಮಾಡುತ್ತ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾಂಗ್ರೆಸ್ ಪಕ್ಷದ ಪ್ರಮುಖ ಪ್ರಣಾಳಿಕೆಯಾದ ದೇಶದ ಸಂಪತ್ತನ್ನು ಜಾತಿ, ಧರ್ಮ ಮೀರಿ ದೇಶದ ಜನತೆಗೆ ಸಮಾನ ಹಂಚಿಕೆ ಒಂದು ಲಕ್ಷ ಹಾಗೂ ನಿರುದ್ಯೋಗ ಯುವತಿ, ಯುವಕರಿಗೆ ಉದ್ಯೋಗ ಜಾತಿ ಧರ್ಮ ಮೀರಿ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ಕೂಡಲೇ ಜಾರಿಗೆ ಬರುವುದು ಎಂದು ಹೇಳಿದರು.

‘ರಾಜ್ಯಸಭಾ ಮಾಜಿ ಸದಸ್ಯ ಜವರೇಗೌಡ, ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ತೀವ್ರ ಬರಗಾಲದಿಂದ ಕತ್ತರಿಸಿರುವ ಸಂಕಷ್ಟ ಸಮಯದಲ್ಲಿ ಇತ್ತ ಮುಖ ಮಾಡುತ್ತಿದ್ದಾರೆ. ಬಿಜೆಪಿ ಜೆಡಿಎಸ್ ನಾಯಕರು ಯಾವ ಮುಖ ಹೊತ್ತು ಮತ ಕೇಳಲು ಬರುತ್ತಿದ್ದಾರೆ. ರಾಜ್ಯಕ್ಕೆ ಕಿಂಚಿತ್ತು ನೆರವು ನೀಡದ ಕೇಂದ್ರ ಸರ್ಕಾರದ ಧೋರಣೆ ನೋಡಿದರೆ ಅವರ ಒಕ್ಕೂಟದ ವ್ಯವಸ್ಥೆಗೆ ನಮ್ಮ ರಾಜ್ಯ ಸೇರಿಲ್ಲವೆ’ ಎಂದು ಕಿಡಿಕಾರಿದರು.

ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾವಗಲ್ ಮಂಜುನಾಥ್, ಕೇಂದ್ರ ಬಿಜೆಪಿ ಸರ್ಕಾರ ಜನವಿರೋಧಿ ರೈತ ವಿರೋಧಿ ಸಂವಿಧಾನ ವಿರೋಧಿ ಸರ್ಕಾರ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಬಳಲುತ್ತಿದ್ದಾರೆ. ಭೂ ಸ್ವಾದೀನ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ ಎಂದು ದೂರಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಈಶ್ವರಹಳ್ಳಿ ಲಕ್ಷ್ಮಣ್, ಅಲ್ಪಸಂಖ್ಯಾತರ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಮದ್, ಬೇಲೂರು ವಿಧಾನಸಭಾ ಕ್ಷೇತ್ರದ ಮುಖಂಡ ಗ್ರಾನೈಟ್ ರಾಜಶೇಖರ್, ಹೋಬಳಿ ಕಾಂಗ್ರೆಸ್ ಮುಖಂಡರಾದ ಫೈರೋಜ್ ಗಾಂಧಿ, ಶಕೀಲ್ ಸದ್ದು, ಶಾಕೀರ್, ಇಮ್ತಿಯಾಜ್, ನಾಸೀರ್ ಇದ್ದರು.

ಜಾವಗಲ್‌ ಪಟ್ಟಣದ ಪ್ರಸಿದ್ಧ ದರ್ಗಾಗೆ ರಂಜಾನ್ ಹಬ್ಬದ ಅಂಗವಾಗಿ ಭೇಟಿ ನೀಡಿದ್ದ ಕಾಂಗ್ರೆಸ್ ಮುಖಂಡರು.