ಕಾಂಗ್ರೆಸ್‌ ಘೋಷಣಾ ಪತ್ರಕ್ಕೆ ಕಿಮ್ಮತ್ತಿಲ್ಲ, ಯಾರೂ ಗಮನಿಸಲ್ಲ: ಡಾ. ರಾಧಾ ಮೋಹನದಾಸ್‌

| Published : Apr 12 2024, 01:01 AM IST

ಕಾಂಗ್ರೆಸ್‌ ಘೋಷಣಾ ಪತ್ರಕ್ಕೆ ಕಿಮ್ಮತ್ತಿಲ್ಲ, ಯಾರೂ ಗಮನಿಸಲ್ಲ: ಡಾ. ರಾಧಾ ಮೋಹನದಾಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್‌ ಲೋಕಸಭೆ ನಮ್ಮ ಪಕ್ಷದ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ ಅವರು ಕನಿಷ್ಟ 4 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ.

ಕನ್ನಡಪ್ರಭ ವಾರ್ತೆ ಬೀದರ್‌

ಅಧಿಕಾರಕ್ಕೇರುವ ಹಗಲು ಕನಸು ಕಾಣುತ್ತಿರುವ ಕಾಂಗ್ರೆಸ್‌ ಪಕ್ಷದ ಘೋಷಣಾ ಪತ್ರದಲ್ಲಿ ಜನ ಹೆಚ್ಚು ಉತ್ಸುಕರಾಗಿಲ್ಲ ಹಾಗೆಯೇ ಅದರತ್ತ ಕಣ್ಣಾಡಿಸಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಲೋಕಸಭೆ ಚುನಾವಣೆ ಉಸ್ತುವಾರಿ ಡಾ. ರಾಧಾ ಮೋಹನದಾಸ್‌ ಅಗರವಾಲ್‌ ವ್ಯಂಗ್ಯವಾಡಿದರು.ಅವರು ಗುರುವಾರ ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರಾಮದ್ರೋಹಿ, ಪಾಕಿಸ್ತಾನ ಪರ ಘೋಷಣೆ, ಹಿಂದೂ ದೇವಸ್ಥಾನಗಳಿಗೆ ತೆರಿಗೆ, ಹಿಂದೂಗಳ ಅಂಗಡಿಗಳಲ್ಲಿ ಹನುಮಾನ ಚಾಲೀಸಾ ಹಚ್ಚಿದರೆ ಅವರ ಮೇಲೆ ದಾಳಿ ಮಾಡಿಸುವಂಥ ವಿಪರೀತ ಬುದ್ಧಿ ಈ ಕಾಂಗ್ರೆಸ್‌ ಸರ್ಕಾರಕ್ಕಿದ್ದು ಅದರ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೇರುವದಕ್ಕೆ ಜನರು ಬಿಡುವದು ಅಸಾಧ್ಯದ ಮಾತು ಎಂದರು. ರಾಜ್ಯದ 28 ಲೋಕಸಭೆ ಕ್ಷೇತ್ರಗಳಲ್ಲಿಯೂ ಎನ್‌ಡಿಎ ಅಭ್ಯರ್ಥಿಗಳು ಗೆಲ್ಲುವುದು ಗ್ಯಾರಂಟಿ. ಬೀದರ್‌ ಲೋಕಸಭೆ ನಮ್ಮ ಪಕ್ಷದ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ ಅವರು ಕನಿಷ್ಟ 4 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ. ಎದುರಾಳಿ ಚಿಕ್ಕ ಬಾಲಕನಾಗಿದ್ದು ಆತನ ವಿರುದ್ಧ ಗೆಲುವು ಸರಳ ಸಾಧ್ಯ ಎಂದರು.ಔರಾದ್‌ ಶಾಸಕ ಪ್ರಭು ಚವ್ಹಾಣ್‌ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಆಗಿದ್ದು ಅವರು ಸುಧಾರಿಸಿಕೊಳ್ಳಲು ಇನ್ನೂ ಕಾಲಾವಕಾಶ ಬೇಕಿದೆ. ಅವರು ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿದ್ದು, ಬೇಗ ಗುಣಮುಖವಾಗಲಿ ಎಂದು ಪಕ್ಷ ಬಯಸುತ್ತದೆ ಅಷ್ಟಕ್ಕೂ ಬೀದರ್‌ ಜಿಲ್ಲೆಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಬಿಜೆಪಿ ಹಾಗೂ ಜೆಡಿಎಸ್‌ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದ್ದು, ಇವರ ಉತ್ಸಾಹ ಇಮ್ಮಡಿಗೊಂಡಿದೆ ಎಂದರು. ಇದಲ್ಲದೇ ಮಾಜಿ ಡಿಸಿಎಂ ಕೆಎಸ್‌ ಈಶ್ವರಪ್ಪ ಸಹ ಬಿಜೆಪಿ ನಿಷ್ಟಾವಂತ ಕಾರ್ಯಕರ್ತರಾಗಿದ್ದು, ತಮ್ಮ ಮುನಿಸು ನಿಲ್ಲಿಸುತ್ತಾರೆ ಬೇಗ ಪಕ್ಷದ ಅಭ್ಯರ್ಥಿ ಬಿವೈ ರಾಘವೇಂದ್ರ ಅವರ ಜೊತೆ ಪಕ್ಷದ ಗೆಲುವಿಗೆ ಶ್ರಮಿಸುತ್ತಾರೆ ಎಂಬ ವಿಶ್ವಾಸವಿದೆ ಇದರೊಟ್ಟಿಗೆ ಮಾಧುಸ್ವಾಮಿ ಮತ್ತು ಗುತ್ತಿಗೆದಾರ ಅವರು ಬಿಜೆಪಿ ಬಿಡೋಲ್ಲ ಎಂಬ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್‌ ಹುಡಗಿ, ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ, ಪಕ್ಷದ ಲೋಕಸಭೆ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ ಸೇರಿದಂತೆ ಮತ್ತಿತರ ಪ್ರಮುಖರು ಇದ್ದರು.