ಸಾರಾಂಶ
- ರಾಜಸ್ಥಾನದಲ್ಲಿ ಪ್ರಣಾಳಿಕೆ ಬಗ್ಗೆ ಹಗುರ ಹೇಳಿಕೆಗೆ ಆಕ್ಷೇಪ- - - ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ರಾಜಸ್ಥಾನದಲ್ಲಿ ಚುನಾವಣೆ ಪ್ರಚಾರದಲ್ಲಿ ಕಾಂಗ್ರೆಸ್ಸಿನ ಪ್ರಣಾಳಿಕೆ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಈ ಅಂಶದಲ್ಲಿ ಯಾವುದೇ ರೀತಿಯ ಸತ್ಯತೆ ಇಲ್ಲ ಎಂದಿದ್ದಾರೆ. ಈ ಹಿನ್ನೆಲೆ ಜನರಿಗೆ ಕಾಂಗ್ರೆಸ್ ಬಗ್ಗೆ ತಪ್ಪು ಸಂದೇಶ ನೀಡೋದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ, ಬುಧವಾರ ಜವಾಹರ ಲಾಲ್ ಮಂಚ್ ವತಿಯಿಂದ ಪ್ರಧಾನಿಗೆ ಅಂಚೆ ಮೂಲಕ ಕಾಂಗ್ರೆಸ್ ಪ್ರಣಾಳಿಕೆ ರವಾನಿಸಲಾಗಿದೆ.
ಅಂಚೆ ಮೂಲಕ ಕಾಂಗ್ರೆಸ್ ಪ್ರಣಾಳಿಕೆ ರವಾನೆ ಬಳಿಕ ಪದಾಧಿಕಾರಿಗಳು ಮಾತನಾಡಿ, ನಮ್ಮ ಪ್ರಣಾಳಿಕೆಯಲ್ಲಿ ಎಲ್ಲಿಯೂ ಕೂಡ ಜಾತಿ, ಧರ್ಮದ ತಾರತಮ್ಯದ ವಿಷಯವನ್ನು ನಮೂದಿಸಿಲ್ಲ. ಪ್ರಣಾಳಿಕೆ ಸರಿಯಾಗಿ ಅವಲೋಕಿಸದ ಪ್ರಧಾನಿ ಆರೋಪಿಸುವುದು ಸರಿಯಲ್ಲ. ಜನರಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಮಾಡಲಾಗುವುದು ಎಂದು ತಿಳಿಸಿದರು.ನಮ್ಮ ಪ್ರಣಾಳಿಕೆಯಲ್ಲಿ ಸಮಾನತೆ, ಸಾಮಾಜಿಕ ನ್ಯಾಯ, ಯುವಜನರಿಗೆ ಉದ್ಯೋಗ ಶಿಕ್ಷಣ ಕ್ರೀಡೆ, ಮಹಿಳೆಯರಿಗೆ ಸಬಲೀಕರಣ, ರೈತರಿಗೆ ಅದ್ಯತೆ, ಸಂವಿಧಾನದ ರಕ್ಷಣೆ, ನ್ಯಾಯಾಂಗ, ಭ್ರಷ್ಟಾಚಾರ ವಿರೋಧಿ, ಕಲೆ, ಸಂಸ್ಕೃತಿ ಮತ್ತು ಪರಂಪರೆ, ಮೂಲಸೌಕರ್ಯ, ಫೆಡರಲಿಸಂ ಕೇಂದ್ರ-ರಾಜ್ಯ ಸಂಬಂಧಗಳು, ಗ್ರಾಮೀಣ ಮತ್ತು ನಗರಾಭಿವೃದ್ಧಿ, ಈಶಾನ್ಯ ರಾಜ್ಯಗಳು, ದೇಶದ ಭದ್ರತೆ, ಪರಿಸರ, ನೀರು ನಿಯಂತ್ರಣ ಮತ್ತು ನೈರ್ಮಲ್ಯ ಈ ಎಲ್ಲ ವಿಷಯಗಳಿಗೆ ಆದ್ಯತೆ ನೀಡಿ, ಭರವಸೆ ನೀಡಲಾಗಿದ.ಎ ಇವುಗಳನ್ನು ಪ್ರಧಾನಮಂತ್ರಿ ಅವರು ಅರ್ಥೈಸಿಕೊಳ್ಳದೇ ಹೇಳಿಕೆ ನೀಡಿದ್ದಾರೆ ಎಂದು ಖಂಡಿಸಿದರು.
ಈ ಸಂದರ್ಭ ಸಂಘಟನೆ ಪದಾಧಿಕಾರಿಗಳಾದ ಅಮ್ಜದ್ ಖಾನ್, ಖ್ವಾಜಾ ಮೊಹಿದ್ದೀನ್, ಲಿಯಾಖತ್ ಅಲಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಸಾದಿಕ್, ಮಹಮ್ಮದ್ ವಾಜೀದ್, ಚಿರಂಜೀವಿ, ಶಾರು, ಫಯಾಜ್, ಇನ್ನಿತರರು ಉಪಸ್ಥಿತರಿದ್ದರು.- - - -24ಕೆಡಿವಿಜಿ32ಃ:
ದಾವಣಗೆರೆಯಲ್ಲಿ ಜವಾಹರ್ ಲಾಲ್ ಮಂಚ್‌ನಿಂದ ಅಂಚೆ ಮೂಲಕ ಕಾಂಗ್ರೆಸ್ ಪ್ರಣಾಳಿಕೆಯನ್ನು ರವಾನೆ ಮಾಡಲಾಯಿತು.