ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಮೀಸಲಿಟ್ಟ ಹಣದಲ್ಲಿ ೧೧ ಸಾವಿರ ಕೋಟಿ ರು.ಗಳ ಹಣವನ್ನು ಗ್ಯಾರಂಟಿಗೆ ಉಪಯೋಗಿಸಿರುವುದು ದಲಿತರಿಗೆ ಮಾಡಿದ ಮೋಸ, ಅನ್ಯಾಯವಾಗಿದ್ದು, ಇದು ನುಡಿದಂತೆ ನಡೆದ ಸರಕಾರವಲ್ಲ ಎಂದು ಕಾಂಗ್ರೆಸ್ ವಿರುದ್ಧ ರಾಜ್ಯಸಭಾ ಸದಸ್ಯ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ, ಸಾಮಾಜಿಕ ನ್ಯಾಯ ಸಬಲೀಕರಣ ವೇದಿಕೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಎಸ್.ಸಿ., ಎಸ್ಪಿ/ ಟಿ.ಎಸ್.ಪಿ. ಅನುದಾನ ದುರ್ಬಳಕೆ ಬಗ್ಗೆ ಜನಾಂದೋಲನದ ಅಂಗವಾಗಿ ಶನಿವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ವಿಚಾರ ಸಂಕಿರಣದಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಒಂದು ಕೈಯಿಂದ ಕೊಟ್ಟು ಇನ್ನೊಂದು ಕೈಯಿಂದ ಕಿತ್ತುಕೊಳ್ಳುವ ಪ್ರವೃತ್ತಿ ಕಾಂಗ್ರೆಸ್ ಸರಕಾರದ್ದಾಗಿದೆ. ೨೦೧೩ರಿಂದ ೨೦೨೩ರ ವರೆಗೂ ೧೦ ವರ್ಷಗಳು ಕಳೆದಿದ್ದು, ಸರಾಸರಿ ಒಂದು ವರ್ಷಕ್ಕೆ ೩೦ ಸಾವಿರ ಕೋಟಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ನಾವು ಮೀಸಲಿಡುತ್ತೇವೆ ಎಂದು ಸರಕಾರವು ಅಂದಿನಿಂದ ಹೇಳುತ್ತಲೆ ಬಂದಿದೆ. ೧೦ ವರ್ಷದಲ್ಲಿ ೩ ಲಕ್ಷ ಕೋಟಿ ರು. ಗಳ ಹಣವಾಗುತ್ತದೆ. ಇಷ್ಟು ಹಣಗಳು ಸರಿಯಾಗಿ ತಲುಪಿಸಿದರೆ ಈ ಜನಾಂಗದ ಸ್ಥಿತಿ ಏನಾಗಬಹುದು? ಇದೆ ಬಡತನ ಇರುತ್ತಿರಲಿಲ್ಲ. ಜೀವನ ಚನ್ನಾಗಿರುತಿತ್ತು. ಚನ್ನಾಗಿ ಶಿಕ್ಷಣ ಪಡೆದವರಿಗೆ ಸಮಾಜದಲ್ಲಿ ಹೇಗೆ ಬದುಕಬೇಕು ಎನ್ನುವುದು ಅವರೆ ರೂಪಿಸಿಕೊಳ್ಳುತ್ತಾರೆ. ಆದರೇ ಅಂತಹ ವಿದ್ಯೆಗೆ ಹಣವನ್ನು ಸರಕಾರ ಕೊಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಯಾರಿಗೆ ಜಮೀನು ಇಲ್ಲ ಅವರಿಗೆ ಸರಕಾರವು ಜಮೀನು ಕೊಡಬೇಕು ಎನ್ನುವುದು ಕಾನೂನು ಇದೆ ಎಂದರು.
ಬಜೆಟ್ ಗಾತ್ರ ಹೆಚ್ಚಾದಂತೆ ಅಷ್ಟು ೨೪ ಪರ್ಸೆಂಟ್ ಹಣ ಇಟ್ಟಿರುವುದಕ್ಕೆ ಸಂತೋಷವಾಯಿತು. ಆದರೇ ಅದಕ್ಕೆ ಸರಕಾರ ಬರಬೇಕಾಗಿತ್ತು. ಕಾಂಗ್ರೆಸ್ ಚುನಾವಣೆ ವೇಳೆ ಜನರಿಗೆ ಗ್ಯಾರಂಟಿಯ ಆಸೆಯನ್ನು ಇಟ್ಟರು. ಮೊದಲನೇ ಗ್ಯಾರಂಟಿ ಹೆಣ್ಣು ಮಕ್ಕಳಿಗೆ ಬಸ್ ನಲ್ಲಿ ಉಚಿತ, ಮನೆ ಒಡತಿಗೆ ಒಬ್ಬರಿಗೆ ೨ ಸಾವಿರ ಖಾತೆಗೆ ಹಣ, ೧೦ ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದರು. ಅದಾದ ಮೇಲೆ ೨೦೦ ಯೂನಿಟ್ ಉಚಿತ ವಿದ್ಯುತ್, ಯುವ ನಿಧಿಯಲ್ಲಿ ಯಾರು ಡಿಗ್ರಿ ಅವರಿಗೆ ೩ ಸಾವಿರ, ಡಿಪ್ಲೊಮೊ ಮಾಡಿರುವವರಿಗೆ ಪ್ರೋತ್ಸಹ ಧನದಲ್ಲಿ ಈಗಾಗಲೇ ನಾಲ್ಕು ಗ್ಯಾರಂಟಿಯನ್ನು ಕೊಡಲಾಗಿದೆ. ಎಲ್ಲಾರಿಗೂ ಗ್ಯಾರಂಟಿ ಕೊಡುವಾಗ ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಇಲ್ಲವೇ ಅಲ್ಪಸಂಖ್ಯಾತರಿಗೆ ಎನ್ನುವ ಪ್ರಶ್ನೆ ಬರುವುದಿಲ್ಲ. ಆದರೆ ೩೪ ಸಾವಿರ ಕೋಟಿಯನ್ನು ಪರಿಶಿಷ್ಟ ಜಾತಿ ಮತ್ತು ವರ್ಗಕೆ ಮೀಸಲಿಟ್ಟ ಹಣದಲ್ಲಿ ೧೧ ಸಾವಿರ ಕೋಟಿ ರು. ಗಳನ್ನು ತೆಗೆದುಕೊಂಡು ಹೋಗಿರುವುದು ದಲಿತ ಸಮುದಾಯಕ್ಕೆ ಮಾಡಿದ ಮೋಸ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ರಾಜ್ಯಾದ್ಯಂತ ಪ್ರಶ್ನೆ ಮಾಡಲಾಗುತ್ತಿದೆ. ೭ಡಿ ತೆಗೆಯುವುದಾಗಿ ವಾಗ್ದಾನ ಮಾಡಲಾಯಿತು. ಸರಕಾರ ಬಂದ ೨೪ ಗಂಟೆಯಲ್ಲಿ ೭ಡಿ ತೆಯುವುದಾಗಿ ಹೇಳಿದ್ದರು. ಆದರೇ ಆರೆಳು ತಿಂಗಳು ಕಳೆದರೂ ಇದುವರೆಗೂ ತೆಗೆದಿರುವುದಿಲ್ಲ ಎಂದು ದೂರಿದರು. ಕಾಂಗ್ರೆಸ್ ಎಂದರೇ ಹೇಳುವುದು ಒಂದು ಮಾಡುವುದು ಮತ್ತೊಂದು ಎನ್ನುವುದು ಮನಸ್ಸಿನಲ್ಲಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.ಇದು ನುಡಿದಂತೆ ಸರಕಾರವಲ್ಲ. ಈ ಹಣದಲ್ಲಿ ಕೊಡುವುದಲ್ಲ. ನಮ್ಮ ಖಾತೆಯಿಂದ ಕನ್ನ ಹೊಡಿದಿದ್ದೀರಿ, ನಮ್ಮ ಜಣ ನಮ್ಮ ಖಾತೆಗೆ ಹಾಕಿ. ಅಂಬೇಡ್ಕರ್ ಹೇಳುವಂತೆ ಆದರೇ ನಮ್ಮ ಬಾಳು ಚನ್ನಾಗಿರುತ್ತದೆ. ಹನ್ನೊಂದು ಸಾವಿರ ಕೋಟಿ ನುಂಗಿದರೂ ಕೂಡ, ಅನೇಕರು ಬಾಯಿ ಬಿಚ್ಚುತ್ತಿಲ್ಲ ಏಕೆ. ನಾನೋರ್ವ ಅನ್ಯಾಯ ಆಗಿದೆ ಎಂದರೇ ಸಾಲದು. ನಮ್ಮ ಜನರು ದಡ್ಡರಿಲ್ಲ, ಬುದ್ಧಿವಂತರಿದ್ದಾರೆ. ಸದನದಲ್ಲಿ ನಾನು ಕೂಡ ಕೇಳಿದ್ದೇನೆ. ಮಹದೇವಪ್ಪ ಅವರಿಗೂ ಕೇಳಿದೆ. ಈ ಹಣ ದುರುಪಯೋಗ ಆಗುವುದಕ್ಕೆ ಬಿಡುವುದಿಲ್ಲ, ದಲಿತರಿಗೆ ಬಿಟ್ಡು ಬೇರೆ ಯಾವುದಕ್ಕೂ ಬಳಕೆ ಮಾಡುವುದಿಲ್ಲ ಎನ್ನುತ್ತಾರೆ ಹೊರತು ಇದನ್ನು ಗ್ಯಾರಂಟಿಗೆ ಬಳಸಿರುವ ಬಗ್ಗೆ ಮಾತನಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಾವು೩೪ ಸಾವಿರ ಕೋಟಿ ದಲಿತರಿಗೆ ಇಟ್ಟಿದ್ಧೇವೆ ಎಂದು ಸಿಎಂ ಹೇಳುತ್ತಾರೆ. ನಮಗೆ ಈ ರೀತಿ ಮೋಸ ವಂಚನೆ ಮಾಡುತ್ತಿದ್ದಾರೆ. ಕೇಂದ್ರ ಕೊಡುತ್ತಿರುವ ಅಕ್ಕಿ ಮಾತ್ರ ಬರುತ್ತಿದೆ ಆದರೇ ರಾಜ್ಯದಿಂದ ಯಾವ ಅಕ್ಕಿ ಬರುತ್ತಿಲ್ಲ. ಈ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರವಿದೆ. ಮೊದಲು ನಮ್ಮವರಿಗೆ ಸೂಕ್ತವಾದ ಶಿಕ್ಷಣ ಕೊಡಬೇಕು. ನಮ್ಮ ಸಮುದಾಯವನ್ನು ಮೊದಲು ಒಗ್ಗೂಡಿಸುವ ಅವಶ್ಯಕತೆ ಇದೆ. ಹಿಂದೆ ಬ್ರಿಟಿಷರು ಇನ್ನೂರು ವರ್ಷಗಳ ಕಾಲ ಹೊಡೆದಾಡುವ ಕೆಲಸ ಮಾಡಿ ಆಳಿದರು. ಈ ಗುಣ ಈಗಲು ಮುಂದುವರೆದಿದೆ. ಯಾವ ಆಡಳಿತವಪಕ್ಷ ಆಗಿರಲಿ ತಪ್ಪು ಮಾಡಿದರೇ ಅದು ತಪ್ಪೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಲೂರು ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು, ಸಾಮಾಜಿಕ ನ್ಯಾಯ ಸಬಲೀಕರಣ ವೇದಿಕೆ ಸಂಯೋಜಕ ಎಚ್.ಸಿ. ಸ್ಟೀವನ್ ಪ್ರಕಾಶ್, ವಕೀಲರಾದ ಯೋಗೀಶ್, ಮಾಜಿ ಸಚಿವ ಎನ್. ಮಹೇಶ್, ಆರ್.ಪಿ.ಐ. ರಾಜ್ಯಾಧ್ಯಕ್ಷರು ಸತೀಶ್, ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷರು ಎಸ್.ಡಿ. ಚಂದ್ರು, ಹಿರಿಯ ದಲಿತ ಮುಖಂಡರು ಪರ್ವತಯ್ಯ, ಇತರರು ಉಪಸ್ಥಿತರಿದ್ದರು.