ಸಾರಾಂಶ
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ದೇಶ ಏಕತೆ ಬಯಸುವಾಗ ಬಿಜೆಪಿ ವಿಭಜನೆ ಬಯಸುತ್ತಿದೆ. ಅವರು ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರು ಎಂದು ವಿಭಜನೆ ಮಾಡಿ ದೇಶ ಒಡೆಯುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕರು ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ವಿರೋಧಿಸಿ ಮಂಗಳೂರು ನಗರ ಹಾಗೂ ಉತ್ತರ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಮಂಗಳೂರು ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು.ಪ್ರತಿಭಟನೆಯನ್ನು ಉದ್ದೇಶಿಸಿ ದಕ್ಷಿಣ ಕನ್ನಡ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಶಾಸಕ ಡಾ. ಭರತ್ ಶೆಟ್ಟಿ ಒಬ್ಬ ವೈದ್ಯರಾಗಿ ಅದರ ಘನತೆ ಮರೆತು ಮಾತನಾಡುತ್ತಿದ್ದಾರೆ, ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ದೇಶ ಏಕತೆ ಬಯಸುವಾಗ ಬಿಜೆಪಿ ವಿಭಜನೆ ಬಯಸುತ್ತಿದೆ. ಅವರು ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರು ಎಂದು ವಿಭಜನೆ ಮಾಡಿ ದೇಶ ಒಡೆಯುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.ಪ್ರತಿಭಟನೆ ವೇಳೆ ಕೆಲವರು ಶಾಸಕ ಡಾ.ಭರತ್ ಶೆಟ್ಟಿ ಮುಖವಾಡ ಧರಿಸಿ ಧಿಕ್ಕಾರ ಘೋಷಣೆ ಕೂಗಿದರು.ಮುಖಂಡರಾದ ಸುರೇಶ್ ಬಲ್ಲಾಳ್, ಶಶಿಧರ್ ಹೆಗ್ಡೆ, ಎಂ.ಜಿ.ಹೆಗಡೆ ಮತ್ತಿತರರು ಪಾಲ್ಗೊಂಡಿದ್ದರು.