ಸಾರಾಂಶ
ಪ್ರವಾಸಿ ಮಂದಿರದಿಂದ ಡಿಸಿ ಕಚೇರಿ ಒನಕೆ ಓಬವ್ವ ವೃತ್ತದವರೆಗೆ ಕಾರ್ಯಕರ್ತರಿಂದ ಪ್ರತಿಭಟನೆ ಮೆರವಣಿಗೆಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕೇಂದ್ರ ಸರ್ಕಾರ ಅಡುಗೆ ಅನಿಲ, ಪೆಟ್ರೋಲ್ ಹಾಗೂ ಡಿಸೇಲ್ ದರವನ್ನು ಹೆಚ್ಚಿಸಿರುವುದನ್ನು ವಿರೋಧಿಸಿ ಜಿಲ್ಲಾ ಯುವ ಕಾಂಗ್ರೆಸ್‍ನ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಬುದವಾರ ನಗರದಲ್ಲಿ ಬೀದಿಗೆ ಇಳಿದು ಪ್ರತಿಭಟನೆ ನಡೆಸಿದರು.ನಗರದ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿಗಳ ಕಚೇರಿಯ ಒನಕೆ ಓಬವ್ವ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದ ಕಾರ್ಯಕರ್ತರು ದಾರಿಯುದ್ದಕ್ಕೂ ಭಿತ್ತಿ ಪತ್ರಗಳನ್ನು ಹಿಡಿದು ಕೇಂದ್ರ ಸರ್ಕಾರದ ಧೋರಣೆ ಹಾಗೂ ಬೆಲೆ ಏರಿಕೆ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.ಪ್ರತಿಭಟನೆ ನೇತೃತ್ವ ವಹಿಸಿದ್ದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಾರೇಹಳ್ಳಿ ಉಲ್ಲಾಸ ಕೇಂದ್ರ ಸರ್ಕಾರ ಪೆಟ್ರೋಲ್ ಡಿಸೇಲ್‍ನ ಅಬಕಾರಿ ಸುಂಕವನ್ನು 2ರು.ಗೆ ಹೆಚ್ಚಳ ಮಾಡುವುದರ ಮೂಲಕ ಬಡವರ ಬದುಕಿಗೆ ಕೊಳ್ಳಿಯನ್ನು ಇಡಲಾಗಿದೆ. ಇವುಗಳ ದರ ಏರಿಕೆಯಿಂದಾಗಿ ಬೇರೆ ಎಲ್ಲ ದರಗಳು ಸಹಾ ಏರಿಕೆಯಾಗುತ್ತವೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದವರು ಬದುಕು ಕಷ್ಟಕ್ಕೆ ದೂಡುತ್ತದೆ, ಸರ್ಕಾರ ಈ ಕೂಡಲೇ ಏರಿಕೆ ಮಾಡಿದರುವ ದರವನ್ನು ಇಳಿಕೆ ಮಾಡಬೇಕು ಈ ಬೆಲೆ ಏರಿಕೆಯಿಂದಾಗಿ ಹಣದುಬ್ಬರ ಹಾಗೂ ನಿರುದ್ಯೋಗ ಹೆಚ್ಚಾಗುತ್ತದೆ ಎಂದು ದೂರಿದರು. ಕೇಂದ್ರ ಸರ್ಕಾರ ಬರೀ ಡಿಸೆಲ್ ಪೆಟ್ರೋಲ್ ದರವನ್ನು ಮಾತ್ರವೇ ಹೆಚ್ಚಳ ಮಾಡದೇ ಅಡುಗೆ ಅನಿಲದ ದರವನ್ನು ಸಹಾ ಹೆಚ್ಚಳ ಮಾಡಿದೆ. ಒಂದು ಸಿಲಿಂಡರ್‌ಗೆ 50 ರು. ಹೆಚ್ಚಳ ಮಾಡಿದೆ ಇದರಿಂದ ಜನತೆ ಅಡುಗೆ ಅನಿಲದ ಬಿಸಿ ಮುಟ್ಟಿದೆ, ದಿನಕ್ಕೆ ಒಂದೇ ಬಾರಿ ಅಡುಗೆಯನ್ನು ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಏರಿಸಿರುವ ಅಡುಗೆ ಅನಿಲದ ಬೆಲೆಯನ್ನು ಇಳಿಸಿ ಯಥಾಸ್ಥಿತಿಯನ್ನು ಕಾಪಾಡಿಕೊಂಡು ಬರುವಂತೆ ಆಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಓಬಿಸಿ ಘಟಕದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್, ದಾದಪೀರ್, ರೋಹನ್, ಕುಮಾರ್, ಮಹಾಂತೇಶ್, ಚಂದನ್, ಮಧು ಶ್ರೀನಿವಾಸ್, ವಿರೇಶ್, ರೇವಣ್ಣ, ಸೇರಿದಂತೆ ಇತರರು ಭಾಗವಹಿಸಿದ್ದರು.