ತುಕಾರಾಂ ಗೆಲುವಿನ ಮೂಲಕ ಕಾಂಗ್ರೆಸ್ ಇತಿಹಾಸ ಮರುಕಳಿಸಿದೆ: ಉದಯ ಜನ್ನು

| Published : Jun 05 2024, 12:30 AM IST

ತುಕಾರಾಂ ಗೆಲುವಿನ ಮೂಲಕ ಕಾಂಗ್ರೆಸ್ ಇತಿಹಾಸ ಮರುಕಳಿಸಿದೆ: ಉದಯ ಜನ್ನು
Share this Article
  • FB
  • TW
  • Linkdin
  • Email

ಸಾರಾಂಶ

ಬಳ್ಳಾರಿ ಜಿಲ್ಲೆಯಲ್ಲಿ ಮೊದಲಿನಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಆದರೆ 25 ವರ್ಷಗಳಿಂದ ಬಿಜೆಪಿ ಅದನ್ನು ಕಬಳಿಸಿತ್ತು.

ಕೂಡ್ಲಿಗಿ: ನಿರಂತರ 25 ವರ್ಷಗಳಿಂದ ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತಿತ್ತು. ಆದರೆ ಈ ಬಾರಿ ಬಿಜೆಪಿಯ ಇತಿಹಾಸವನ್ನು ಮುರಿದು ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಭರ್ಜರಿಯಾಗಿ ಗೆಲ್ಲುವ ಮೂಲಕ ಪುನಃ ತನ್ನ ವೈಭವಕ್ಕೆ ಮರಳಿದೆ ಎಂದು ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಸ್. ಉದಯ ಜನ್ನು ಹೇಳಿದರು.

ಅವರು ಮಂಗಳವಾರ ಕನ್ನಡಪ್ರಭದೊಂದಿಗೆ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಮೊದಲಿನಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಆದರೆ 25 ವರ್ಷಗಳಿಂದ ಬಿಜೆಪಿ ಅದನ್ನು ಕಬಳಿಸಿತ್ತು. ಈಗ ಪುನಃ ಕಾಂಗ್ರೆಸ್ ವಿಜಯ ಪತಾಕೆ ಹಾರಿಸುವ ಮೂಲಕ ಲೋಕಸಭೆಯಲ್ಲಿಯೂ ಕಾಂಗ್ರೆಸ್ ಪುನಃ ಇತಿಹಾಸ ಸೃಷ್ಟಿಸಿದೆ. ಬಳ್ಳಾರಿ ಜಿಲ್ಲೆಯ ಎಲ್ಲ ಶಾಸಕರು, ಪಕ್ಷದ ಮುಖಂಡರು, ಕಾರ್ಯಕರ್ತರು, ಜನತೆಯ ಆಶೀರ್ವಾದವೇ ಗೆಲುವಿಗೆ ಕಾರಣವಾಗಿದೆ ಎಂದರು.

ಬಳ್ಳಾರಿ ಸಂಸದರಾಗಿ ಆಯ್ಕೆಯಾದ ತುಕಾರಾಂ ಸರಳ ಸ್ವಭಾವದವರು, ಬಡನತವನ್ನು ಉಂಡು ಬೆಳೆದವರು. ಹೀಗಾಗಿ ಇವರಿಗೆ ಬಡವರ ನೋವು-ನಲಿವುಗಳ ಅರಿವಿದೆ. ಜತೆಗೆ ನಾವೆಲ್ಲರೂ ಕೈ ಜೋಡಿಸುವ ಮೂಲಕ ಅಭಿವೃದ್ಧಿಗೆ ಸಹಕರಿಸುವುದಾಗಿ ಎಸ್.ಉದಯ ಜನ್ನು ತಿಳಿಸಿದರು.