ಕನ್ನಡಪ್ರಭ ವಾರ್ತೆ ಬಾಗಲಕೋಟೆಭಾರತ ಜೋಡೋ ಹೆಸರಲ್ಲಿ ಗೂಂಡಾಗಿರಿ ಸಂಘಟನೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು, ಪ್ರತಿ ಗ್ರಾಮ ಪಂಚಾಯಿತಿಗಳಿಗೆ ₹10 ಲಕ್ಷ ಕೊಡುವ ಮೂಲಕ ಕಾಂಗ್ರೆಸ್ ಸಂಘಟನೆ ಮಾಡುತ್ತಿದೆ ಎಂದು ದೂರಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಭಾರತ ಜೋಡೋ ಹೆಸರಲ್ಲಿ ಗೂಂಡಾಗಿರಿ ಸಂಘಟನೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು, ಪ್ರತಿ ಗ್ರಾಮ ಪಂಚಾಯಿತಿಗಳಿಗೆ ₹10 ಲಕ್ಷ ಕೊಡುವ ಮೂಲಕ ಕಾಂಗ್ರೆಸ್ ಸಂಘಟನೆ ಮಾಡುತ್ತಿದೆ ಎಂದು ದೂರಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಜೋಡೋ ಹೆಸರಲ್ಲಿ ಕಾಂಗ್ರೆಸ್‌ ಗೂಂಡಾಗಿರಿ ಸಂಘಟನೆ ಮಾಡುತ್ತಿದೆ. ರಾಜ್ಯದ ಜನರ ಸಾವಿರಾರು ಕೋಟಿ ತೆರಿಗೆ ಹಣವನ್ನು ಸರ್ಕಾರ ದುರುಪಯೋಗ ಮಾಡುತ್ತಿದೆ. ಭಾರತ ಜೋಡೋ ಹೆಸರಿನಲ್ಲಿ ಪಂಚಾಯಿತಿ ಮಟ್ಟದಲ್ಲಿ ಈ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದರು.

ಡಿ.ಕೆ.ಶಿವಕುಮಾರ್‌ ಅವರು, ರಾಜ್ಯದಲ್ಲಿ ಸಿಎಂ ಆಗಿ ಪ್ರಮಾಣ ವಚನ ತೆಗೆದುಕೊಂಡ ಬಳಿಕ, ಯಾರಾದ್ರು ಭ್ರಷ್ಟಾಚಾರ ಮಾಡಿದ್ರೆ ಕಠಿಣ ಕ್ರಮ ಎಂದಿದ್ದರು. ಅವರ ಪಕ್ಷದವರೇ ಈ ಬಗ್ಗೆ ಮಾತನಾಡಿಕೊಳ್ಳುವ ಸ್ಥಿತಿ ಬಂದಿದೆ. ಏಕಂದ್ರೆ ಭ್ರಷ್ಟಾಚಾರದ ಕಳಸ ಇಟ್ಟವರು ಸಿಎಂ ಡಿಕೆಶಿ ಅವರು. ಈ ಹಿಂದೆ ನಮ್ಮ ಯಡಿಯೂರಪ್ಪನವರ ಸರ್ಕಾರದಲ್ಲಿ ಈ ಹಿಂದೆ ಕೆಲವರ ಮೇಲೆ ವಿಡಿಯೋ ನೋಡಿದ ಆರೋಪ ಬಂದಾಗ ಕೆಲ ಸಚಿವರು ತಕ್ಷಣ ರಾಜೀನಾಮೆ ಕೊಟ್ಟಿದ್ದರು. ಈಶ್ವರಪ್ಪನವರ ಮೇಲೆ ಆರೋಪ ಬಂದಾಗ ಅವರೂ ರಾಜೀನಾಮೆ ಕೊಟ್ಟಿದ್ದರು ಎಂದು ಹೇಳಿದರು.

ಮೊನ್ನೆಯಷ್ಟೇ ನಮ್ಮ ಧರ್ಮೇಂದ್ರ ಪ್ರಧಾನ ಅವರು ಕೂಡ ಆರೋಪ ಬಂದ ಮೇಲೆ ರಾಜೀನಾಮೆ ಕೊಟ್ಟರು. ಈಗ ಈ ಸರ್ಕಾರ ನಾಗೇಂದ್ರ ಅವರನ್ನ ಪ್ರೊಟೆಕ್ಟ್ ಮಾಡ್ತಾ ಇದ್ದಾರೆ. ನಾಗೇಂದ್ರ ಯಾರಿಗೆ ಯಾರಿಗೆ ದುಡ್ಡು ಕೊಟ್ಟಿದ್ದೇವೆ ಅನ್ನೋದನ್ನು ಹೇಳ್ತಾರ. ನಾಗೇಂದ್ರನ ಮೂಲಕ ಹಣ ಸಂಗ್ರಹಿಸಿ ಬೇರೆ ಬೇರೆ ರಾಜ್ಯಗಳ ಚುನಾವಣೆಗೆ ಬಳಸಿಕೊಂಡಿದ್ದಾರೆ. ಭ್ರಷ್ಟಾಚಾರದ ಹಣವನ್ನು ಚುನಾವಣೆಗೆ ಬಳಸಿದ್ದಾರೆ. ಅದನ್ನು ನಾಗೇಂದ್ರ ಬಾಯಿಬಿಡ್ತಾನೆ ಎಂದು ನಾಗೇಂದ್ರ ನನ್ನ ರಕ್ಷಿಸುತ್ತಿದ್ದಾರೆ ಎಂದರು.

ಕೇವಲ ನಾಗೇಂದ್ರ ಮಾತ್ರವಲ್ಲ, ಇಡಿ ಕಾಂಗ್ರೆಸ್ ರಾಜೀನಾಮೆ ಕೊಡಬೇಕು. ತಾರ್ತಿಕ ಅಂತ್ಯ ಕಾಣುವವರೆಗೆ ಹೋರಾಟ ಮುಂದುವರಿಯುತ್ತದೆ. ಸಚಿವ ನಾಗೇಂದ್ರ ರಾಜೀನಾಮೆ ಕೊಡುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ನಿರಾಣಿ ಎಚ್ಚರಿಸಿದರು.

ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಕಿಡಿ

ವಂದೇ ಮಾತರಂ ಗೀತೆ ಪೂರ್ಣ ಹಾಡುವುದಿಲ್ಲ. ಜೈಲಿಗೆ ಆದರೂ ಹಾಕಿ ನೇಣಿಗಾದರೂ ಹಾಕಿ ಎಂದು ಹೇಳಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಮುರಗೇಶ್ ನಿರಾಣಿ ಅವರು, ನೋಡಿ ಭಾರತ ಮಾತೆಯ ಒಡಲಲ್ಲಿದ್ದು, ಇಲ್ಲಿಯ ನೀರು, ಅನ್ನ, ಗಾಳಿ ಸೇವಿಸಿ ಎಲ್ಲ ಸವಲತ್ತುಗಳನ್ನು ತೆಗೆದುಕೊಳ್ಳುವಂತದ್ದು. ಇದು ಅವರ ಮನಸಿನಲ್ಲಿದ್ದರೆ ಅವರು ನಮ್ಮ ದೇಶದ ಕಾನೂನನ್ನು ಗೌರವಿಸಲೇಬೇಕು. ಅವರು ಏನು ಬೇಕಾದರೂ ಮಾಡುತ್ತೇವೆ ಅಂತ ದಪ್ಪ ಚರ್ಮ ಇಟ್ಕೊಂಡು ಏನಾದ್ರೂ ಮಾಡಿದ್ರೆ, ನಮ್ಮ ದೇಶದ ಅನ್ನ ನೀರು, ಗಾಳಿಯನ್ನು ಸೇವಿಸಲೇಬಾರದು. ಯಾವ ದೇಶದ ಕಾನೂನು ಅವರಿಗೆ ಒಪ್ಪುತ್ತದೋ ಆ ದೇಶಕ್ಕೆ ಹೋಗುವುದು ಒಳ್ಳೆಯದು. ಕೆಪಿಸಿಸಿ ಅಧ್ಯಕ್ಷ ಆಗಿರಬಹುದು ಅವರ ಜತೆಗೆ ಇನ್ನೂ ಒಬ್ಬ ಸನ್ಮಾನ್ಯ ಗುಲ್ಬರ್ಗ ಜಿಲ್ಲೆಯ ಶಾಸಕ ಮತ್ತು ಗೃಹ ಮಂತ್ರಿ ಪ್ರಿಯಾಂಕ್ ಖರ್ಗೆ ಅವರು ಸಹಿತ ಬಾಯಿ ತೆಗೆದರೆ ಉದ್ದಟತನದ ಮಾತುಗಳನ್ನು ಆಡುತ್ತಾರೆ. ಬರಿ ಸಂಘ ಪರಿವಾರದ ಬಗ್ಗೆ ಮಾತನಾಡುತ್ತಾರೆ. ಬಿಜೆಪಿಯ ಬಗ್ಗೆ ಮಾತನಾಡುತ್ತಾರೆ. ಹಿಂದೆ ಮುಂದೆ ಏನು ಗೊತ್ತಿಲ್ಲದೆ ಮಾತಾಡಿ, ಹೀರೋ ಆಗೋಕೆ ಹೊರಟಿದ್ದಾರೆ. ಸಂಘ ಪರಿವಾರ 100 ವರ್ಷ ಇತಿಹಾಸ ಇರುವಂತಹ ಸಂಸ್ಥೆ ಅದು. ಇವರು ಕಣ್ಣು ತೆರೆದು ಇನ್ನೂ 100 ದಿನವೂ ಆಗಿಲ್ಲ ಎಂದು ಕಿಡಿಕಾರಿದರು.

ಅಂತವರು ಅಂತ ದೊಡ್ಡ ಸಂಸ್ಥೆ ಬಗ್ಗೆ ಮಾತನಾಡೋದು ಸರಿಯಲ್ಲ. ಇವತ್ತು ಕೆಪಿಸಿಸಿ ಅಧ್ಯಕ್ಷ ಇರಬಹುದು ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಇರಬಹುದು. ಕಾನೂನಿಗೆ ಗೌರವ ಕೊಟ್ಟು ತಲೆಬಾಗಿ, ಏನು ಕಾನೂನು ಜಾರಿಗೆ ತಂದಿದ್ದಾರೆ ಅದನ್ನು ಮಾಡಲೇಬೇಕು. ಅದನ್ನು ಮಾಡದಿದ್ದರೆ ನಾವು ದೇಶಾದ್ಯಂತ ಬರುವಂತ ದಿನದಲ್ಲಿ ಮತ್ತೆ ಅವರ ವಿರುದ್ಧ ಹೋರಾಟ ಮಾಡುವ ಅನಿವಾರ್ಯತೆ ಬರುತ್ತದೆ. ಅದಕ್ಕೆ ಅವಕಾಶ ಮಾಡಿಕೊಡಬೇಡಿ ಕಾನೂನಿಗೆ ಗೌರವ ಕೊಡಬೇಕೆಂದು ವಿನಂತಿ ಮಾಡಿಕೊಳ್ಳುತ್ತೇನೆ ಎಂದರು.