ಕಾಂಗ್ರೆಸ್‌ ಗೆಲುವಿನಿಂದ ಬಿಜೆಪಿ ದೂಳಿಪಟ: ಸೋಮಶೇಖರ್

| Published : Nov 24 2024, 01:47 AM IST

ಸಾರಾಂಶ

ಆನಂದಪುರ ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ವಿಜಯೋತ್ಸವವನ್ನು ಆಚರಿಸಿದರು.

ಉಪಚುನಾವಣೇಲಿ ಕಾಂಗ್ರೆಸ್ ಜಯಬೇರಿ, ಆನಂದಪುರದಲ್ಲಿ ವಿಜಯೋತ್ಸವ

ಕನ್ನಡಪ್ರಭ ವಾರ್ತೆ ಆನಂದಪುರ

ರಾಜ್ಯ ಸರ್ಕಾರದ ಐದು ಗ್ಯಾರಂಟಿ ಹಾಗೂ ಅಭಿವೃದ್ಧಿಗೆ ಮತದಾರರು ಮತನೀಡಿ ಉಪಚುನಾವಣೆಯ ಮೂರೂ ಕ್ಷೇತ್ರದಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಗೆಲುವು ನೀಡಿದ್ದಾರೆ. ಇದರಿಂದ ರಾಜ್ಯದಲ್ಲಿ ಬಿಜೆಪಿ ದೂಳಿಪಟವಾಗಿದೆ ಎಂದು ಸೋಮಶೇಖರ್ ಲಗ್ಗೆರೆ ತಿಳಿಸಿದರು.

ಶನಿವಾರ ಸಂಜೆ ಆನಂದಪುರ ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್ ಪಕ್ಷದ ವಿಜಯೋತ್ಸವದಲ್ಲಿ ಮಾತನಾಡಿ, ರಾಜ್ಯದ ಜನತೆ ಕಾಂಗ್ರೆಸ್ ಪಕ್ಷದ ಆಡಳಿತವನ್ನು ಮೆಚ್ಚಿ ಮತದಾನ ಮಾಡಿದ್ದಾರೆ. ಈ ಮೂರೂ ಕ್ಷೇತ್ರಗಳ ಗೆಲುವಿನಿಂದ ಕಾರ್ಯಕರ್ತರಲ್ಲಿ ಮತ್ತಷ್ಟು ಉಮ್ಮಸ್ಸು ಹೆಚ್ಚಿದೆ ಎಂದು ಹೇಳಿದರು.

ಎನ್.ಉಮೇಶ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಹಾಗೂ ಅಭಿವೃದ್ಧಿಯನ್ನು ಕಂಡು ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ ಎಂದರು.

ಲಿಂಗರಾಜ್ ಮಾತನಾಡಿ, ಕೋಮುವಾದಿ ಪಕ್ಷವಾದ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ತರುವಲ್ಲಿ ಕಾರ್ಯಕರ್ತರ ಉತ್ಸಾಹ ಹೆಚ್ಚಿದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಗಜೇಂದ್ರ ಯಾದವ್, ವಿಜಯ್ ಕುಮಾರ್, ಸಿರಿಜಾನ್, ಅಮೀರ್, ರೆಹಮತ್ತುಲ್ಲಾ, ರಾಮಚಂದ್ರ, ಕಲೀ ಮುಲ್ಲಾ ಖಾನ್, ಹಾಗೂ ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.