ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲವು ನಿಶ್ಚಿತ: ಪೊನ್ನಣ್ಣ ವಿಶ್ವಾಸ

| Published : Feb 12 2024, 01:35 AM IST

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲವು ನಿಶ್ಚಿತ: ಪೊನ್ನಣ್ಣ ವಿಶ್ವಾಸ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿಯವರು ಬರೀ ರಾಜಕೀಯ ಮಾಡಿದರೇ ಹೊರತು ಅಭಿವೃದ್ದಿ ಮಾಡಲಿಲ್ಲ. ನಾವು ಬರೀ ಅಭಿವೃದ್ಧಿ ಮಾಡುತ್ತೇವೆಯೇ ಹೊರತು ರಾಜಕೀಯ ಮಾಡುತ್ತಿಲ್ಲ ಎಂದು ಶಾಸಕ ಪೊನ್ನಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೊಡಗು- ಮೈಸೂರು ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 20 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಸಂಪಾಜೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗು- ಮೈಸೂರು ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಾಲಾಗಲಿದೆ. ಕಳೆದ ಹತ್ತು ವರ್ಷಗಳಲ್ಲಿ ನಿಷ್ಕ್ರಿಯ ಸಂಸದನನ್ನು ಕ್ಷೇತ್ರದ ಜನರು ನೋಡಿದ್ದಾರೆ. ಹತ್ತು ವರ್ಷಗಳಲ್ಲಿ ಜನಪರವಾದ ಯಾವುದೇ ನೀತಿಯನ್ನು ಕೇಂದ್ರದಿಂದ ರೂಪಿಸುವಂತಹ ಕೆಲಸ ಮಾಡಲಿಲ್ಲ. ಕ್ಷೇತ್ರದ ಸಂಸದರ ನಡೆ, ನುಡಿಯನ್ನು ಕ್ಷೇತ್ರದ ಜನರು ವಿರೋಧಿಸುತ್ತಿದ್ದಾರೆ ಎಂದರು. ಅಭಿವೃದ್ದಿ ಕಾರ್ಯಗಳ ಬಗ್ಗೆ ಬಿಜೆಪಿಯವರು ಶ್ವೇತಪತ್ರ ಕೇಳುವ ಮುಂಚೆಯೇ ನಾವು ಅಭಿವೃದ್ಧಿ ಕಾರ್ಯಗಳ ಮಾಹಿತಿ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದೇವೆ. ಬಿಜೆಪಿ ಅವರು ಮಾಡದ ಕೆಲಸವನ್ನು ಇವತ್ತು ರಾಜ್ಯ ಮತ್ತು ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಇದನ್ನು ಜೀರ್ಣಿಸಿಕೊಳ್ಳಲು ಬಿಜೆಪಿಯವರಿಗೆ ಸಾಧ್ಯವಾಗುತ್ತಿಲ್ಲ. ಬಿಜೆಪಿಯವರು ಬರೀ ರಾಜಕೀಯ ಮಾಡಿದರೇ ಹೊರತು ಅಭಿವೃದ್ದಿ ಮಾಡಲಿಲ್ಲ. ನಾವು ಬರೀ ಅಭಿವೃದ್ಧಿ ಮಾಡುತ್ತೇವೆಯೇ ಹೊರತು ರಾಜಕೀಯ ಮಾಡುತ್ತಿಲ್ಲ ಎಂದು ಹೇಳಿದರು. ಹತ್ತು ವರ್ಷ ಬೇಡ ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದ ಸಂಸದರು ಕೊಡಗಿನಲ್ಲಿ ಎಷ್ಟು ದಿನ ವಾಸ್ತವ್ಯ ಹೂಡಿದ್ದಾರೆ. ಜನರ ಸಮಸ್ಯೆಯನ್ನು ಎಷ್ಟು ಆಲಿಸಿದ್ದಾರೆ. ಸಮಸ್ಯೆಗಳಿಗೆ ಎಷ್ಟು ಸ್ಪಂದಿಸಿದ್ದಾರೆಂದು ಮಾಹಿತಿ ನೀಡಲಿ ಶಾಸಕ ಪೊನ್ನಣ್ಣ ತೀಕ್ಷ್ಣವಾಗಿ ಪ್ರಶ್ನಿಸಿದರು. ನಾನು ವಿನಾಕಾರಣ ಟೀಕೆ ಮಾಡುವುದಿಲ್ಲ. ವೈಯಕ್ತಿಕವಾಗಿ ಮತ್ತು ವ್ಯಂಗ್ಯವಾಗಿ ಮಾತನಾಡಲು ಹೋಗುವುದಿಲ್ಲ. ಅವರವರ ಸಂಸ್ಕೃತಿಯನ್ನು ಭಾಷೆ ಬಿಂಬಿಸುತ್ತದೆ. ಭಾವನೆಗಳ ರಾಜಕಾರಣವನ್ನು ಜನರು ಒಪ್ಪುವುದಿಲ್ಲ ಎಂದರು.